ರಾಬರ್ಟ್ ಬಾಡೆನ್ ಪೊವೆಲ್ ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕ.

ರಾಬರ್ಟ್ ಬಾಡೆನ್ ಪೊವೆಲ್  ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ 1857ರ ಫೆಬ್ರುವರಿ 22ರಂದು ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು.ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ಸ್ಥಳೀಯ ಹುಡುಗರ ಕ್ಯಾಂಪ್ ಒಂದರ ಮೂಲಕ 1907ರ ವರ್ಷದಲ್ಲಿ ಮೊದಲಿಗೆ ಕಾರ್ಯರೂಪಕ್ಕೆ ತಂದರು. ಇದು ಮುಂದೆ ಸ್ಕೌಟ್ ಚಳುವಳಿಯಾಗಿ ವಿಶ್ವದೆಲ್ಲೆಡೆ ಪ್ರವರ್ತನಗೊಳ್ಳುವಲ್ಲಿ ಪ್ರಮುಖ ಹೆಜ್ಜೆಯೆನಿಸಿತು.1908ರಲ್ಲಿ ಪೊವೆಲ್ ಅವರು ‘ಸ್ಕೌಟಿಂಗ್ ಫಾರ್ ಬಾಯ್ಸ್’ ಎಂಬ ಪುಸ್ತಕವನ್ನು ಬರೆದರು. ನೂರೈವತ್ತು ಮಿಲಿಯನ್ ಪ್ರತಿಗಳು ಮಾರಾಟವಾದ ಈ ಪುಸ್ತಕವು ಇಪ್ಪತ್ತನೆಯ ಶತಮಾನದ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ. ಮುಂದೆ ಅವರ ಸಹೋದರಿ ಆಗೆನ್ಸ್ ಬಾಡೆನ್ ಪೊವೆಲ್ ಮತ್ತು ಪತ್ನಿ ಆಲೆವರ್ ಸೇಂಟ್ ಕ್ಲೇರ್ ಸೋಮ್ಸ್ ಅವರುಗಳು ಹೆಣ್ಣುಮಕ್ಕಳಿಗಾಗಿ ‘ಗರ್ಲ್ಸ್ ಗೈಡ್ಸ್ ಮೂಮೆಂಟ್’ ಎಂಬ ಕಾರ್ಯಕ್ರಮವನ್ನು ಪ್ರಸಿದ್ಧಿಗೊಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದ ಅತ್ಯಂತ ದುಬಾರಿ ತರಕಾರಿ .

Sun Feb 26 , 2023
ದಿನೇ ದಿನೇ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಮಾರ್ಕೆಟ್‌ನಲ್ಲಿ ಎಲ್ಲಾ ತರಕಾರಿಗಳು ತನ್ನ ಬೆಲೆಯನ್ನು ಏರಿಸಿಕೊಂಡಿದೆ. ಗ್ರಾಹಕರಿಗೆ ಯಾವ ತರಕಾರಿಯನ್ನು ಆರಿಸಿಕೊಳ್ಳೋದು ಎಂಬ ತಲೆನೋವು ಹೆಚ್ಚಾಗಿದೆ. ಅಂತದ್ರಲ್ಲಿ ವಿಶ್ವದ ದುಬಾರಿ ತರಾಕಾರಿ ಯಾವುದು ಎಂಬುದು ನಿಮಗೆ ಗೊತ್ತಿದ್ಯಾ?ಇದು ಅಂತಿಂತಾ ತರಕಾರಿಯಲ್ಲ ಇದರ ಬೆಲೆ ಕೆ.ಜಿಗೆ 85,000. ಸಾಮಾನ್ಯ ಜನರಂತೂ ಇದನ್ನು ಖರೀದಿಸೋದಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಅಷ್ಟಕ್ಕು ಯಾವುದು ಈ ದುಬಾರಿ ತರಕಾರಿ? ಅಷ್ಟಕ್ಕು ಈ ತರಕಾರಿ ಅಷ್ಟೊಂದು ದುಬಾರಿ ಯಾಕೆ? […]

Advertisement

Wordpress Social Share Plugin powered by Ultimatelysocial