ರಾಹುಲ್ ದ್ರಾವಿಡ್ ಅಚ್ಚರಿ ಸಲಹೆ ಬಹಿರಂಗಡಿಸಿದ ವೃದ್ಧಿಮಾನ್ ಸಹಾ

ನಾನು ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಯೋಚಿಸುವಂತೆ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ ಎಂದು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದ ನಂತರ ವೃದ್ಧಿಮಾನ್ ಸಹಾ ಬಹಿರಂಗಪಡಿಸಿದ್ದಾರೆಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾದಿಂದ ಕೈಬಿಟ್ಟ ನಂತರ ರಾಹುಲ್ ದ್ರಾವಿಡ್ ಅವರ ಸಲಹೆಯನ್ನು ವೃದ್ಧಿಮಾನ್ ಸಹಾ ಬಹಿರಂಗಪಡಿಸಿದ್ದಾರೆ.ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ನಾಲ್ಕು ಭಾರತೀಯ ಅನುಭವಿ, ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೇಗಿ ಇಶಾಂತ್ ಶರ್ಮಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಅವರನ್ನು ಕೈಬಿಡಲು ನಿರ್ಧರಿಸಿದೆ.ಆದಾಗ್ಯೂ, ಸಹಾ ಅವರನ್ನು ತಂಡದಿಂದ ಹೊರಗಿಡಲು ಚೇತನ್ ಶರ್ಮಾ ಸ್ಪಷ್ಟವಾದ ಕಾರಣವನ್ನು ನೀಡಿಲ್ಲ, ರಣಜಿ ಟ್ರೋಫಿ ಕಾರಣದಿಂದ ಸಹಾ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ. ಯಾವ ಆಧಾರದ ಮೇಲೆ ಅವರನ್ನು ಕೈಬಿಡಲಾಗಿದೆ ಎಂದು ನಾನು ನಿಮಗೆ ಹೇಳಲಾರೆ. ಅದು ಆಯ್ಕೆಗಾರರಿಗೆ ಬಿಟ್ಟ ವಿಷಯ. ಸಹಾ ಅವರಿಗೆ ಮೊದಲೇ ಹೇಳಲಾಗಿತ್ತು. ಭಾರತ ತಂಡಕ್ಕೆ ಏಣಿಯಾಗಿರುವ ರಣಜಿ ಟ್ರೋಫಿಯಲ್ಲಿ ಆಡಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.ಆದರೆ, ಸಹಾ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.ವೃದ್ಧಿಮಾನ್ ಸಹಾ ಅವರು ರಾಹುಲ್ ದ್ರಾವಿಡ್ ಅವರ ಸಲಹೆಯನ್ನು ಬಹಿರಂಗಪಡಿಸಿದ್ದು, ತಂಡದಿಂದ ಹೊರಗಿಟ್ಟಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಕೈಬಿಡುವ ಬಗ್ಗೆ ಆಯ್ಕೆದಾರರು ಮೊದಲೇ ತಿಳಿಸಿದ್ದರು. ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಪರಿಗಣಿಸಲು ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.ಇನ್ನು ಮುಂದೆ ನನ್ನನ್ನು ಪರಿಗಣಿಸಲಾಗುವುದಿಲ್ಲ ಎಂದು ತಂಡದ ಆಡಳಿತವು ನನಗೆ ಹೇಳಿದೆ. ನಾನು ಭಾರತ ತಂಡದ ಭಾಗವಾಗಿದ್ದಷ್ಟು ದಿನ ಇದನ್ನು ಹೇಳಲು ಸಾಧ್ಯವಾಗಲಿಲ್ಲ. ಕೋಚ್ ರಾಹುಲ್ ದ್ರಾವಿಡ್ ಕೂಡ ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದ್ದಾರೆ ಎಂದು ಸಹಾ ಬಹಿರಂಗಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ.ಮನೆ ಮದ್ದು!

Sun Feb 20 , 2022
ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ.ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಗುಣವಿದೆ. ಇದಕ್ಕೆ ಅರ್ಧ ಚಮಚ ಉಪ್ಪು ಹಾಕಿ.ಇದು ವಸಡುಗಳನ್ನು ಆರೋಗ್ಯವಾಗಿಸುತ್ತದೆ. ಇದು ಹಲ್ಲುಗಳು ಹೊಳೆಯುವಂತೆ ಮಾಡುತ್ತದೆ.ಈ ಮಿಶ್ರಣಕ್ಕೆ ಒಂದು ಚಿಟಿಕೆ ಅಡುಗೆ ಸೋಡಾವನ್ನು ಬೆರೆಸಿಕೊಳ್ಳಿ. ಕಾಲು ಚಮಚದಷ್ಟು ಹಾಕಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು […]

Advertisement

Wordpress Social Share Plugin powered by Ultimatelysocial