REDMI TV:ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022ನ್ನು ಬಿಡುಗಡೆ;

ದೊಡ್ಡ ಪರದೆಯ ಟಿವಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಶಿಯೋಮಿ ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022ನ್ನು ಬಿಡುಗಡೆ ಮಾಡಲಾಗಿದೆ. 50 ಇಂಚಿನ ಟಿವಿ ಈಗ ಖರೀದಿಗೆ ಲಭ್ಯವಿದೆ. ಈ ಟಿವಿ ಬೆಲೆ ಚೀನಾದಲ್ಲಿ 2,299 ಯುವಾನ್‌.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಜೆಡಿ ಡಾಟ್ ಕಾಮ್ ನಲ್ಲಿ ಇದು ಲಭ್ಯವಿದೆ.

ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022 ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 3840 x 2160 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. 50 ಇಂಚಿನ 4ಕೆ ಡಿಸ್‌ಪ್ಲೇಯನ್ನು ನೀಡಲಾಗಿದೆ. 3ಜಿಬಿ ರ್ಯಾಮ್ ಮತ್ತು 32ಜಿಬಿ ಸ್ಟೋರೇಜ್ ಇದಕ್ಕೆ ನೀಡಲಾಗಿದೆ. ಎಡ ಮತ್ತು ಬಲ ಚಾನಲ್‌ಗಳಲ್ಲಿ ಎರಡು 12.5ಡಬ್ಲ್ಯು ಸ್ಪೀಕರ್‌ಗಳನ್ನು ಟಿವಿಗೆ ನೀಡಲಾಗಿದೆ.

ಇದಕ್ಕೂ ಮೊದಲು, ಕಂಪನಿಯು 65-ಇಂಚಿನ ಡಿಸ್ಪ್ಲೇ ಮತ್ತು 55-ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿರುವ ಎರಡು ಮಾಡೆಲ್ ಬಿಡುಗಡೆ ಮಾಡಿದೆ. ಈ ಎರಡೂ ಮಾಡೆಲ್ ಗಳು ಈಗಾಗಲೇ ಚೀನೀ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

GST:ಉಡುಪು ಮೇಲಿನ ಜಿಎಸ್‌ಟಿ ಏರಿಕೆ ಸದ್ಯಕ್ಕಿಲ್ಲ;

Fri Dec 31 , 2021
ಹೊಸ ವರ್ಷದಲ್ಲಿ ಜಿಎಸ್‌ಟಿ ಏರಿಕೆಯ ಪರಿಣಾಮದಿಂದಾಗಿ ಉಡುಪುಗಳ ಬೆಲೆಯು ಅಧಿಕ ಆಗಲಿದೆ ಎಂಬ ಬೇಸರದಲ್ಲಿದ್ದ ಗ್ರಾಹಕರಿಗೆ ಒಂದು ಸಿಹಿಸುದ್ದಿ ಇದೆ. ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಉಡುಪುಗಳ ಮೇಲಿನ ಜಿಎಸ್‌ಟಿ ಏರಿಕೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜಿಎಸ್​ಟಿ ಸಮಿತಿಯು ಶುಕ್ರವಾರ (ಡಿಸೆಂಬರ್ 31, 2021) ನಡೆದ ಸಭೆಯಲ್ಲಿ ಜವಳಿ ಮೇಲಿನ ಜಿಎಸ್​ಟಿ ದರ ಶೇ 5ರಿಂದ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಮುಂದೂಡುವುದಕ್ಕೆ ಸರ್ವಾನುಮತದಿಂದ ಸಮ್ಮತಿ ನೀಡಿದೆ. ಈ […]

Advertisement

Wordpress Social Share Plugin powered by Ultimatelysocial