ರಾಜಧಾನಿಯಲ್ಲಿ ಮುಂದಿನ ನಾಲ್ಕು ದಿನ ಮಳೆಯ ಅಲರ್ಟ್!

 

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿರುಗಾಳಿ, ಮಿಂಚು ಗುಡುಗು ಸಹಿತ ಮಳೆಯಾಗುತ್ತಿದೆ.

ನಿನ್ನೆಯೂ ಸಹ ರಾಜಧಾನಿಯಲ್ಲಿ ಸಂಜೆ ಆಗುತ್ತಿದ್ದಂತೆ ರಾಜಾಜಿ ನಗರ, ವಿಧಾನಸೌಧ, ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದೆ.

ಕರ್ನಾಟಕದ ದಕ್ಷಿಣ ಒಳಭಾಗ ಮತ್ತು ಕರಾವಳಿ ಪ್ರದೇಶ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ. ಮೇ 9ರವರೆಗೆ ರಾಜಧಾನಿಯಲ್ಲಿ ಮಳೆಯನ್ನು ಕಾಣಲಿದ್ದೇವೆ.

ಉಷ್ಣ ವಲಯದಲ್ಲಿ ದಿಢೀರ್ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ ಎಂದು IMD ಹೇಳಿದೆ.

ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಗರಿಷ್ಠ 32 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ನಾಳೆಯೂ ಇದೇ ರೀತಿಯ ವಾತಾವರಣ ಇರಲಿದೆ.

ಇಂದು ಮಧ್ಯಾಹ್ನ 12 ಗಂಟೆವರೆಗೆ ಬಿಸಿಲು ಇರಲಿದ್ದು, ನಂತರ ಮಳೆಯ ವಾತಾವರಣ ಕಾಣಲಿದೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮಳೆಯಾಗುವ ಸಾಧ್ಯತೆಗಳಿವೆ.

ಹುಬ್ಬಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಆಟೋ ಮೇಲೆ ಮರ ಬಿದ್ದು, ಓರ್ವ ವ್ಯಕ್ತಿ ಮೃತ ಪಟ್ಟರೆ, ಚಿತ್ರದುರ್ಗದಲ್ಲಿ (Chitradurga) ಸಿಡಿಲಿಗೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಸೋನಿಯಾಗಾಂಧಿ ನಗರದ ನಿವಾಸಿ, ರೂಬಿ ಮೋರಿಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೋರ್ವ ಪ್ರಯಾಣಿಕನಿಗೆ ಗಾಯಗಳಾಗಿವೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗುಡುಗು, ಸುಡಿಲು ಸಹಿತ ಮಳೆ ಆಗಿದೆ. ಈ ವೇಳೆ ಸಿಡಿಲು ಬಡಿದು ಜಮೀನಲ್ಲಿದ್ದ ತಾಯಿ ಮಗ ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ಮೇಗಳಹಟ್ಟಿಯಲ್ಲಿ ನಡೆದಿದೆ. ಮಾರಕ್ಕ (38) ಪುತ್ರ ವೆಂಕಟೇಶ (16) ಸಿಡಿಲಿಗೆ ಬಲಿಯಾದವರು

ನಂದಿಬೆಟ್ಟದ ಪ್ರವೇಶ ದ್ವಾರದ ಬಳಿಯೇ ಮರ ಬಿದ್ದಿದ್ದು, ನಂದಿಬೆಟ್ಟದ ಮೇಲ್ಬಾಗಕ್ಕೆ ಹೋಗುವ ಬರುವ ರಸ್ತೆ ಸಂಪರ್ಕ ಕಡಿತಗೊಂದಿದ್ದು, ಇದರಿಂದ ನಂದಿಬೆಟ್ಟದಿಂದ ಕೆಳಗೆ ಬರಲು ಮೇಲೆ ಇರುವ ಪ್ರವಾಸಿಗರು ಪರದಾಡುವಂತೆ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್

Thu May 5 , 2022
ಬೆಂಗಳೂರು : ಅಕ್ರಮ ನೇಮಕಾತಿಯಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರಿಗೆ ತುಂಬಾ ಅನುಭವವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿ ಅಕ್ರಮದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಿಗೆ ತುಂಬಾ ಅನುಭವವಿದೆ. ಪರೀಕ್ಷೆ ಬರೆಯದ ನರ್ಸ್ ಗಳಿಗೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈ ಕೆಲಸಗಳಿಗೆ ಅವರಿಗೆ ಪ್ರತ್ಯೇಕ ಹೆಸರಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಅಶ್ವತ್ ನಾರಾಯಣ ಅವರು ಈಗ ನಾನು ವಿಶ್ವ ಒಕ್ಕಲಿಗೆ […]

Advertisement

Wordpress Social Share Plugin powered by Ultimatelysocial