ರಸ್ತೆ ದುರಸ್ಥಿ ಕೆಲಸಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಗಡ್ಡೋಬನಹಳ್ಳಿ ಗ್ರಾಮಸ್ಥರ ಮನವಿಯ ಮೇರೆಗೆ ತನ್ನ ಸ್ವಂತ ಹಣದಿಂದಲೇ ರಸ್ತೆಯ ಎರಡು ಬದಿಯ ಜಂಗಲ್ ದುರಸ್ಥಿಗೆ ಬಿಜೆಪಿ ಮುಖಂಡ ಮುಂದಾಗಿರುವ ಘಟನೆ ಮಂಗಳವಾರ ನಡೆದಿದೆ.ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿ ಗ್ರಾಮದವರೇಗೆ ರಸ್ತೆದುರಸ್ಥಿ ಕೆಲಸ ನಡೆಯುತ್ತೀದೆ.ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿಗೆ 2ಕೀಮೀ ಮತ್ತು ಗಡ್ಡೋಬನಹಳ್ಳಿ ಗ್ರಾಮದ ಮಧ್ಯವೆಂಕಟಾಪುರ ಕ್ರಾಸಿಗೆ 3ಕೀಮೀ ರಸ್ತೆ ದುರಸ್ಥಿ ಕೆಲಸ ಪ್ರಾರಂಭವಾಗಿದೆ.ಗಡ್ಡೋಬನಹಳ್ಳಿ ಗ್ರಾಮದಲ್ಲಿ ಒಟ್ಟು100 ಕುಟುಂಬಗಳಿದ್ದು 450ಕ್ಕೂ ಅಧಿಕ ಮತದಾರರು ಇದ್ದಾರೆ. ಪ್ರತಿನಿತ್ಯ 30ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಂಚಾರ ನಡೆಸುತ್ತಾರೆ‌.5ಕೀಮೀ ಸಂಪರ್ಕದ ರಸ್ತೆಯಲ್ಲಿ ಜಂಗಲ್ ಬೆಳೆದು ರಸ್ತೆಯೇ ಮಾಯವಾಗಿ ರೈತರು ಮತ್ತು ವಿದ್ಯಾರ್ಥಿಗಳು ಸಂಚರಿಸುವಾಗ ಭಯದ ವಾತವರಣ ನಿರ್ಮಾಣ ಆಗಿತ್ತು.ಕೊರಟಗೆರೆ ಬಿಜೆಪಿ ಮುಖಂಡ ಗಡ್ಡೋಬನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮಸ್ಥರು ರಸ್ತೆಯ ದುರಸ್ಥಿಗೆ ಮನವಿ ಮಾಡಿದ್ದಾರೆ. ತಕ್ಷಣವೇ ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅನಿಲ್ ಕುಮಾರ್ ಮಾರನೇಯ ದಿನವೇ ರಸ್ತೆ ದುರಸ್ಥಿ ಕೆಲಸಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಚಳಿ ಕೊರೆಯುತ್ತಿದೆ.

Tue Jan 17 , 2023
ಭಾರತದಲ್ಲಿ ಚಳಿ ಕೊರೆಯುತ್ತಿದೆ. ಅದರಲ್ಲೂ ಉತ್ತರ ಭಾರತವಂತೂ ಶೀತಕ್ಕೆ ತತ್ತರಿಸಿ ಹೋಗುತ್ತಿದೆ. ತಾಪಮಾನ ಮೈನಸ್​​ ಡಿಗ್ರಿ ಸೆಲ್ಸಿಯಸ್​​ನಲ್ಲಿ ದಾಖಲಾಗುತ್ತಿದೆ. ಜನ ಮನೆಯಿಂದ ಹೊರಬರಲಾಗದೆ ಕಷ್ಟಪಡುತ್ತಿದ್ದಾರೆ. ನಗರಗಳಲ್ಲಿ ಫೂಟ್​ಪಾತ್​​ ಮೇಲೆಲ್ಲ ಬೆಂಕಿ ಹಾಕಿಕೊಂಡು ಕಾಯಿಸುತ್ತಿದ್ದಾರೆ. ಭಾರತದಲ್ಲಿ ಈ ಪರಿಸ್ಥಿತಿ ಇರುವಾಗ ಇಡೀ ಭೂಮಿಯಲ್ಲೇ ಅತ್ಯಂತ ಶೀತ ಪ್ರದೇಶ ಎಂದು (ಕು)ಖ್ಯಾತಿ ಪಡೆದ   ನಗರದಲ್ಲಿ ಈಗೆಷ್ಟು ಚಳಿ ಬೀಳುತ್ತಿರಬಹದು? ಅಷ್ಟಕ್ಕೂ ಭೂಮಿ ಮೇಲಿನ ಅತ್ಯಂತ ತಂಪು ವಾತಾವರಣ ಇರುವ ಸ್ಥಳ ಯಾವುದು? ರಷ್ಯಾದ […]

Advertisement

Wordpress Social Share Plugin powered by Ultimatelysocial