‘ರಾಕಿ ಭಾಯ್’ ಶೈಲಿಯಲ್ಲಿ ಸುತ್ತಿಗೆ ಹಿಡಿದುಕೊಂಡು ಬಂದ ‘ದಳಪತಿ’ ವಿಜಯ್‌

‘ರಾಕಿಂಗ್ ಸ್ಟಾರ್’ ಯಶ್ ಅವರ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಬಾಕ್ಸ್ ಆಫೀಸ್‌ನಲ್ಲಿ ಈ ವರ್ಷ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಈ ಸಿನಿಮಾಗೆ ಇದೆ. ಈ ಚಿತ್ರದಲ್ಲಿ ಯಶ್ ಅವರ ಒಂದು ಪೋಸ್‌ ಸಖತ್ ವೈರಲ್ ಆಗಿತ್ತು. ಕೈಯಲ್ಲಿ ಸುತ್ತಿಗೆ ಹಿಡಿದು, ಕಪ್ಪು ಬಣ್ಣದ ಬಟ್ಟೆಯಲ್ಲಿ ಯಶ್ ಸಖತ್ ಆಗಿಯೇ ಪೋಸ್ ನೀಡಿದ್ದರು. ಇದೀಗ ಅದೇ ಥರ ‘ದಳಪತಿ’ ವಿಜಯ್ ಪೋಸ್ ನೀಡಿದ್ದಾರೆ.’ದಳಪತಿ’ ವಿಜಯ್ ನಟನೆಯ ‘ವಾರಿಸು/ವಾರಸುಡು’ ಸಿನಿಮಾ ಏಕಕಾಲಕ್ಕೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ವಂಶಿ ಪೈಡಿಪಲ್ಲಿ ಈ ಸಿನಿಮಾದ ನಿರ್ದೇಶಕರು. ದೀಪಾವಳಿ ಹಬ್ಬದ ಪ್ರಯುಕ್ತ ಈ ಚಿತ್ರದ ಒಂದು ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ಥೇಟ್ ಯಶ್ ಅವರ ರೀತಿಯಲ್ಲಿ ವಿಜಯ್ ಕೂಡ ಡ್ರೆಸ್ ಹಾಕಿಕೊಂಡಿದ್ದು, ಕೈಯಲ್ಲಿ ದೊಡ್ಡದೊಂದು ಸುತ್ತಿಗೆ ಹಿಡಿದು ಪೋಸ್ ನೀಡಿದ್ದಾರೆ. ಇದನ್ನು ನೋಡಿದವರು, ‘ಅಯ್ಯೋ, ಕೆಜಿಎಫ್ 2 ಸಿನಿಮಾದ ಸ್ಟೈಲ್‌ನ ವಾರಿಸು ಟೀಮ್ ಕಾಪಿ ಮಾಡಿತೇ..’ ಎಂದು ಟ್ರೋಲ್ ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬರ್ತ್​ಡೇ ದಿನ ದೊಡ್ಡದಾಗಿ ಸಿಗ್ನಲ್​ ಕೊಡ್ತಾರಂತೆ ರಾಕಿ ಭಾಯ್

Mon Dec 26 , 2022
ರಾಕಿಂಗ್ ಸ್ಟಾರ್ ಯಶ್ ಸದಾ  ಒಂದು ದೊಡ್ಡ ಗುರಿ ಇಟ್ಟುಕೊಂಡೇ ಬಂದಿದ್ದಾರೆ. ಅದನ್ನ ಸಿನಿಮಾದ ಡೈಲಾಗ್ ರೀತಿ ಹೇಳಿ ಸುಮ್ನೆ ಆಗೋದಿಲ್ಲ. ಹೇಳಿದ್ದನ್ನ ಮಾಡ್ತಾನೇ ಬಂದಿದ್ದಾರೆ. ಕನ್ನಡ ಇಂಡಸ್ಟ್ರೀಯನ್ನ ಬೇರೆ  ಲೆವಲ್​​ಗೆ ತೆಗೆದುಕೊಂಡು ಹೊಗುತ್ತೇವೆ ಅಂತಲೇ ಹೇಳಿದ್ದರು. ಆ ಪ್ರಕಾರ ಅದಕ್ಕಾಗಿ ಶ್ರಮಿಸಿದ್ದು ಇದೆ. ಅದಕ್ಕೆ ದಿ ಬೆಸ್ಟ್​ ಎಕ್ಸಾಂಪಲ್ ಗೊತ್ತೇ ಇದೆ. ಅದುವೇ ಕೆಜಿಎಫ್ ಕನ್ನಡ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ […]

Advertisement

Wordpress Social Share Plugin powered by Ultimatelysocial