ಕನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ತೆಲುಗು ಸಿನಿರಂಗದಲ್ಲಿ ಸಿನಿಮಾ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ!

ಕನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ತೆಲುಗು ಸಿನಿರಂಗದಲ್ಲಿ ಸಿನಿಮಾ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ . ಮುದ್ದು ಮುಖದ ನಟಿ ಈಗಾಗಲೇ ತಮ್ಮ ಮೊದಲ ತೆಲುಗು ಸಿನಿಮಾ ‘ ಪೆಳ್ಳಿ ಸಂದಡಿ ‘ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ . ಇದೀಗ , ಟಾಲಿವುಡ್​ನ ಮಾಸ್ ಮಹಾರಾಜ ನಟ ರವಿತೇಜ ಅವರ ‘ ಧಮಾಕಾ ‘ ಸಿನಿಮಾದಲ್ಲಿ ಶ್ರೀಲೀಲಾ ಅವರು ನಾಯಕಿಯಾಗಿ ನಟಿಸಿದ್ದಾರೆ . ಇನ್ನು , ಪ್ರೇಮಿಗಳ ದಿನದ ವಿಶೇಷವಾಗಿ ಇಂದು ಈ ಸಿನಿಮಾದ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಲಾಗಿದೆ .ಈ ಪೋಸ್ಟರ್​ನಲ್ಲಿ ನಟ ರವಿತೇಜ ಹಾಗೂ ನಟಿ ಶ್ರೀಲೀಲಾ ಮಾತನಾಡಿಕೊಳ್ಳುತ್ತಿರುವ ಒಂದು ಫೋಟೋ ಕಾಣಿಸಿಕೊಂಡಿದೆ . ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ ತೊಡಗಿದೆ . ಮತ್ತೊಂದೆಡೆ , ನಟಿ ಶ್ರೀಲೀಲಾ ಅವರು ನಟ ಜೂ . ಎನ್​ . ಟಿ . ಆರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ . ಆದರೆ , ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ . ಅದೇನೇ ಇರಲಿ, ನಟಿ ಶ್ರೀ ಲೀಲಾ ತೆಲುಗಿನಲ್ಲಿ ಇಷ್ಟು ಬ್ಯೂಸಿಯಾಗಿರುವುದು ಅವರ ಅಭಿಮಾನಿಗಳಿಗೂ ಸಂತಸ ತಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್ ಕಿಂಗ್ಸ್ ಬೆಸ್ಟ್ ಪೊಸಿಬಲ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಪ್ಯಾಕ್ ಅನ್ನು ಮುನ್ನಡೆಸಿದರು

Mon Feb 14 , 2022
    ಮೊಹಾಲಿ, ಫೆಬ್ರವರಿ 14: ಪಂಜಾಬ್ ಕಿಂಗ್ಸ್ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಅವರು ಸಂಪೂರ್ಣ ಹೊಸ ತಂಡದೊಂದಿಗೆ ಐಪಿಎಲ್ 2022 ರಲ್ಲಿ ಆ ಚೊಚ್ಚಲ ವಿಜಯಕ್ಕಾಗಿ ಹುಡುಕಾಟ ನಡೆಸಲಿದ್ದಾರೆ. ಐಪಿಎಲ್ ಹರಾಜಿನಲ್ಲಿ ಅವರು ಕೆಲವು ಉತ್ತಮ ಆಟಗಾರರನ್ನು ಒಟ್ಟುಗೂಡಿಸಿದ್ದಾರೆ ಮತ್ತು ಐಪಿಎಲ್ 15 ರಲ್ಲಿ ಅವರನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಅವರು ಹರಾಜಿನ ಮುಂಚೆಯೇ ಮಯಾಂಕ್ ಅಗರ್ವಾಲ್ ಅವರನ್ನು […]

Advertisement

Wordpress Social Share Plugin powered by Ultimatelysocial