ರಾಹುಲ್‌ ಗಾಂಧಿ ಇಂದು ಮುಂದಿನ ವಿಧಾನಸಭೆ ಚುನಾವಣೆಗೆ ಪಂಜಾಬ್‌ನ ಮುಖ್ಯಮಂತ್ರಿ!

ಚಂಡೀಗಢ, ಫೆಬ್ರವರಿ 06: ಕಾಂಗ್ರೆಸ್‌ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಇಂದು ಮುಂದಿನ ವಿಧಾನಸಭೆ ಚುನಾವಣೆಗೆ ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್‍ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. “ಕೆಲವು ನಾಯಕರು ಸಮಾಜಕ್ಕಾಗಿ ಹೋರಾಡುತ್ತಾರೆ, ಇತರ ನಾಯಕರು ತಮಗಾಗಿ ಮಾತ್ರ ಹೋರಾಡುತ್ತಾರೆ. ಕೆಲವೇ ದಿನಗಳಲ್ಲಿ ನಾಯಕನ ರಚನೆಯಾಗುವುದಿಲ್ಲ. ನಾಯಕರು ಹೋರಾಟಗಳಿಂದ ಹುಟ್ಟುತ್ತಾರೆ. ಸಿದ್ದು, ಚನ್ನಿ, ಜಾಖರ್ ಎಲ್ಲರೂ ಕಷ್ಟಪಟ್ಟಿದ್ದಾರೆ, ಇದರಿಂದ ಕಲಿತಿದ್ದಾರೆ,” ಎಂದು ಹೇಳಿದ್ದಾರೆ.”ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ನನ್ನಲ್ಲಿ ಹೇಳಲಾಯಿತು. ಆದರೆ ಇದು ಇದು ರಾಹುಲ್ ಗಾಂಧಿಯವರ ನಿರ್ಧಾರವಲ್ಲ ಪಂಜಾಬ್‌ನ ನಿರ್ಧಾರ,” ಎಂದು ಕೂಡಾ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಪಂಜಾಬ್‌ ಕಾಂಗ್ರೆಸ್‌ ಘಟಕದ ಮುಖ್ಯಸ್ಥ, ಸಿಎಂ ಆಕಾಂಕ್ಷಿ ನವ್‌ಜೋತ್‌ ಸಿಂಗ್‌ ಸಿಧು, “ಇಂದು ಮುಖ್ಯಮಂತ್ರಿಯನ್ನು ಘೋಷಣೆ ಮಾಡುವ ಸುಸಂದರ್ಭ,” ಎಂದು ಹೇಳಿದ್ದರು.”ಇದು ಎಲ್ಲ ಗೊಂದಲಗಳನ್ನು ನಿವಾರಣೆ ಮಾಡಿ, ಸಿಎಂ ಘೋಷಣೆ ಮಾಡುವ ಸಮಯವಾಗಿದೆ. ಯಾರು ಗೊಂದಲವನ್ನು ಹುಟ್ಟು ಹಾಕುತ್ತಾರೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ,” ಎಂದು ಎಚ್ಚರಿಕೆಯನ್ನು ನೀಡಿದ್ದರು. ಈ ಬೆನ್ನಲ್ಲೇ ಎದ್ದು ಬಂದ ಚರಣ್‌ಜೀತ್‌ ಸಿಂಗ್‌ ಚನ್ನಿ, ನವಜೋತ್‌ ಸಿಂಗ್‌ ಸಿಧುರನ್ನು ಅಪ್ಪಿದ್ದರು.ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಮೂಲಕ ಈ ಸಮೀಕ್ಷೆ ನಡೆದಿದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮತದಾರರಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಒಂದನೇ ಆಯ್ಕೆ ನವಜೋತ್ ಸಿಂಗ್ ಸಿಧು, ಎರಡನೇ ಆಯ್ಕೆ ಚರಣ್‌ಜೀತ್‌ ಸಿಂಗ್‌ ಚನ್ನಿ ಹಾಗೂ ಮೂರನೇ ಆಯ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಬೇಡ ಎಂಬುವುದಾಗಿತ್ತು. ಇನ್ನು ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಎಐಸಿಸಿ ಮುಖಂಡರು ಹಾಗೂ ಸಮೀಕ್ಷಾ ತಂಡಗಳ ಮೂಲಕವೂ ಪ್ರತಿಕ್ರಿಯೆ ಕೇಳಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಮತ ನೀಡುವ ಮೂಲಕ ಕಾಂಗ್ರೆಸ್‌ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಮ್ಲಾ: ಹಿಮದಿಂದ ಆವೃತವಾದ ಬೆಟ್ಟಗಳನ್ನು ಅನುಭವಿಸಲು ಪ್ರವಾಸಿಗರು ರೈಲಿನಲ್ಲಿ ಧಾವಿಸುತ್ತಾರೆ

Sun Feb 6 , 2022
  ಶಿಮ್ಲಾ (ಹಿಮಾಚಲ ಪ್ರದೇಶ) [ಭಾರತ], ಫೆಬ್ರವರಿ 6 (ANI): ಹಿಮದಿಂದ ಆವೃತವಾದ ಉತ್ತರ ಭಾರತದ ಬೆಟ್ಟದ ಪಟ್ಟಣ ಶಿಮ್ಲಾದಲ್ಲಿ ಪಾರಂಪರಿಕ ರೈಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಎಲ್ಲಾ ಆರು ಪ್ರಯಾಣಿಕರ ರೈಲುಗಳು ಕಲ್ಕಾ-ಶಿಮ್ಲಾ ರೈಲುಮಾರ್ಗದಲ್ಲಿ ಓಡುತ್ತಿವೆ, ಪ್ರವಾಸಿಗರು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳ ಸುಂದರವಾದ ದೃಶ್ಯಗಳನ್ನು ಹಿಡಿಯಲು ರೈಲುಗಳನ್ನು ಹತ್ತಲು ಧಾವಿಸುತ್ತಾರೆ. ರೈಲುಗಳು ಶಿಮ್ಲಾಕ್ಕೆ ಹೋಗುವ ಪ್ರವಾಸಿಗರಿಗೆ ಪರ್ಯಾಯ ಸಾರಿಗೆ ಮಾಧ್ಯಮವಾಗಿದ್ದು, ರೈಲು ಸೇವೆಗಳು ಇಂದು ಪೂರ್ಣ […]

Related posts

Advertisement

Wordpress Social Share Plugin powered by Ultimatelysocial