ಟೈಲರ್ ಶಿರಚ್ಛೇದ: ಜೂ17ರಂದೇ ಸ್ಕೆಚ್ ಹಾಕಿದ್ದ ಆರೋಪಿ, ಹತ್ಯೆಯ ಮಾಸ್ಟರ್ ಮೈಂಡ್ ವಿಡಿಯೋ ವೈರಲ್

 

ಜೈಪುರ: ನೀವು ತುಂಬಾ ಕೊಲೆಗಳನ್ನು ಮಾಡುತ್ತೀರಿ, ಪ್ರವಾದಿಗಾಗಿ ಒಂದು ಕೊಲೆಯನ್ನು ಏಕೆ ಮಾಡಬಾರದು? ಎಂದು ಮುಸ್ಲಿಂ ಮೂಲಭೂತವಾದಿ ರಿಯಾಜ್ ಮೊಹಮ್ಮದ್ ಅಕ್ತಾರಿ ಉದಯಪುರ ಹತ್ಯೆಗೆ ಪ್ರಚೋದನೆ ನೀಡಿದ್ದ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉದಯಪುರದಲ್ಲಿ ಟೈಲರ್‌ನನ್ನು ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಶಿರಚ್ಛೇದನ ಮಾಡಿ ಹತ್ಯೆಗೈದಿದ್ದರು.

ನೂಪರ್‌ ಶರ್ಮಾಗೆ ಬೆಂಬಲಿಸಿ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಟೈಲರ್ ನನ್ನು ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಬರ್ಬರವಾಗಿ ಶಿರಚ್ಛೇದ ಮಾಡಿದ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಇಬ್ಬರು ಆರೋಪಿಗಳನ್ನು ರಾಜಾಸ್ಥಾನದಲ್ಲಿ ಬಂಧಿಸಲಾಗಿತ್ತು. ಆರೋಪಿಗಳು ಬಂಧನವಾಗುವುದಕ್ಕೆ ಕೆಲವೇ ಕ್ಷಣಗಳಿಗೂ ಮುನ್ನ ಜೂನ್ 17ರಂದೇ ಮಾಡಿಟ್ಟಿದ್ದ 2:20 ನಿಮಿಷದ ವೀಡಿಯೋ ಹಂಚಿಕೊಂಡಿದ್ದು ಇದೀಗ ಆ ವಿಡಯೋ ವೈರಲ್ ಆಗಿದೆ. ವೀಡಿಯೋನಲ್ಲಿ ವ್ಯಕ್ತಿಯೊಬ್ಬ ಪ್ರವಾದಿ ವಿರೋಧಿಗಳ ಹತ್ಯೆಗೆ ಪ್ರಚೋದನೆ ನೀಡುವ ಜೊತೆಗೆ ರಾಜಾಸ್ಥಾನ ಸರ್ಕಾರಕ್ಕೂ ಪರೋಕ್ಷವಾಗಿ ಸವಾಲು ಹಾಕಿದ್ದಾನೆ.

ಪ್ರಚೋದನೆ ನೀಡುವ ವಿಡಿಯೋದಲ್ಲಿ ಏನಿದೆ?ನಾನು ನನ್ನ ಮುಸ್ಲಿಂ ಬಂಧುಗಳಿಗೆ ಮತ್ತೊಂದು ಸಂದೇಶ ನೀಡಲು ಬಯಸುತ್ತೇನೆ. ಎಲ್ಲರಿಗೂ ನನ್ನ ಕುಟುಂಬ ಏನಾಗುತ್ತದೆ? ಪರಿವಾರಕ್ಕೆ ಏನಾಗುತ್ತದೆ? ಎನ್ನುವ ಚಿಂತೆ ಇರುತ್ತದೆ. ನನಗೂ ಒಂದು ಕುಟುಂಬವಿದೆ, ಕೆಲಸವಿದೆ. ಅದರ ಚಿಂತೆ ಬಿಟ್ಟುಬಿಡಿ. ನೀವು ಎಷ್ಟೋ ಕೊಲೆಗಳನ್ನು ಮಾಡುತ್ತೀರಿ. ಪ್ರವಾದಿಗಾಗಿ ಏಕೆ ಒಂದು ಕೊಲೆಯನ್ನು ಮಾಡಬಾರದು? ಹೆದರಬೇಡಿ, ನಮಗೆ ಅಲ್ಹಾನ ಆಶ್ರಯವಿದೆ. ಹೆಚ್ಚೆಂದರೆ ಜೈಲಿಗೆ ಹಾಕುತ್ತಾರೆ. ಉದಯಪುರದಲ್ಲಿ ದೊಡ್ಡದೊಡ್ಡ ದಾದಾಗಳಿಗೆ ನಾನೊಂದು ಸವಾಲು ಹಾಕುತ್ತೇನೆ. ನನ್ನಂಥವರನ್ನು ಕೊಲ್ಲಬೇಕು, ನಮ್ಮ ಆಸ್ತಿಗಳನ್ನು ಜಪ್ತಿ ಮಾಡಬೇಕು ಅನ್ನೋರು ಗಟ್ಸ್ ಇದ್ದರೆ ಮಾಡಲಿ, ಇಲ್ಲವಾದರೆ ಬಳೆ ತೊಟ್ಟುಕೊಳ್ಳಲಿ ಎಂದು ಸವಾಲು ಹಾಕಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2023 ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ:

Wed Jun 29 , 2022
  ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು, ಮಂಗಳವಾರ ಸಂಜೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪಕ್ಷದ ಚುನಾವಣಾ ಕಾರ್ಯತಂತ್ರದ ಬಗ್ಗೆ ವಿವರವಾದ ಚರ್ಚೆ ನಡೆಸಿದರು. […]

Advertisement

Wordpress Social Share Plugin powered by Ultimatelysocial