ಪ್ರತಿ ಗ್ರಾಮ ಗ್ರಾಮಕ್ಕೆ ಯುವಕರು ಒಗ್ಗೂಡಿಸಿ ಅರಿವು ಮೂಡಿಸುತ್ತಿರುವ ಎಸ್ಎಫ್ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಚಿದಾನಂದ್ ಕರಿಗೂಳಿ

ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಇಂದು ನಡೆದ ಎಸ್ ಎಫ್ ಐ ಹಾಗೂ ಡಿ ವೈ ಎಫ್ ಐ ಒಳಗೊಂಡು ನಿರುದ್ಯೋಗಿ ಹಾಗೂ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದ ಜಿಲ್ಲಾ ಸಂಚಾಲಕ ಚಂದ್ರು ಗೌಡ ಅವರು ಮಾತನಾಡಿ ನಮ್ಮ ಹೋರಾಟ ಏನು ಎಂದರೆ ನಮ್ಮ ದೇಶದಲ್ಲಿ ನಿರುದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯುವುದರಲ್ಲಿ ಬಡಮಕ್ಕಳು ಹಿಂದೆ ಬಿದ್ದಿದ್ದು ಅವರ ಕಲ್ಯಾಣಕ್ಕಾಗಿ ನಾವು ಸಂಘಟನೆಯನ್ನು ಹಳ್ಳಿಹಳ್ಳಿಯಲ್ಲಿ ಪ್ರಾರಂಭ ಮಾಡಿ ಅವರನ್ನು ಅರಿವು ಮೂಡಿಸುತ್ತಿರುವ ಕೆಲಸ ಮಾಡುತ್ತಿರುವುದು ನಮಗೆ ಸ್ವಾಗತ ಹಾರ ಹಾಗೂ ಸಂತೋಷದ ವಿಷಯವಾಗಿದ್ದು ನಮ್ಮ ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕಿನ ಹಳ್ಳಿ ಹೋಬಳಿ ಕೇಂದ್ರಗಳಲ್ಲೂ ಸಂಘಟನೆಯನ್ನು ಬಲಿಷ್ಠಗೊಳಿಸುವ ನಮ್ಮ ಉದ್ದೇಶವಾಗಿದ್ದು ನಮ್ಮ ಹಿರಿಯರ ಮಾರ್ಗದರ್ಶನದ ಮುಖಾಂತರ ನಾವುಗಳು ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದ್ದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಮುಂಬರುವ ದಿನಗಳಲ್ಲಿ ಆಲೋಚನೆ ಮತ್ತು ಅರಿವಿನ ಮುಖಾಂತರ ಮುಂಗಡಗಳನ್ನು ಬಲಪಡಿಸಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಅವಕಾಶವನ್ನು ವಂಚಿತರಾಗದಿರಲಿ ಅಂದು ನಮ್ಮ ಆಶಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ .
ವಕೀಲರಾದ ಜುನೈದ್ ಮರ್ಚೇಡ್ .
ತಾಲ್ಲೂಕು ಕಾರ್ಯದರ್ಶಿಯಾದ ಪ್ರತಾಪ್ ರೆಡ್ಡಿ .
ಕವಿತಾಳ ಹೋಬಳಿ ಅಧ್ಯಕ್ಷ ನಾಗ್ ಮೋಹನ್ ಸಿಂಗ್ ಹಾಗೂ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಂತಿಮ ಹಂತದ ಚಿತ್ರೀಕರಣ ಮುಗಿಸಿದ 'ರಂಗಸಮುದ್ರ'

Thu Jul 21 , 2022
ಹೊಯ್ಸಳ ಕ್ರಿಯೇಷನ್ಸ್ ನಿಂದ ಕೆ ಆರ್ ಹೊಯ್ಸಳ ನಿರ್ಮಿಸುತ್ತಿರುವ ‘ರಂಗಸಮುದ್ರ’ ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಮುಗಿಸಿ, ಚಿತ್ರತಂಡ ಮಂಗಳವಾರ ಕುಂಬಳಕಾಯಿ ಒಡೆಯಿತು. ಶೇ.85ರಷ್ಟು ಚಿತ್ರೀಕರಣ ರಾಜ್ಯದ ವಿವಿದೆಡೆಗಳಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಚಿತ್ರದ ಅಂತಿಮ ಹಂತದ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನದಲ್ಲಿ ಹಿರಿಯ ಛಾಯಾಗ್ರಾಹಕ ಗಿರಿ ಚಿತ್ರೀಕರಿಸಿಕೊಂಡರು. ರಂಗಾಯಣ ರಘು, ಸಂಪತ್ ರಾಜ್,ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ […]

Related posts

Advertisement

Wordpress Social Share Plugin powered by Ultimatelysocial