‘ಸರ‍್ಯನ ಶಾಕ್ ಗೆ ಶರಣಾದ ಆರ್.ಸಿ.ಬಿ

ಹಾಲಿ ಚಾಂಪಿಯನ್ನರು ಈ ಭಾರಿಯ ಐಪಿಎಲ್ ನಲ್ಲಿ ಮತ್ತೆ ಚಾಂಪಿಯನ್ ಆಟವಾಡಿದ್ರು. ರಾಯಲ್ ಚಾಲೆಂರ‍್ಸ್ ಬೆಂಗಳೂರು ವಿರುದ್ಧದ ಪಂದ್ಯದ್ಲಲಿ ಅಬ್ಬರಿಸಿದ ಪೊಲರ‍್ಡ್ ಪಡೆ ಅಗ್ರಸ್ಥಾನಕ್ಕೇರುದರ ಜೊತೆಗೆ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿತು. ಸರ‍್ಯ ಕುಮಾರ್ ಯಾದವ್ ಅವರ ಸ್ಫೋಟಕ ಆಟದ ಎದುರು ವಿರಾಟ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು.ದುಬೈನಲ್ಲಿ ಸ್ಫೋಟಕ ಆಟವಾಡಿದ ಸರ‍್ಯಕುಮಾರ್ ಯಾದವ್ ಆರ್.ಸಿ.ಬಿಯ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು.

ಪ್ಲೇ ಆಫ್ ಹಂತದ ಸನಿಹದಲ್ಲಿದ್ದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡಗಳು ನಿನ್ನೆ ಅಗ್ರಸ್ಥಾನಕ್ಕಾಗಿ ಜಿದ್ದಿಗೆ ಬಿದ್ದವು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ೧೩ ನೇ ಆವೃತಿಯ ಐಪಿಎಲ್ ನ ೪೮ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಕಿರಣ್ ಪೊಲರ‍್ಡ್ ಮೊದಲು ಬೌಲಿಂಗ್ ಮಾಡುವ ನರ‍್ಧಾರ ತೆಗೆದುಕೊಂಡ್ರು. ಮಹಾ ಕದನದಲ್ಲಿ ಮುಂಬೈ ತಂಡವು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದ್ರೆ , ಆರ್.ಸಿ.ಬಿ ತಂಡವು ಪ್ರಮುಖ ಮೂರು ಬದಲಾವಣೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿಯಿತು. ಆರಂಭಿಕ ಆಟಗಾರ ಆ್ಯರೋನ್ ಫಿಂಚ್ ಬದಲಿಗೆ ಜೋಶ್ ಫಿಲಿಪ್ ಅವಕಾಶ ಗಿಟ್ಟಿಸಿಕೊಂಡ್ರು. ಆಲ್ ರೌಂಡರ್ ಮೊಹಿನ್ ಅಲಿಯನ್ನು ತಂಡದಿಂದ ಕೈ ಬಿಟ್ಟು ವೇಗಿ ಡೇಲ್ ಸ್ಟೈನ್ ಅವಕಾಶ ಕಲ್ಪಿಸಲಾಯಿತು. ಗಾಯಾಳು ಸೈನಿ ಬದಲಿಗೆ ಶಿವಂ ದುಬೆ ಅವರನ್ನ ಕಣಕ್ಕಿಳಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ ತಂಡವು ಮೊದಲು ಉತ್ತಮ ಆರಂಭ ಪಡೆಯಿತು. ಮೊದಲ ಪವರ್ ಪ್ಲೇ ನಲ್ಲಿ ಪಡಿಕ್ಕಲ್ –ಪಿಲಿಫ್ ಹ್ಯೂಪ್ ಜೋಡಿಯು ವಿಕೆಟ್ ನಷ್ಟ ವಿಲ್ಲದೆ ೫೨ ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಪಡಿಕ್ಕಲ್ –ಪಿಲಿಫ್ ಹ್ಯೂಪ್ ಜೋಡಿಯು ೭೧ ರನ್ ಗಳ ಜೊತೆಯಾಟ ನೀಡಿತು. ಆದರೆ ಉತ್ತಮವಾಗಿ ಬ್ಯಾಟ್ ಬೀಸಿದ ಫಿಲಿಪ್ ಹ್ಯೂಪ್ ಸ್ಪಿನ್ನರ್ ದೀಪಕ್ ಚಹಾರ್ ಎಸೆತದಲ್ಲಿ ಸ್ಟಂಪ್ ಔಟ್ ಗೆ ಬಲಿಯಾದ್ರು.ಪಿಲಿಫ್ ಹ್ಯೂಪ್ ಔಟಾಗುವ ಮೊದಲು ೨೪ ಎಸೆತಗಳಲ್ಲಿ ೪ ಬೌಂಡರಿ ಹಾಗು ಒಂದು ಸಿಕ್ಸರ್ ನೆರವಿನಿಂದ ೩೩ ರನ್ ಗಳ ಕೊಡುಗೆ ನೀಡಿದ್ರು. ಆರ್.ಸಿ.ಬಿ ತಂಡವು ಉತ್ತಮ ಆರಂಭ ಪಡೆದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಸಂಪರ‍್ಣ ವಿಫಲವಾಯಿತು.

 

ಪಿಲಿಫ್ ಹ್ಯೂಪ್ ಪೆವಿಲಿಯನ್ ದಾರಿ ಹಿಡಿಯುತ್ತಿದ್ದಂತೆಯೇ ಕ್ರೀಸ್ ಆಗಮಿಸಿದ ವಿರಾಟ್ ಕೊಹ್ಲಿ ತ್ತೆ ವೈಫಲ್ಯ ಅನುಭವಿಸಿದ್ರು. ೧೪ ಬಾಲ್ ಎದುರಿಸಿದ ಕೊಹ್ಲಿ ಕೇವಲ ೯ ರನ್ ಸಿಡಿಸಿ ಬುಮ್ರಾ ಓವರ್ ನಲ್ಲಿ ವಿಕೆಟ್ ವೊಪ್ಪಿಸಿ ನರ‍್ಗಮಿಸಿದ್ರು. ಆದರೆ ನಿನ್ನೆ ಪಡಿಕ್ಕಲ್ ಪರಾಕ್ರಮ ಜೋರಾಗಿತ್ತು. ಕನ್ನಡಿಗ ದೇವತ್ತದ್ದ ಪಡಿಕ್ಕಲ್ ಕೊಲ್ಲಿ ರಾಷ್ಟ್ರದಲ್ಲಿ ಮತ್ತೆ ಕಮಾಲ್ ಮಾಡಿದ್ರು. ಮುಂಬೈ ಬೌಲರ್ ಗಳ ಬೆಂಡೆತ್ತಿದ್ದ ಪಡಿಕ್ಕಲ್ ಕೇವಲ ೩೨ ಎಸೆತಗಳಲ್ಲಿ ರ‍್ಧ ಶತಕ ಸಿಡಿಸಿದ್ರು. ರ‍್ಧ ಶತಕ ನಂತರ ಪಡಿಕ್ಕಲ್ ಪರಾಕ್ರಮ ಮತ್ತಷ್ಟು ರಂಗು ಪಡೆದುಕೊಳ್ತು.

ಸ್ಟೋಟಕ ಆಟಗಾರ ಡಿವಿಲಿರ‍್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ದೊಡ್ಡ ಜೊತೆಯಾಟಕ್ಕೆ ರೆಡಿಯಾಗಿದ್ದ ಹೊಡಿ ಬಡಿ ಆಟಗಾರ ಎಬಿಡಿ ಪ್ಲಾನ್ ನಿನ್ನೆ ರ‍್ಕೌಟ್ ಆಗಲಿಲ್ಲ. ಡಿವಿಲಿರ‍್ಸ್ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ೧೫ ರನ್ ಗಳಿಸಲಷ್ಟೇ ಶಕ್ತರಾದ್ರು ಒಂದು ಕಡೆ ವಿಕೆಟ್ ಉರುಳುತ್ತಿದ್ರೂ ಮತ್ತೊಂದು ಕಡೆಯಲ್ಲಿ ಸೊಗಸಾದ ಇನ್ನಿಂಗ್ಸ್ ಕಟ್ಟಿದ ದೇವದತ್ತ್ ಪಡಿಕ್ಕಲ್ ೪೫ ಎಸೆತಗಳಲ್ಲಿ ೧೨ ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ೭೪ ರನ್ ಸಿಡಿಸಿ ಮಿಂಚಿದ್ರು. ಡೆತ್ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಯರ‍್ಕರ್ ಗೆ ಆರ್.ಸಿ.ಬಿ ಬ್ಯಾಟ್ಸ್ ಮನ್ ಗಳು ರ‍್ವಸ್ ಆದ್ರು. ೧೭ ನೇ ಓವರ್ ಎಸೆದ ಬುಮ್ರಾ ಒಂದೇ ಓವರ್ ನಲ್ಲಿ ಶಿವಂ ದುಬೆ ಹಾಗೂ ದೇವದತ್ತ್ ಪಡಿಕ್ಕಲ್ ರನ್ನು ಪೆವಿಲಿಯನ್ ಗೆ ಅಟ್ಟಿ ಆರ್.ಸಿ.ಬಿಗೆ ಆಘಾತ ನೀಡಿದ್ರು. ಇದರಿಂದ ಆರ್.ಸಿ.ಬಿ ತಂಡವು ಡೆತ್ ಓವರ್ ನಲ್ಲಿ ಮಂಕಾಗುವಂತ್ತಾಯಿತು.

ಸ್ಲಾಗ್ ಓವರ್ ನಲ್ಲಿ ಬೆಂಗಳೂರು ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಆರಂಭದದಲ್ಲಿ ಮುಂಬೈ ಬೌಲರ್ ಗಳು ಎಡವಿದ್ರೂ ಡೆತ್ ಓವರ್ ನಲ್ಲಿ ಗ್ರೇಟ್ ಕಮ್ ಬಾಕ್ ಮಾಡಿದ್ರು. ಅಂತಿಮವಾಗಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೬೪ ರನ್ ಗಳಿಸಿತು. ಇನ್ನೂ ಮುಂಬೈ ಪರ ಶಿಸ್ತು ಬದ್ದ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಕೇವಲ ೧೪ ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದ್ರು. . ಅಲ್ಲದೇ ಬುಮ್ರಾ ಐಪಿಎಲ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ರು. ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆಯೇ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ೧೦೦ ವಿಕೆಟ್ ಪಡೆದ ಸಾಧನೆ ಮಾಡಿದ್ರು. ಒಟ್ಟಾರೆ ಐಪಿಎಲ್ ನಲ್ಲಿ ೮೯ ಐಪಿಎಲ್ ಪಂದ್ಯವನ್ನಾಡಿರುವ ಬುಮ್ರಾ ೨೫೨೬ ರನ್ ನೀಡಿ ೧೦೨ ವಿಕೆಟ್ ಕಬಳಿಸಿದ್ದಾರೆ. ಇನ್ನೂ ನಿನ್ನೆಯ ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ರಾಹುಲ್ ಚಹಾರ್, ವೇಗಿಗಳಾದ ಟ್ರೆನ್ಟ್ ಬೋಲ್ಟ್, ನಾಯಕ ಪೊಲರ‍್ಡ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ರು.

೧೬೫ ರನ್ ಗಳ ಸ್ರ‍್ಧಾತ್ಮಕ ಮೊತ್ತವನ್ನ ಬೆನ್ನಟ್ಟಿದ ಹಾಲಿ ಚಾಂಪಿಯನ್ನರು ೩೭ ರನ್ ಗಳ ಸಾಧಾರಣ ಆರಂಭ ಪಡೆದ್ರು. ಆದರೆ ೫ ನೇ ಓವರ್ ನಲ್ಲಿ ಬೌಲಿಂಗ್ ದಾಳಿಗಿಳಿದ ವೇಗಿ ಸಿರಾಜ್ ಡಿಕಾಕ್ ರನ್ನು ಪೆವಿಲಿನ್ಗೆ ಅಟ್ಟಿ ಆರ್.ಸಿ.ಬಿಗೆ ಆರಂಭಿಕ ಮೇಲುಗೈ ತಂದು ಕೊಟ್ರು.೧೯ ಎಸೆತಗಳನ್ನು ಎದುರಿಸಿದ್ದ ಡಿಕಾಕ್ ೧೮ ರನ್ ಗಳಿಸಲಷ್ಟೇ ಶಕ್ತರಾದ್ರು. ಮೊದಲ ಪವರ್ ಪ್ಲೇ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಒಂದು ವಿಕೆಟ್ ನಷ್ಟಕ್ಕೆ ೪೫ ರನ್ ಪೇರಿಸಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಇಶನ್ ಕಿಶನ್ ಆಟ ೨೫ ರನ್ ಗೆ ಚಹಾಲ್ ಅಂತ್ಯಗೊಳಿಸಿದ್ರು. ೧೯ ಎಸೆತಗಳಲ್ಲಿ ೨೫ ರನ್ ಸಿಡಿಸಿದ್ದ ಇಶನ್ ಕಿಶನ್ ರನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಬಲಿ ಪಡೆದುಕೊಂಡ್ರು. ಕನ್ನಡಿಗ ಪಡಿಕ್ಕಲ್ ಹಿಡಿದ ಅಸಾಧರಣ ಕ್ಯಾಚ್ ಗೆ ಸೌರವ್ ತಿವಾರಿ ಕೂಡ ವಿಕೆಟ್ ವೊಪ್ಪಿಸಲೇ ಬೇಕಾಯಿತು.

ನಿನ್ನೆ ಮುಂಬೈ ತಂಡದ ಉದಯೋನ್ಮುಖ ಪ್ರತಿಭೇ ಸರ‍್ಯಕುಮಾರ್ ಯಾದವ್ ಆರ್.ಸಿ.ಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದ್ರು. ಶೇಖ್ ಝಾಹೇದ್ರ ಕ್ರೀಡಾಂಗಣದಲ್ಲಿ ಸರ‍್ಯ ಕುಮಾರ್ ಯಾದವ್ ಸ್ಪೋಟಕ ಆಟಕ್ಕೆ ಒತ್ತುಕೊಟ್ರು. ಸರ‍್ಯ ಕುಮಾರ್ ಯಾದವ್ ಕೇವಲ ೨೯ ಎಸೆತಗಳಲ್ಲಿ ರ‍್ಧ ಶತಕ ಸಿಡಿಸಿ ಆರ್.ಸಿ.ಬಿ ಪಾಲಯದಲ್ಲಿ ಆತಂಕ ಮೂಡಿಸಿದರು. ಕಡೆ ತನಕವು ಮುಂಬೈ ಗೆಲುವಿಗೆ ಶತಾಯ ಗತಾಯ ಪ್ರಯತ್ನ ನಡೆಸಿದ ಸರ‍್ಯಕುಮಾರ್ ಯಾದವ್ ಕಡೆಗೂ ಅದರಲ್ಲಿ ಮೇಲುಗೈ ಸಾಧಿಸಿದ್ರು. ೪೩ ಎಸೆತಗಳನ್ನು ಎದುರಿಸಿದ ಸರ‍್ಯಕುಮಾರ್ ಯಾದವ್ ೧೦ ಬೌಂಡರಿ ಹಾಗೂ ೩ ಸಿಕ್ಸರ್ ನೆರವಿನಿಂದ ೭೯ ರನ್ ಚಚ್ಚಿ ಅಜೇಯರಾಗಿ ಉಳಿದ್ರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು ೧೯.೧ ಓವರ್ ನಲ್ಲಿ ೧೬೬ ರನ್ ಸಿಡಿಸಿ ಗೆಲುವಿನ ಕೇಕೆ ಹಾಕಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಢವು ೧೩ ನೇ ಆವೃತಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಲಗ್ಗೆ ಇಟ್ಟ ಮೊದಲ ತಂಡ ಎಂಬ ಹಿರಿಮೆಗೂ ಪಾತ್ರವಾಯಿತು. ಮುಂಬೈ ತಂಡದ ಗೆಲುವಿನಲ್ಲಿ ವೇಗಿ ಜಸ್ಪೀತ್ರ ಬುಮ್ರಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಸರ‍್ಯಕುಮಾರ್ ಯಾದವ್ ಅವರ ಕೊಡುಗೆ ಮಹತ್ವದಾಗಿತ್ತು.

ಇಂದು ೧೩ ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ೪೯ ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈರ‍್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕೊಲ್ಕತ್ತಾ ನೈಟ್ ರೈರ‍್ಸ್ ತಂಡವು ಪ್ಲೇ ಆಫ್ ಹಂತಕ್ಕೇರ ಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆದ್ದರೂ ಸಹ ಪ್ಲೇ ಆಫ್ ಪಂದ್ಯವನ್ನು ಆಡುವ ಅವಕಾಶದಿಂದ ವಂಚಿತವಾಗಿದೆ. ಧೋನಿ ಪಡೆಯು ಕಳೆದ ಪಂದ್ಯದಲ್ಲಿ ಆರ್.ಸಿ.ಬಿ ವಿರುದ್ಧದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ, ಕೆಕೆಆರ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸೋಲಿನ ಹತಾಶೆಯಲ್ಲಿದೆ. ಒಟ್ಟಿನಲ್ಲಿ ಮರ‍್ಗನ್ ಪಡೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದು ಧೋನಿ ಬಳಗಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.. ಅಬ್ದುಲ್ ಸತ್ತಾರ್ ,,ಸ್ಪರ‍್ಡ್ಸ್ ಬ್ಯುರೋ..ಸ್ಪೀಡ್ ನ್ಯೂಸ್ ಕನ್ನಡ ಬೆಂಗಳೂರು..

Please follow and like us:

Leave a Reply

Your email address will not be published. Required fields are marked *

Next Post

ತಾಳಿ ಕಟ್ಟಿದ ಗಂಡನನ್ನೇ ಕೊಂದ ಪಾಪಿ ಪತ್ನಿ

Thu Oct 29 , 2020
ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ…! ಹೀಗೆ ಖಾಕಿ ಕೈಯಲ್ಲಿ ಲಾಕ್ ಆಗಿ ವಿಡಿಯೋಗೆ ಫೋಸ್ ಕೊಡುತ್ತಿರುವ ಈ ಆಸಾಮಿಗಳು ಮಾಡಿದ್ದು ಮಾತ್ರ ಕ್ಯಾಕರಿಸಿ ಉಗಿಯುವಂತೆ ಕೆಲ್ಸ. ಇಬ್ಬರು ಖತರ್ನಾಕ್ ಗಳ ಜೊತೆ ಇಲ್ಲೊಬ್ಳು ಕುಟುಂಬಕ್ಕೆ ಮಾರಿ ಆದ ನಾರಿ ಕೂಡ ಇದ್ದಾಳೆ ನೋಡಿ. ಇವರ ಹೆಸ್ರು ಶಿವಮಲ್ಲ ಅಲಿಯಾಸ್ ಕರಿಯ ಮತ್ತು ಮಲ್ಲೇಶ್ , ಪ್ರೇಮಾ. ಈ ತ್ರಿಮರ‍್ತಿಗಳು ಒಟ್ಟಾಗಿ ಎಸಗಿರುವ ಘನಂದಾರಿ ಕೆಲ್ಸದ ಬಗ್ಗೆ ಗೊತ್ತಾದ್ರೆ ನೀವು ಕೂಡ […]

Advertisement

Wordpress Social Share Plugin powered by Ultimatelysocial