ROCKINGSTAR:ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ರಜೆ ಕೋರಿ ಪ್ರಿನ್ಸಿಪಾಲ್‌ಗೆ ಪತ್ರ ಬರೆದ ವಿದ್ಯಾರ್ಥಿ;

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ರಜೆ ಕೋರಿ ಪ್ರಿನ್ಸಿಪಾಲ್‌ಗೆ ಪತ್ರ ಬರೆದ ವಿದ್ಯಾರ್ಥಿ

ಅಭಿಮಾನಿಗಳ ಅಭಿಮಾನಕ್ಕೆ ಮಿತಿ ಎಲ್ಲಿದೆ? ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗಲಿ. ಹುಟ್ಟುಹಬ್ಬ ಬರಲಿ. ಅವರ ಮನೆಯಲ್ಲಿ ಸಂಭ್ರಮವಿರಲಿ. ಡೈ ಹಾರ್ಡ್ ಫ್ಯಾನ್ಸ್ ತಮ್ಮದೇ ಹುಟ್ಟುಹಬ್ಬವೆಂದು ಆಚರಿಸಿ ಸಂಭ್ರಮಿಸುತ್ತಾರೆ. ಕೆಲವೊಮ್ಮೆ ತಮ್ಮ ಫೇವರಿಟ್ ನಟನ ಸಿನಿಮಾ ನೋಡುವುದಕ್ಕೆ ರಜೆ ಕೊಡಿ ಅಂತ ಅಭಿಮಾನಿಗಳು ಪತ್ರ ಬರೆದಿದ್ದೂ ಇದೆ.

ಆದರೆ, ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬ ಹುಟ್ಟುಹಬ್ಬ ಆಚರಣೆ ಮಾಡಬೇಕು ರಜೆ ಕೊಡಿ ಅಂತ ಪತ್ರ ಬರೆದಿದ್ದಾನೆ.

ಯಶ್ ಹುಟ್ಟುಹಬ್ಬ ಮಾಡ್ಬೇಕು ರಜೆ ಕೊಡಿ ಅಂತ ಪ್ರಿನ್ಸಿಪಾಲ್ ಗೆ ಪತ್ರ ಬರೆದ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನವಷ್ಟೇ ಬಾಕಿಯಿದೆ. ಆಗಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅದೇ ಒಂದು ವೇಳೆ ಕೊರೊನಾ ಹಾವಳಿ ಇರದೇ ಹೋಗಿದ್ದರೆ, ರಾಕಿ ಭಾಯ್ ಮನೆಯ ಮುಂದೆ ಹಬ್ಬವನ್ನೇ ಮಾಡಿಬಿಡುತ್ತಿದ್ದರು. ಆದರೆ, ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಆದರೂ, ಬಳ್ಳಾರಿಯ ಅಭಿಮಾನಿಯೊಬ್ಬ ರಜೆ ಕೋರಿ ಅಂತ ಪತ್ರ ಬರೆದಿದ್ದಾನೆ.

ಯಶ್ ಹುಟ್ಟುಹಬ್ಬ ಆಚರಿಸಲು ರಜೆ ಕೊಡಿ
ಸೂಪರ್‌ಸ್ಟಾರ್ ಅಭಿಮಾನಿಗಳು ನಿಜಕ್ಕೂ ಕ್ರೇಜಿಯಾಗಿರುತ್ತಾರೆ. ಅವರ ಅಲೋಚನೆಗಳು, ಕ್ರಿಯೇಟಿವಿಗೆ ಸೂಪರ್‌ಸ್ಟಾರ್‌ಗಳೇ ಅಚ್ಚರಿ ಪಟ್ಟ ಅದೆಷ್ಟೋ ಉದಾಹರಣೆಗಳು ಇವೆ. ಅವರಂತೆ ಬಳ್ಳಾರಿಯ ಯಶ್ ಅಭಿಮಾನಿಯೊಬ್ಬ ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ತಾನು ಓದುತ್ತಿರುವ ಕಾಲೇಜಿನ ಪ್ರಿನ್ಸಿಪಾಲ್‌ಗೆ ಪತ್ರ ಬರೆದಿದ್ದಾರೆ. ಕೆ ಶಿವಕುಮಾರ್ ಎಂಬ ವಿದ್ಯಾರ್ಥಿ ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್‌ಚಂದ್ರ ಅಗರ್ವಾಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ ಕಾಂ ಮೂರನೇ ಸೆಮಿಸ್ಟರ್ ಓದುತ್ತಿದ್ದಾನೆ. ಈತನೇ ಹುಟ್ಟುಹಬ್ಬಕ್ಕೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾನೆ.

24 ಗಂಟೆ ಟ್ರೆಂಡ್‌ನಲ್ಲಿ ಅಭಿಮಾನಿ ಭಾಗಿ

ಜನವರಿ 8ನೇ ತಾರೀಕಯ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು 24 ಗಂಟೆಗಳ ಕಾಲ ಯಶ್ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಭಾಗವಹಿಸಬೇಕು. ಹೀಗಾಗಿ ಜನವರಿ 7ನೇ ತಾರೀಕು ರಜೆ ಕೊಡಿ ಎಂದು ಪ್ರಿನ್ಸಿಪಾಲ್‌ಗೆ ಮನವಿ ಮಾಡಿಕೊಂಡಿದ್ದಾನೆ. ಇದರೊಂದಿಗೆ ತನ್ನ ಸ್ನೇಹಿತರಿಗೂ ರಜೆಯನ್ನು ನೀಡುವಂತೆ ಕೇಳಿಕೊಂಡಿದ್ದು, ನಾವೆಲ್ಲರೂ ಸೇರಿ ಒಟ್ಟಿಗೆ ಮನೆಯಲ್ಲಿ ಯಶ್ ಹುಟ್ಟುಹಬ್ಬವನ್ನು ಆಚರಿಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಯಶ್

ಕೊರೊನಾ ಹಾಗೂ ಓಮಿಕ್ರಾನ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳು ಎಲ್ಲಿದ್ದೀರೋ ಅಲ್ಲಿಂದಲೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಯಶ್ ಈ ಹಿಂದೆನೇ ಹೇಳಿಕೊಂಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಇನ್ನೊಂದು ಕಡೆ ‘ಕೆಜಿಎಫ್ 2’ ಸಿನಿಮಾದ ಟೀಸರ್, ಟ್ರೈಲರ್ ಕೂಡ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಯಶ್ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಆವರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಪುನೀತ್ ರಾಜಕುಮಾರ್ ನಟನೆಯ 'ಜೇಮ್ಸ್' ಸ್ಪೆಷಲ್ ಪೋಸ್ಟರ್ ರಿಲೀಸ್;

Fri Jan 7 , 2022
2022 ರಲ್ಲಿ ರಿಲೀಸ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಕೂಡ ಒಂದು. ಸದ್ಯ ಜೇಮ್ಸ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ಕೆಲಸ ಮಾಡುತ್ತಿದ್ದೇವೆ, ಡಿಐ, ಸಿಜಿ ಮತ್ತು ರಿ ರೆಕಾರ್ಡಿಂಗ್ ನಡೆಯುತ್ತಿದೆ, ಗಣ ರಾಜ್ಯೋತ್ಸವದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ಚೇತನ ಕುಮಾರ್ ಹೇಳಿದ್ದಾರೆ. ಮಾರ್ಚ್ 17 ರಂದು ಪುನೀತ್ ರಾಜ ಕುಮಾರ್ ಹುಟ್ಟುಹಬ್ಬವಿದೆ, ಹೀಗಾಗಿ ಅಷ್ಟರಲ್ಲಿ ಜೇಮ್ಸ್ […]

Advertisement

Wordpress Social Share Plugin powered by Ultimatelysocial