ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಕಾರ್ಯಕ್ರಮ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ನೇರವೆರಿದ ಕಾರ್ಯಕ್ರಮ.ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಸಹಯೋಗದಲ್ಲಿ ಲಿಂಗತ್ವಧಾರಿತ ದೌರ್ಜನ್ಯವನ್ನು ನಿವಾರಣೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಕಾರ್ಯನಿರ್ವಹಕಾಧಿಕಾರಿ ಪ್ರವೀಣಕುಮಾರ ಸಾಲಿ ಉದ್ಘಾಟಸಿ ಚಾಲನೆ.ಮಾತನಾಡಿದ ಅವರು (ಇಓ ಪ್ರವೀಣಕುಮಾರ ):ಮಹಿಳೆಯರಿಗಾಗಿ 112 ಹಾಗೂ ಸೈಬರ್ ಸ್ಕಲ್ ಎಂಬ ಸಹಾಯವಾಣಿಯನ್ನು ಮಾಡಿದ್ದು ಯಾವುದೇ ಮಹಿಳೆಯರಿಗೆ ದೌರ್ಜನ್ಯವಾದಾಗ ಆ ಸಹಾಯವಾಣಿಯ ಸದುಪಯೋಗ ಪಡೆದುಕೊಂಡು ತಮಗಾದ ನೋವು ದೌರ್ಜನ್ಯ ಕುರಿತು ಹೇಳಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.ಪ್ರತಿಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಯಾರಿಂದಾನೋ ದೌರ್ಜನ್ಯವಾದಾಗ ಕಾನೂನು ನೆರವು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕುಂಬಾರ ಹಿರಿಯ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿಕ್ಕಮಠ ಹಿರಿಯ ಅಂಗನವಾಡಿ ಮೇಲ್ವಿಚಾರಕಿ ವೈಶಾಲಿ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: play.google.com/store/apps/det

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೆ ನೇಮಕಾತಿಗೆ ಮುಂದಾಗಿ: ಸೂಕ್ತ ಬೇಡಿಕೆ ಈಡೇರಿಸುವಂತೆ ಡಿಕ್ರೂಜ್ ಆಗ್ರಹ.

Fri Dec 16 , 2022
ಸರ್ಕಾರ ನೈಋತ್ಯ ರೈಲ್ವೆ ವಲಯದಲ್ಲಿನ ಹಾಗೂ ಭಾರತೀಯ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ನೇಮಕ ಮಾಡಬೇಕು. ಅಲ್ಲದೇ ನೈಋತ್ಯ ರೈಲ್ವೆ ಮಜ್ದೂರ್ ಯುನಿಯನ್ ಸದಸ್ಯರ ಹಾಗೂ ಎಸ್.ಡಬ್ಲೂ.ಆರ್ ಸಿಬ್ಬಂದಿಗಳ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು ಎಂದು ಎನ್.ಆರ್.ಎಂ.ಎಸ್ ಮುಖ್ಯಸ್ಥ ಡಾ.ಎ.ಎಂ.ಡಿಕ್ರೂಜ್ ಆಗ್ರಹಿಸಿದ್ದಾರೆ.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ನಾವು ಹೋರಾಟ ಮಾಡುತ್ತಲೇ ನಮ್ಮ ಹಕ್ಕುಗಳನ್ನು ಪಡೆಯುತ್ತಾ ಬಂದಿದ್ದೇವೆ. ಆದರೆ ಸರ್ಕಾರ ಮಾತ್ರ ಸೌಲಭ್ಯಗಳನ್ನು ಒದಗಿಸಲು ಮೀನಾಮೇಷ […]

Advertisement

Wordpress Social Share Plugin powered by Ultimatelysocial