ರಾಜ್ಯವನ್ನ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲರ ಸಲಹೆ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲರ ಅನುಭವ, ಸಲಹೆ ಹಾಗೂ ಮಾರ್ಗದರ್ಶನದ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಸೆಂಚುರಿ ಕ್ಲಬ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.ರಾಜ್ಯದ ಮುಖ್ಯಮಂತ್ರಿಯಾಗಿ ನನಗೆ ನನ್ನದೇ ಜವಾಬ್ದಾರಿಗಳಿವೆ. ನಾನು ಅನೇಕ ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಕಟ್ಟಬೇಕು. ಸರತಿಯ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೂ ತನ್ನ ಅಹವಾಲುಗಳನ್ನು ಆಲಿಸುವ ಸರ್ಕಾರ ಇದೆ ಎನಿಸುವಂತೆ ಕೆಲಸ ಮಾಡಬೇಕು ಎನ್ನುವ ಆಶಯ ನಮ್ಮ ಸರ್ಕಾರದ್ದು ಎಂದರು.ರಾಜ್ಯದ ಆರ್ಥಿಕತೆ ಬೆಳೆಯಲು ಎಲ್ಲಾ ಕ್ಷೇತ್ರದ ಜನ ಬೆಳೆದು, ಅಭಿವೃದ್ಧಿ ಹೊಂದಬೇಕು. ಜನರ ಶ್ರಮದಿಂದಲೇ ಆರ್ಥಿಕತೆ ನಿಜವಾಗಿಯೂ ಅಭಿವೃದ್ಧಿಯಾಗುವುದು ಎಂದು ಅವರು ಅಭಿಪ್ರಾಯಪಟ್ಟರು.ಸೆಂಚುರಿ ಕ್ಲಬ್ ನಲ್ಲಿ ತಾವು ಕಳೆದ ಸಮಯವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಸೆಂಚುರಿ ಕ್ಲಬ್ ಗೆ ತನ್ನದೇ ಸುದೀರ್ಘ ಇತಿಹಾಸವಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರಿದ್ದ ವ್ಯಕ್ತಿತ್ವ ಅಪರೂಪದ್ದು. ಅವರಿಂದ ಪ್ರಾರಂಭಗೊಂಡ ಈ ಕ್ಲಬ್ ಅತ್ಯಂತ ವೈಶಿಷ್ಟ್ಯಪೂರ್ಣ ಎಂದರಲ್ಲದೆ ಈ ಪರಂಪರೆಯನ್ನು ನಾವು ಮುಂದುವರಿಸಬೇಕು. ಬೆಂಗಳೂರು ಮಾತ್ರವಲ್ಲ ದೇಶದಲ್ಲಿಯೇ ಇದು ಅತ್ಯುತ್ತಮ ಕ್ಲಬ್ ಎಂದರು.

Please follow and like us:

Leave a Reply

Your email address will not be published. Required fields are marked *

Next Post

ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ ಎಂದ ಮಿಶ್ರಾ

Wed Oct 6 , 2021
ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿದ ಕಾರು ಸ್ಥಳದಲ್ಲಿದ್ದ ರೈತರ ಮೇಲೆ ಹರಿದಿದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಸಮರ್ಥನೆ ಮಾಡಿಕೊಂಡಿದ್ದಾರೆ. ಲಖೀಂಪುರ ಖೇರಿ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಮಗ ಆಶಿಶ್ ಮಿಶ್ರಾ ಪರ ಹೇಳಿಕೆಯನ್ನು ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಅಲ್ಲಿ ಇರಲಿಲ್ಲ ಎಂದು ಮತ್ತೆ ಪುನರುಚ್ಛರಿಸಿರುವ ಅಜಯ್ ಮಿಶ್ರಾ, ಕಾರು ಕಂಟ್ರೋಲ್ ತಪ್ಪಿದ್ದರಿಂದ ಈ ಅವಘಢ ಸಂಭವಿಸಿದೆ ಎಂದು ಹೇಳಿದ್ದಾರೆ.   […]

Advertisement

Wordpress Social Share Plugin powered by Ultimatelysocial