ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲಾಗಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಫೋಟೊಶೂಟ್

 

ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲಾಗಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಫೋಟೊಶೂಟ್ ಮಾಡಿಸಿದ್ದು, ಚಿತ್ರಗಳು ಸಖತ್ ವೈರಲ್ ಆಗಿವೆ.

ರಣ್ವೀರ್‌ ಸಿಂಗ್‌ರ ಬೆತ್ತಲೆ ಚಿತ್ರಗಳು ವೈರಲ್ ಆಗುವ ಜೊತೆಗೆ ವಿವಾದವನ್ನೂ ಎಬ್ಬಿಸಿವೆ. ಬೆತ್ತಲೆಯಾಗಿ ಫೋಟೊಶೂಟ್ ಮಾಡಿಸಿಕೊಂಡಿರುವುದಕ್ಕೆ ರಣ್ವೀರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.

ಇದೀಗ ರಣ್ವೀರ್ ಸಿಂಗ್ ವಿರುದ್ಧ ದೂರು ಸಹ ದಾಖಲಾಗಿದೆ.

ಬೆತ್ತಲೆಯಾಗಿ ಚಿತ್ರಗಳನ್ನು ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಕ್ಕೆ ರಣ್ವೀರ್ ಸಿಂಗ್ ವಿರುದ್ಧ ಮುಂಬೈನ ಚೇಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಮಹಿಳೆಯರ ಭಾವನೆಗಳಿಗೆ ಧಕ್ಕೆ ಆರೋಪಮುಂಬೈನಲ್ಲಿ ಕೆಲಸ ಮಾಡುವ ಎನ್‌ಜಿಓ ಒಂದರ ಅಧಿಕಾರಿಯೊಬ್ಬರು ರಣ್ವೀರ್ ಸಿಂಗ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆತ್ತಲೆ ಚಿತ್ರಗಳನ್ನು ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ರಣ್ವೀರ್ ಸಿಂಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಎಫ್‌ಐಆರ್ ದಾಖಲಿಸಿಲ್ಲ

ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಚೆಂಬೂರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ, ”ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ ಆದರೆ ಎಫ್‌ಐಆರ್ ಮಾಡಲಾಗಿಲ್ಲ. ನಾವು ಪ್ರಕರಣವನ್ನು ಗಮನಿಸುತ್ತಿದ್ದೇವೆ, ಅಗತ್ಯವಿದ್ದಲ್ಲಿ ಮಾತ್ರವೇ ಎಫ್‌ಐಆರ್ ದಾಖಲಿಸಿಕೊಂಡು ನೊಟೀಸ್ ನೀಡುತ್ತೇವೆ” ಎಂದಿದ್ದಾರೆ. ರಣ್ವೀರ್ ಸಿಂಗ್ ವಿರುದ್ಧ ಕ್ರಮಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿಯೂ ಒತ್ತಾಯ ಮಾಡಿದ್ದಾರೆ.

ಬರ್ಟ್ ರೆನಾಲ್ಡ್ಸ್‌ಗೆ ಗೌರವ ಸಲ್ಲಿಸಲು ಚಿತ್ರ

ನಟ ಬರ್ಟ್ ರೆನಾಲ್ಡ್ಸ್ ಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಣ್ವೀರ್ ಸಿಂಗ್ ಈ ರೀತಿಯ ನಗ್ನ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಬರ್ಟ್ ರೆನಾಲ್ಡ್ಸ್ ಸಹ ನಗ್ನ ಚಿತ್ರದಿಂದ ಬಹಳ ಖ್ಯಾತಿಗಳಿಸಿದ್ದರು. ಅವರ ರೀತಿಯಲ್ಲಿಯೇ ರಣ್ವೀರ್ ಸಹ ನಗ್ನರಾಗಿ ಫೋಸು ಕೊಟ್ಟಿದ್ದಾರೆ. ಪೇಪರ್ ಹೆಸರಿನ ಮ್ಯಾಗಜೈನ್‌ಗಾಗಿ ರಣ್ವೀರ್ ಹೀಗೆ ಫೋಸು ನೀಡಿದ್ದಾರೆ. ಈ ವಿವಾದದಲ್ಲಿ ಹಲವು ಬಾಲಿವುಡ್ಡಿಗರು ರಣ್ವೀರ್‌ಗೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ.

ತಮಿಳು ನಟನ ನಗ್ನ ಚಿತ್ರ

ರಣ್ವೀರ್ ಸಿಂಗ್ ವಿವಾದ ಚಾಲ್ತಿಯಲ್ಲಿರುವಾಗಲೇ ಅವರಿಂದಲೇ ಸ್ಪೂರ್ತಿ ಪಡೆದು ತಮಿಳಿನ ನಟರೊಬ್ಬರು ಅದೇ ಮಾದರಿಯಲ್ಲಿ ಬೆತ್ತಲೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮಿಳು ನಟ ವಿಷ್ಣು ವಿಶಾಲ್ ಸಹ ಬೆತ್ತಲೆ ಚಿತ್ರ ಹಂಚಿಕೊಂಡಿದ್ದಾರೆ. ಆದರೆ ಹಾಸಿಗೆಯೊಂದನ್ನು ಖಾಸಗಿ ಅಂಗಗಳಿಗೆ ಅಡ್ಡಲಾಗಿಟ್ಟುಕೊಂಡಿದ್ದಾರೆ. ವಿಷ್ಣು ವಿಶಾಲ್‌ರ ಈ ಹಾಟ್ ಚಿತ್ರಗಳನ್ನು ಅವರ ಪತ್ನಿಯೇ ಆಗಿರುವ ಖ್ಯಾತ ಬ್ಯಾಡ್‌ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತೆಗೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು

Tue Jul 26 , 2022
  ಪದೇ ಪದೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಮಾರಕವಾಗಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ರೈತ ಸಂಘದ ವತಿಯಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ತಾಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ತಾಲೂಕು ಪಂಚಾಯಿತಿ ಕಚೇರಿಯಲ್ಲೆ ಅಡುಗೆ ತಯಾರಿಸಿ ಊಟ ಮಾಡಿ ಅಲ್ಲೇ […]

Advertisement

Wordpress Social Share Plugin powered by Ultimatelysocial