`ರಾಬರ್ಟ್’ ಚಿತ್ರದ ತೆಲುಗು ಸಾಂಗ್ ರಿವೀಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮೋಸ್ಟ್ ಅವೇಯ್ಟೆಡ್ ಸಿನಿಮಾ ರಾಬರ್ಟ್.. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಮೂಡಿಬರ್ತಿದೆ.. ಸ್ಯಾಂಪಲ್ಸ್ ಮೂಲಕವೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ..ಇತ್ತೀಚೆಗಷೆ್ಟೀ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಟೀಸರ್ ರಿಲೀಸ್ ಆಗಿತ್ತು.. ಟಾಲಿವುಡ್ ಮಂದಿ ಕೂಡ ಟೀಸರ್ ನೋಡಿ ಬೆರಗಾಗಿದ್ರು.. ಇದೀಗ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಸಾಂಗ್ ಕೂಡ ರಿಲೀಸ್ ಆಗಿದೆ.. ಈ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ.. ತೆಲುಗು ವರ್ಷನ್ ಸಾಂಗ್ ರಿಲೀಸ್ ಆಗಿರೋದ್ರ ಬಗ್ಗೆ ನಟ ದರ್ಶನ್ ಕೂಡ ಟ್ವೀಟ್ ಮಾಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.. ಉಮಾಪತಿ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿಬರ್ತಿರುವ ರಾಬರ್ಟ್ ಸಿನಿಮಾ ಇದೇ ಮಾರ್ಚ್ 11ಕ್ಕೆ ತೆರೆಗಪ್ಪಳಿಸಲಿದೆ…

ಇದನ್ನೂ ಓದಿ:ಬೈಕ್ ಸರ್ವಿಸ್ ಸೆಂಟರ್ ಗೆ ತಗುಲಿದ ಬೆಂಕಿ

Please follow and like us:

Leave a Reply

Your email address will not be published. Required fields are marked *

Next Post

ರಸ್ತೆಯಲ್ಲಿ ರಾಗಿ, ಹುರುಳಿ ಒಕ್ಕಣೆ

Wed Feb 10 , 2021
ರಸ್ತೆಯಲ್ಲಿ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿದ್ದ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಜಾರಿ ಬಿದ್ದು ಗಾಯಗಳಾಗಿವೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಎಳೆಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ, ಗುಟ್ಟೂರು ಗ್ರಾಮದ ಸುಬ್ರಮಣಿ ಬೈಕ್ ನಿಂದ ಬಿದ್ದು ಗಾಯಗಳಾದ ಹಿನ್ನೆಲೆ ಆಕ್ರೋಶಗೊಂಡ ಆತನ ತಂದೆ ಒಕ್ಕಣೆ ಮಾಡುತ್ತಿದ್ದ ಹುರುಳಿಗೆ ಬೆಂಕಿ ಹಚ್ಚಿದ್ದಾನೆ, ಸದ್ಯ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ರಾಬರ್ಟ್’ […]

Advertisement

Wordpress Social Share Plugin powered by Ultimatelysocial