ರಾಮ್​ ಗೋಪಾಲ್​ ವರ್ಮಾ ಮಾಡಿದ ಈ ಪೋಸ್ಟ್​​ ನೋಡಿ ಕಂಗನಾ ರಣಾವತ್​ ಸಖತ್​ ಖುಷಿ ಆಗಿದ್ದಾರೆ!

ಈ ಮಾತನ್ನು ಮೆಚ್ಚುಗೆಯ ರೀತಿ ಅವರು ಸ್ವೀಕರಿಸಿದ್ದಾರೆ.ನಟಿ ಕಂಗನಾ ರಣಾವತ್  ಅವರು ಇತ್ತೀಚಿನ ವರ್ಷಗಳಲ್ಲಿ ಗೆಲವು ಕಂಡಿಲ್ಲ.

ಅವರು ನಟಿಸಿದ ಎಲ್ಲ ಸಿನಿಮಾಗಳು ಸೋತಿವೆ. ಹಾಗಂತ ಅವರಿಗೆ ಬರುವ ಆಫರ್​ ಕಡಿಮೆ ಆಗಿಲ್ಲ. ಒಂದಕ್ಕಿಂತ ಒಂದು ಡಿಫರೆಂಟ್​ ಪಾತ್ರ ಅವರಿಗೆ ಸಿಗುತ್ತಲೇ ಇದೆ. ವಿವಾದದ ಮೂಲಕವೂ ಅವರು ಸದ್ದು ಮಾಡುತ್ತಿರುತ್ತಾರೆ. ಈಗ ಕಂಗನಾ ರಣಾವತ್​ ಅವರು ಎಮರ್ಜೆನ್ಸಿಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಫಸ್ಟ್​ ಲುಕ್​ ಟೀಸರ್​ ಈಗಾಗಲೇ ಧೂಳೆಬ್ಬಿಸಿದೆ. ನೈಜ ಘಟನೆ ಆಧರಿತ ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ಮಾಡುತ್ತಿದ್ದಾರೆ. ಆ ಕಾರಣದಿಂದ ‘ಎಮರ್ಜೆನ್ಸಿ’ ಮೇಲೆ ಸಿನಿಪ್ರಿಯರು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಈಗ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ  ಅವರು ಇಂದಿರಾ ಗಾಂಧಿ ಮತ್ತು ಕಂಗನಾ ರಣಾವತ್​ ನಡುವೆ ಸಾಮ್ಯತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

1984ರಲ್ಲಿ ಇಂದಿರಾ ಗಾಂಧಿ ನೀಡಿದ ವಿಶೇಷ ವಿಡಿಯೋ ಸಂದರ್ಶನದ ತುಣುಕನ್ನು ರಾಮ್​ ಗೋಪಾಲ್​ ವರ್ಮಾ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ಪಂಜಾಬ್​ನಲ್ಲಿ ಇದ್ದ ಪರಿಸ್ಥಿತಿಯ ಬಗ್ಗೆ ಇಂದಿರಾ ಗಾಂಧಿ ಮಾತನಾಡಿದ್ದರು. ಈ ಸಂದರ್ಶನವನ್ನು ಕಂಡು ಆರ್​ಜಿವಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಈ ವಿಡಿಯೋದಲ್ಲಿ ಇಂದಿರಾ ಗಾಂಧಿ ಅವರು ಕಂಗನಾ ರೀತಿ ಮಾಡ್ತಿದ್ದಾರೆ’ ಎಂದು ರಾಮ್​ ಗೋಪಾಲ್​ ವರ್ಮಾ ಕ್ಯಾಪ್ಷನ್​ ನೀಡಿದ್ದಾರೆ.

ಈ ಟ್ವೀಟ್​ ನೋಡಿ ಕಂಗನಾ ರಣಾವತ್​ ಸಖತ್​ ಖುಷಿ ಆಗಿದ್ದಾರೆ. ರಾಮ್​ ಗೋಪಾಲ್​ ವರ್ಮಾ ಅವರ ಈ ಮಾತನ್ನು ಮೆಚ್ಚುಗೆಯ ರೀತಿ ಅವರು ಸ್ವೀಕರಿಸಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕೆ ತಮ್ಮ ಆಯ್ಕೆ ಸೂಕ್ತವಾಗಿದೆ ಎಂಬುದನ್ನು ಕಂಗನಾ ಖಚಿತಪಡಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆ ಆದ ಫಸ್ಟ್​ ಲುಕ್​ ನೋಡಿರುವ ಎಲ್ಲರೂ ಅಚ್ಚರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

TCS, Infosys, HCL ಯು ಯುಎಸ್ ಆರ್ಥಿಕ ಹಿಂಜರಿತದ ಹೊಡೆತದಿಂದ ಜಾಗತಿಕ ಟೆಕ್ ವೆಚ್ಚದ ಮೇಲೆ ಪರಿಣಾಮ ಬೀರಲಿದೆ

Sun Jul 24 , 2022
ಯುಎಸ್ ಆರ್ಥಿಕತೆಯಲ್ಲಿ ಸಂಭವನೀಯ ಹಿಂಜರಿತದ ಮಾತುಕತೆಗಳು ಬ್ರೋಕರೇಜ್ ಮನೆಗಳೊಂದಿಗೆ ಎಳೆತವನ್ನು ಪಡೆಯುತ್ತಿದ್ದರೂ ಸಹ, ಇದು ಯುಎಸ್ ಮತ್ತು ಯುರೋಪ್ನ ಐಟಿ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಕರು ಭಾವಿಸುತ್ತಾರೆ ಮತ್ತು ಪ್ರತಿಯಾಗಿ, TCS, HCL Tech ಮತ್ತು Infosys ಸೇರಿದಂತೆ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ (IT) ಕಂಪನಿಗಳು. ಭಾರತೀಯ ಐಟಿ ಸಂಸ್ಥೆಗಳು ತಮ್ಮ ಆದಾಯದ ಸುಮಾರು 40 ಪ್ರತಿಶತದಷ್ಟು US ಮಾರುಕಟ್ಟೆಯನ್ನು ಅವಲಂಬಿಸಿವೆ. ಆರ್ಥಿಕ ಹಿಂಜರಿತದ ಸಾಧ್ಯತೆಯ […]

Advertisement

Wordpress Social Share Plugin powered by Ultimatelysocial