ಮತ್ತೆ ವಿಜಯ್ ದೇವರಕೊಂಡಗೆ ಜೊತೆ ರಶ್ಮಿಕಾ!

ಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮೊದಲ ಬಾರಿ ಒಟ್ಟಿಗೆ ನಟಿಸಿ ಐದು ವರ್ಷಗಳಾಗಿದ್ದು, ಇವರಿಬ್ಬರ ಪ್ರೀತಿ ಬಗ್ಗೆ ಆಗಿನಿಂದಲೂ ಗುಸು-ಗುಸು ಹರಿದಾಡುತ್ತಲೇ ಇದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿಗೆ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಈ ಇಬ್ಬರ ಲಿಪ್‌ ಲಾಕ್ ದೃಶ್ಯವಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಆ ಬಳಿಕ ಇವರಿಬ್ಬರ ಜೋಡಿಗೆ ಇರುವ ಜನಪ್ರಿಯತೆ ಕಂಡು ಇಬ್ಬರನ್ನೂ ಒಟ್ಟಿಗೆ ಸೇರಿಸಿ ‘ಡಿಯರ್ ಕಾಮ್ರೆಡ್’ ಎಂಬ ಸಿನಿಮಾ ತೆಗೆಯಲಾಗಿತು. ಸಿನಿಮಾ ಬಗ್ಗೆ ಒಳ್ಳೆಯ ಕಮೆಂಟ್ಸ್ ಬಂದರೂ ಸಹ ಸಿನಿಮಾ ಹಿಟ್ ಆಗಲಿಲ್ಲ. ಆದರೆ ಅದರಲ್ಲಿಯೂ ಈ ಜೋಡಿಯ ಲಿಪ್‌ ಲಾಕ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಈ ಜೋಡಿಗೆ ಒಟ್ಟಿಗೆ ನಟಿಸಲು ತಯಾರಾಗಿದೆ.

ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಒಟ್ಟಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದು, ಈ ಹಿಂದೆ ಇವರೇ ನಟಿಸಿದ್ದ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್‌ನಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಶ್ಮಿಕಾ-ವಿಜಯ್ ಮೊದಲ ಬಾರಿ ಒಟ್ಟಿಗೆ ನಟಿಸಿದ್ದ ‘ಗೀತಾ ಗೋವಿಂದಂ’ ಸಿನಿಮಾದ ಮುಂದಿನ ಭಾಗ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ರಶ್ಮಿಕಾ-ವಿಜಯ್ ಅವರುಗಳೇ ಈ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿರಲಿದ್ದಾರಂತೆ.

ಮೊದಲ ಸಿನಿಮಾದಲ್ಲಿ ಇವರಿಬ್ಬರ ಲಿಪ್‌ ಲಾಕ್ ಬಹಳ ವೈರಲ್ ಆಗಿತ್ತು. ಹಾಗಾಗಿ ಸೀಕ್ವೆಲ್‌ನಲ್ಲೂ ಅದೇ ರೀತಿ ಸ್ಟೀಮಿ ಲಿಪ್‌ ಲಾಕ್‌ ಅನ್ನು ನಿರೀಕ್ಷಿಸಲಿದ್ದಾರೆ ಅಭಿಮಾನಿಗಳು ಜೊತೆಗೆ ಇನ್ನಷ್ಟು ರೊಮ್ಯಾಂಟಿಕ್ ದೃಶ್ಯಗಳು ಸಹ ಸಿನಿಮಾದಲ್ಲಿದ್ದರೂ ಅಚ್ಚರಿ ಪಡಬೇಕಿಲ್ಲ.

ಇನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಹಳ ಆತ್ಮೀಯರಾಗಿದ್ದಾರೆ. ಇತ್ತೀಚೆಗಷ್ಟೆ ಇವರಿಬ್ಬರು ವಿದೇಶಕ್ಕೆ ಪ್ರವಾಸ ಸಹ ಹೋಗಿದ್ದರು. ರಶ್ಮಿಕಾ ಮಾಡಿದ್ದ ಲೈವ್ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಧ್ವನಿಯನ್ನು ಅಭಿಮಾನಿಗಳು ಗುರುತಿಸಿದ್ದರು. ಇದೆಲ್ಲವೂ ಇವರಿಬ್ಬರ ಗಪ್‌-ಚುಪ್ ಪ್ರೇಮಕತೆ ಸುದ್ದಿಗಳಿಗೆ ಇನ್ನಷ್ಟು ಇಂಬು ನೀಡಿತ್ತು.

ಅದರ ಬೆನ್ನಲ್ಲೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ, ‘ಹೌದು ನಾನು ವಿಜಯ್ ಪ್ರವಾಸ ಹೋಗಿದ್ದು ನಿಜ ಆದರೆ ನಾವೆಲ್ಲರೂ ಆಗಾಗ್ಗೆ ಪ್ರವಾಸ ಹೋಗುತ್ತಿರುತ್ತೇವೆ. ನಾವಿಬ್ಬರೇ ಪ್ರವಾಸ ಹೋಗಿರಲಿಲ್ಲ ನಮ್ಮೊಟ್ಟಿಗೆ ಇತರ ಗೆಳೆಯರು ಸಹ ಇದ್ದರು” ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಇವರಿಬ್ಬರ ಪ್ರೇಮ-ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಇಂಡಸ್ಟ್ರಿಯಲ್ಲಿ 27 ವರ್ಷ ಪೂರೈಸಿದ್ದಾರೆ.

Thu Feb 2 , 2023
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಇಂಡಸ್ಟ್ರಿಯಲ್ಲಿ 27 ವರ್ಷ ಪೂರೈಸಿದ್ದಾರೆ. ಕಿಚ್ಚ 27 ವರ್ಷದ ಸಂಭ್ರಮಕ್ಕೆ ಇಡೀ ಚಿತ್ರರಂಗ ವಿಶ್ ಮಾಡಿದೆ. ಇನ್ನು ಸುದೀಪ್ ಕೂಡ ತನ್ನ ಜರ್ನಿ ಬಗ್ಗೆ ಮಾತಾಡಿದ್ದು, ಸ್ಪೆಷಲ್ ಆಗಿ ಒಬ್ಬ ವ್ಯಕ್ತಿನ ಸ್ಮರಿಸಿದ್ದಾರೆ. ಅವರೊಬ್ಬರು ಇಲ್ಲ ಅಂದಿದ್ರೆ ಈ ಜರ್ನಿ ಆಗ್ತಿರಲಿಲ್ಲ ಅಂತ ವಿಶೇಷವಾದ ಕ್ರೆಡಿಟ್​ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಲೋಕದಲ್ಲಿ 27 ವರ್ಷ ಪೂರೈಸಿ 28ನೇ ವರ್ಷದ […]

Advertisement

Wordpress Social Share Plugin powered by Ultimatelysocial