ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

 

 

ಮುಂಬೈ :ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಅಜ್ಜ ಹಾಗೂ ಚಿಕ್ಕಪ್ಪ ಕಳೆದ 5 ವರ್ಷಗಳಿಂದ ಕಿರುಕುಳ ನೀಡಿದ ಘಟನೆ ಪುಣೆದಲ್ಲಿ ನಡೆದಿದೆ.
11 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಹೋದರ, ಸಂತ್ರಸ್ತೆಯ ತಂದೆ (45) ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಜೊತೆಗೆ ಆಕೆಯ ಅಜ್ಜ(60) ಹಾಗೂ ಚಿಕ್ಕಪ್ಪ (25) ಕಳೆದ 5 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಮೂಲತಃ ಬಿಹಾರದವರಾಗಿದ್ದು, ಸದ್ಯ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಿನಿ ಸತ್ಪುಟೆ ಮಾತನಾಡಿ, ಬಾಲಕಿಯು ತನ್ನ ಶಾಲೆಯಲ್ಲಿ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಚರ್ಚೆಯಲ್ಲಿ ಮಾತನಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ.
ಕಳೆದ 5 ವರ್ಷಗಳಿಂದ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಹಾಗೂ ಕಿರುಕುಳ ನಡೆಯುತ್ತಿದೆ ಎಂದು ತಿಳಿಸಿದರು. ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ಸಂಭವಿಸಿರುವುದರಿಂದ ಮತ್ತು ಆರೋಪಿಗಳು ಪರಸ್ಪರರ ಕೃತ್ಯಗಳ ಬಗ್ಗೆ ತಿಳಿದಿರದ ಕಾರಣ, ಇದು ಸಾಮೂಹಿಕ ಅತ್ಯಾಚಾರದ ಪ್ರಕರಣವಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ.

Sat Apr 23 , 2022
ಕನ್ನಡಿಗರಾದ ನಮಗೆ ಬಿಸಿಬೇಳೆ ಬಾತ್   ರುಚಿ ಹೊಸದೇನಲ್ಲ. ಅಮ್ಮ ಬೆಳಗ್ಗಿನ ತಿಂಡಿಗೆ   ತಯಾರಿಸುವ ಈ ಅಡುಗೆಯ ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ. ಕೆಲಸ ಹುಡುಕಿ ಮನೆಯಿಂದ ದೂರ ಬಂದು ಸ್ನೇಹಿತರ ಜೊತೆ ಒಂದು ಬಾಡಿಗೆ ಮನೆ ಅಥವಾ ಫ್ಲಾಟ್‌ನಲ್ಲಿ ಇರುವಾಗ ಬಾಯಿ ರುಚಿಕರವಾದ ಆಹಾರ    ಬಯಸುತ್ತದೆ, ಆದರೆ ಮಾಡಲು ಗೊತ್ತಿರುವುದಿಲ್ಲ. ಈ ಬಿಸಿ ಬೇಳೆ ಬಾತ್ ಅಡುಗೆ ಮಾಡಲು ಕಲಿತರೆ ಸುಲಭವಾಗಿ ತಯಾರಿಸಬಹುದು ಮತ್ತು ಬಾಯಿಗೂ […]

Advertisement

Wordpress Social Share Plugin powered by Ultimatelysocial