ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು. ಹೀಗೆ ಕೊಹ್ಲಿ ನಂತರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿ ಆಯ್ಕೆಯಾದರು

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು.ಹೀಗೆ ಕೊಹ್ಲಿ ನಂತರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿ ಆಯ್ಕೆಯಾದರು. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದುಹಾಕಿ ರೋಹಿತ್ ಶರ್ಮಾ ಅವರನ್ನೇ ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಿತು.ಹೀಗೆ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಬಿಸಿಸಿಐನ ಆಯ್ಕೆಗಾರರು ಇನ್ನೂ ಸಹ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಗಳು ಮಾತ್ರ ನಡೆಯುತ್ತಿವೆ. ಹೀಗಾಗಿ ಟೆಸ್ಟ್ ತಂಡದ ನೂತನ ನಾಯಕನ ಆಯ್ಕೆಗೆ ಮುಂದಾಗದ ಆಯ್ಕೆಗಾರರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳು ಮುಗಿದ ನಂತರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದನ್ನು ಕಡ್ಡಾಯವಾಗಿ ಘೋಷಿಸಲೇಬೇಕಾಗಿದೆ.ಇನ್ನು ಭಾರತ ಟೆಸ್ಟ್ ತಂಡದ ಮುಂದಿನ ನಾಯಕನ ಪಟ್ಟಕ್ಕೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಈ ಮೂವರು ಆಟಗಾರರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಬಿಸಿಸಿಐನ ಅಧಿಕಾರಿಯೋರ್ವರು ಈ ಹಿಂದೆ ತಿಳಿಸಿರುವ ಪ್ರಕಾರ ರೋಹಿತ್ ಶರ್ಮಾ ಅವರನ್ನೇ ಭಾರತ ಟೆಸ್ಟ್ ತಂಡದ ನಾಯಕ ಎಂದು ಘೋಷಿಸುವುದು ಖಚಿತ ಎನ್ನಲಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಸರಣಿಗಳು ಮುಕ್ತಾಯವಾದ ಬಳಿಕ ಬಿಸಿಸಿಐ ಅಧಿಕೃತವಾಗಿ ರೋಹಿತ್ ಶರ್ಮಾ ಅವರ ಹೆಸರನ್ನು ಘೋಷಿಸಲಿದೆ ಎಂದು ಆ ಬಿಸಿಸಿಐನ ಅಧಿಕಾರಿ ಮಾಹಿತಿ ನೀಡಿದ್ದರು. ಆದರೆ ಇದೀಗ ಈ ಘೋಷಣೆ ನಡೆಯುವ ಮುನ್ನವೇ ಟೀಮ್ ಇಂಡಿಯಾ ಆಯ್ಕೆಗಾರರು ರಾಜೀನಾಮೆಯನ್ನು ಸಲ್ಲಿಸಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದಿದೆ ಓದಿ.ಸಭೆಗೂ ಮುನ್ನವೇ ರಾಜೀನಾಮೆ ನೀಡಿದ ಅಬೆಯ್ ಕುರುವಿಲ್ಲಟೀಮ್ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಪ್ರಮುಖರಾಗಿದ್ದ ಭಾರತದ ಮಾಜಿ ವೇಗಿ ಅಬೆಯ್ ಕುರುವಿಲ್ಲ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬುದರ ಕುರಿತು ನಡೆಯಬೇಕಾಗಿದ್ದ ದೊಡ್ಡ ಸಭೆಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹೌದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಈ ಸಭೆ ನಡೆಯಬೇಕಿತ್ತು ಆದರೆ ಇದೀಗ ಅಬೆಯ್ ಕುರುವಿಲ್ಲ ರಾಜೀನಾಮೆ ಸಭೆ ವಿಳಂಬವಾಗುವಂತೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಇದು ಬಹುತೇಕ ಚೆಸ್ ಆಟದಂತೆ ಭಾಸವಾಗುತ್ತಿದೆ': ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಭಾರತದ ತಾರೆಯೊಂದಿಗೆ ನಡೆದ ಯುದ್ಧವನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ ನೆನಪಿಸಿಕೊಂಡಿದ್ದಾರೆ

Thu Feb 10 , 2022
      2020-21ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್‌ಚಾಗ್ನೆ ಮತ್ತು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಡುವಿನ ಯುದ್ಧವು ಆಸಕ್ತಿದಾಯಕ ವೀಕ್ಷಣೆಗೆ ಕಾರಣವಾಯಿತು. ಅಶ್ವಿನ್ ಮೂರು ಟೆಸ್ಟ್‌ಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದು, ಗಾಯದ ಕಾರಣ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಮೂರು ಪಂದ್ಯಗಳ ಅವಧಿಯಲ್ಲಿ, ಅಶ್ವಿನ್ ಆರು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಲ್ಯಾಬ್ಸುಚಾಗ್ನೆ ಅವರನ್ನು ಔಟ್ ಮಾಡಿದ್ದರು, ಆದರೆ ಆಸೀಸ್ ಬ್ಯಾಟರ್ ಸಿಡ್ನಿಯಲ್ಲಿ ನಡೆದ ಮೂರನೇ […]

Advertisement

Wordpress Social Share Plugin powered by Ultimatelysocial