ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ

ಹಾವೇರಿ: ಯಾಲಕ್ಕಿ ಕಂಪಿನ ನಾಡಿನ ರಾಮಭಕ್ತ ಯುವಕ ನಗರದಿಂದ ಹನುಮ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ರಾಮಜನ್ಮಭೂಮಿ ಅಯೋಧ್ಯಾ ವರೆಗೆ ಸೈಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಇಂದು ಶ್ರೀ ಹುಕ್ಕೇರಿಮಠ ದಿಂದ ಶ್ರೀಗಳು ಹಾಗೂ ಗಣ್ಯ ಮಾನ್ಯರು ಚಾಲನೆ ನೀಡಿದರು.ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿವೇಕಾನಂದ ಶಿವಬಸಪ್ಪ ಇಂಗಳಗಿ

 

 

ತಮ್ಮೆಲ್ಲ ಒತ್ತಡದ ಕೆಲಸಗಳ ನಡುವೆ ದೇಶದ ಒಳಿತಿಗಾಗಿ ಸಂಕಲ್ಪ ಮಾಡಿಕೊಂಡು ಯಾತ್ರೆಯನ್ನು ಕೈಗೊಂಡಿದ್ದಾರೆ ,ಹಾವೇರಿಯಿಂದ ಪ್ರತಿನಿತ್ಯ100 ಕಿಲೋಮೀಟರ್ ವರೆಗೆ ಕ್ರಮಿಸಿ ಅಲ್ಲಿ ಸಿಗುವ ರಾಮಭಕ್ತರ ಮನೆಯಲ್ಲಿ ವಸತಿ ಮಾಡಿ ನಂತರದಲ್ಲಿ ಮತ್ತೆ ಪ್ರಯಾಣವನ್ನು ಬೆಳೆಸುತ್ತಾ ಒಟ್ಟಾರೆ 2000 ಕಿಲೋಮೀಟರ್ ಕ್ರಮಿಸಿ ಅಯೋಧ್ಯ ಶ್ರೀ ರಾಮನ ದಶ೯ನ ಪಡೆದು ಅಲ್ಲಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಬೇಕೆಂದು ಅವರ ಬಯಕೆ….

 

ಇವರು ಹಲವಾರು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಾ ಬಂದವರು BJP,RSS, ಭಜರಂಗದಳ ಹಾಗೂ ಅನೇಕ ಸಂಘಟನೆಗಳ ಮೂಲಕ ಜನಪರ ಕೆಲಸಗಳನ್ನು ಮಾಡಿದ್ದಾರೆ . ಸುಮಾರು ಎರಡು ಸಾವಿರ ಕಿಲೋಮೀಟರ್ ದಾರಿಯನ್ನು ಸೈಕಲ್ ಮೂಲಕ ಕ್ರಮಿಸುವ ದಂದರೆ ಸುಲಭದ ಮಾತಲ್ಲ .ಆದರೂ ಜನರ ಹಿತಕ್ಕಾಗಿ ತಾವು ಕೈಗೊಂಡ ನಿಲುವು ಪ್ರೇರಣೆಯ , ಇದು ಸಾಕಷ್ಟು ಯುವಕರಿಗೆ ಪ್ರೇರಣೆ ನಿಮ್ಮ ಈ ಸೈಕಲ್ ಯಾತ್ರೆಯು ಯಾವುದೇ ವಿಘ್ನ ಬಾರದಂತೆ ನಿರ್ವಿಘ್ನವಾಗಿ ಪೂರ್ಣಗೊಳ್ಳಲಿ ಎಂದು ನಮ್ಮೆಲ್ಲರ ಆಶಯ…ಶ್ರೀಗಳು ಸಾಧಕ ರತ್ನ ಲೋಗೋ ವನ್ನು ಸೈಕಲಗೆ ಅಳವಡಿಸುವ ಮೂಲಕ ಶ್ರೀ ಸದಾಶಿವ ಮಹಾಸ್ವಾಮಿಗಳು ಚಾಲನೆ ನೀಡಿದರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ್ ಕಲಕೋಟಿ, ಸಾಧಕ ರತ್ನ ಪೇಜಿನ ಗಣೇಶ ರಾಯ್ಕರ, ಧರ್ಮರಾಜ ಖಜ್ಜೂರಕರ್,ಶ್ರವಣ್ ಪಂಡಿತ್, ಮಲ್ಲಿಕಾರ್ಜುನ್ ಇಂಗಳಗಿ, ಗಣೇಶ ಅಜ್ಜನವರ, ಮನೋಜ ವೈದ್ಯ, ಪ್ರಭು ಹಿಟ್ನಳ್ಳಿ,ಪ್ರಶಾಂತ ದೊಡ್ಡಮನಿ, ಶಿವಕುಮಾರ್ ಲಂಬಿ, ಮಂಜು ಜೈನ್ ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

 

Please follow and like us:

Leave a Reply

Your email address will not be published. Required fields are marked *

Next Post

ಆರ್ಸಿಬಿ ತಂಡಕ್ಕೆ ಟಕ್ಕರ್ ಕೋಡಕ್ಕೆ ರೆಡಿಯಾದ: ಹೈದ್ರಬಾದ್ ಹುಡುಗರು

Wed Apr 14 , 2021
ಇವತ್ತು ನಡೆಯಲಿರುವ  IPLನ 6ನೇ ಪಂದ್ಯದಲ್ಲಿ RCB SRH  ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಒಂದು ಪಂದ್ಯ ಸೋತಿರುವ ಸನ್ ರೈಸರ್ಸ್  ಹೈದರಾಬ್ ತಂಡ ಆರ್ಸಿಬಿ ಸೋಲಿಸಲು ರಡಿಯಾಗಿದೆ.  ಮೊದಲ ಪಂದ್ಯ ಮುಂಬೈ ವಿರುದ್ಧ ಗೆದ್ದಿರುವ RCB ತಂಡ ತನ್ನ ಗೆಲುಯವಿನ ಲಯದಲ್ಲೇ ಮುಂದುವರೆಯಲು ಹವಣಿಸುತ್ತಿದೆ.. ಎಮ್.ಎ ಚಿಂದಬರಂ ಸ್ಟೇಡಿಯಂನಲ್ಲಿ ಮೊದಲ ಗೆಲುವುನ್ನು ಸಾಧಿಸಿದ್ದ RCB ತಂಡ, ಈ ಪಂದ್ಯದಲ್ಲೂ ಗೆಲುವು ಸಾಧಿಸೋ ತವಕದಲ್ಲಿದೆ.. ಇನ್ನು ಮೊದಲ ಪಂದ್ಯದಲ್ಲಿ ಸೋತಿರುವ ಹೈದರಾಬಾದ್ […]

Advertisement

Wordpress Social Share Plugin powered by Ultimatelysocial