ರಾಯಲ್ಸ್ ಟಕ್ಕರ್:ಪಂಜಾಬ್ ಪಂಚರ್

ಸತತ ಐದು ಗೆಲುವಿನೊಂದಿಗೆ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿನ್ನೆ ಶಾಕ್ ಎದುರಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧ ಕಠಿಣ ಸವಾಲು ಪೇರಿಸಿದರೂ ಪಂಜಾಬ್ ಪರಭಾಗೊಂಡಿತು.ಸ್ಮಿತ್,ಸಂಜು,ಸ್ಟೋಕ್ಸ್ ಸ್ಫೋಟಕ ಆಟದ ಎದುರು ಪಂಜಾಬ್ ಗೆಲುವಿನ ಕನಸು ಭಗ್ನಗೊಂಡಿತು.

ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ 13 ನೇ ಆವೃತಿಯ ಐಪಿಎಲ್ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಉಭಯ ತಂಡಗಳಿಗೂ ನಿನ್ನೆಯ ಪಂದ್ಯವು ಮಾಡುವ ಇಲ್ಲವೇ ಮಡಿ ಕದನವಾಗಿತ್ತು. ನಿರ್ಣಾಯಕ ಕದನದಲ್ಲಿ ಟಾಸ್ ಗೆದ್ದ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಆಯ್ದುಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡವು ಆರಂಭದಲ್ಲೇ ದೊಡ್ಡ ಆಘಾತ ಅನುಭವಿಸಿತು. ವೇಗಿ ಜೋಫ್ರಾ ಆರ್ಚರ್ ಮೊದಲ ಓವರ್ನಲ್ಲೇ ಮಂದೀಪ್ ಸಿಂಗ್ ಅವರನ್ನು ಪೆವಿಲಿಯನ್ ಗೆ ಅಟ್ಟಿ ರಾಯಲ್ಸ್ ಗೆ ಮೊದಲ ಯಶಸ್ಸು ತಂದು ಕೊಟ್ಟರು. ಸಂದೀಪ್ ಸಿಂಗ್ ಔಟಾಗುತ್ತಿದ್ದಂತೆಯೆ ರಂಗ ಪ್ರವೇಶ ಮಾಡಿದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದ್ರು. ಗೇಲ್ ಘರ್ಜನೆಗೆ ಪಂಜಾಬ್ ನಾಯಕ ರಾಹುಲ್ ತಕ್ಕ ಸಾಥ್ ನೀಡಿದ್ರು. ಗೇಲ್-ರಾಹುಲ್ ಆರ್ಭಟದ ಪರಿಣಾಮ ಮೊದಲ ಪವರ್ಪ್ಲೇ ಮುಕ್ತಾಯಕ್ಕೆ ಪಂಜಾಬ್ ತಂಡದ ಸ್ಕೋರ್ ಅರ್ಧಶತಕದ ಗೆರೆ ದಾಟಿತು.

ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಆಟವಾಡಿದ ಗೇಲ್-ರಾಹುಲ್ ಜೋಡಿಯು 81 ರನ್ ಗಳ ಜೊತೆಯಾಟ ನಡೆಸಿತು. ಸ್ಫೋಟಕ ಆಟವಾಡಿದ ಗೇಲ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ತಂಡದ ಮೊತ್ತ 120 ದಾಟುತ್ತಿದ್ದಂತೆಯೇ ಬಿರುಸಿನ ಹೊಡೆತಕ್ಕೆ ಕೈ ಹಾಕಿ ರಾಹುಲ್ ಕೈ ಸುಟ್ಟುಕೊಂಡ್ರು. ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ 41 ಎಸೆತದಲ್ಲಿ 2 ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 46 ಸಿಡಿಸಿದ್ರು.

ನಂತರ ಬಂದ ಪೂರನ್ ಕೂಡ ಪರಾಕ್ರಮ ಮೆರೆದರು. ಆರಂಭದಲ್ಲೇ ಸಿಕ್ಸರ್ಗಳ ಮೂಲಕ ಪವರ್ ತೋರಿಸಿದರು. ಮೂರುನ ಮನಮೋಹಕ ಸಿಕ್ಸರ್ ಸಿಡಿಸಿ ಪೂರನ್ ಮಿಂಚಿದ್ರು.18ನೇ ಓವರ್ನಲ್ಲಿ ತೆವಾಠಿಯಾ ಬೌಂಡರಿ ಲೈನ್ನಲ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಪೂರನ್ ವಿಕೆಟ್ ವೊಪ್ಪಿಸಲೇ ಬೇಕಾಯಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ರೂ ಮತ್ತೊಂದು ಕಡೆ ಗೇಲ್ ಸಿಂಹ ಘರ್ಜನೆ ನಡೆಸಿದ್ರು. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಗೇಲ್ ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸಿದ್ರು. ರಾಯಲ್ಸ್ ಬೌಲರ್ ಗಳ ಮೇಲೆ ಸುಂಟರಗಾಳಿಯಂತೆ ಎರಗಿದ ಯುನಿವರ್ಸಲ್ ಬಾಸ್ ಸಿಕ್ಸರ್ ಗಳ ಸುರಿಮಳೆಗೈದ್ರು. 63 ಎಸೆತಗಳನ್ನು ಎದುರಿಸಿದ ಗೇಲ್ 99 ರನ್ಗಳಿಸಿ ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದ್ರು. ಗೇಲ್ ಐಪಿಎಲ್ ಇತಿಹಾಸದಲ್ಲಿ ಕೇವಲ 1 ರನ್ ನಿಂದ ಎರಡು ಬಾರಿ ಶತಕ ವಂಚಿತರಾದ ಮೊದಲ ಆಟಗಾರ ಎನಿಸಿಕೊಂಡರು. 2019 ರಲ್ಲಿ ಗೇಲ್ ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ ಕೂಡ ಗೇಲ್ 99 ರನ್ ಸಿಡಿಸಿ ಕೇವಲ ಒಂದು ರನ್ ನಿಂದ ಶತಕ ವಂಚಿತರಾಗಿದ್ರು. ನಿನ್ನೆ 8 ಅಮೋಘ ಸಿಕ್ಸರ್ ಸಿಡಿಸಿದ ಗೇಲ್ ನೋಡುಗರಿಗೆ ಭರ್ಜರಿ ರಸದೌತನ ನೀಡಿದ್ರು. ಅಂತಿಮವಾಗಿ ಪಂಜಾಬ್ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿತು.

186 ರನ್ ಗಳ ಕಠಿಣ ಸವಾಲನ್ನು ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡವು ಉತ್ತಮ ಆರಂಭ ಪಡೆಯಿತು. ಸ್ಟೋಕ್ಸ್ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ರು. ಪಂಜಾಬ್ ಬೌಲರ್ ಗಳ ಮೇಲೆ ಸವಾರಿ ಮಾಡಿದ ಸ್ಟೋಕ್ಸ್ ಕೇವಲ 25 ಎಸೆತದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ವಿಕೆಟ್ ವೊಪ್ಪಿಸಿದ್ರು. ನಂತರ ಬಂದ ಸಂಜು ಸ್ಯಾಮ್ಸನ್ ಕೂಡ ಸ್ಫೋಟಕ ಆಟಕ್ಕೆ ಒತ್ತುಕೊಟ್ರು. ಪರಿಣಾಮ ಪಂಜಾಬ್ ತಂಡವು 10 ಮುಕ್ತಾಯಕ್ಕೆ 100ರ ಗಡಿ ದಾಟಿತು. 10 ಓವರ್ ನಲ್ಲಿ ದಾಳಿಗಿಳಿದ ಸ್ಪಿನ್ನರ್ ಮುರುಗನ್ ಅಶ್ವಿನ್ 30 ರನ್ ಸಿಡಿಸಿದ್ದ ಉತ್ತಪ್ಪರನ್ನ ಪೆವಿಲಿಯನ್ಗಟ್ಟುವ ಮೂಲಕ ಸ್ಫೋಟಕ ಜೊತೆಯಾಟವನ್ನು ಬೇರ್ಪಡಿಸಿದ್ರು. ಸಂಜು ಸಾಂಮ್ಸನ್ ಕೂಡ ನಿನ್ನೆ ಪ್ರಚಂಡ ಬ್ಯಾಟಿಂಗ್ ದಾಳಿ ನಡೆಸಿದ್ರು. ಬಿರುಸಿನ ಬ್ಯಾಟಿಂಗ್ ನಡೆಸಿದ ಸಂಜು ರನೌಟ್ ಗೆ ಬಲಿಯಾದ್ರು. ನಿನ್ನೆ 25 ಎಸೆತಗಳನ್ನು ಎದುರಿಸಿದ ಸಂಜು 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 48 ರನ್ ಸಿಡಿಸಿ ರನ್ ಅಂತರವನ್ನು ಕಡಿಮೆ ಗೊಳಿಸಿದ್ರು. ಅಂತಿಮವಾಗಿ ಸ್ಮಿತ್-ಬಟ್ಲರ್ ಸ್ಫೋಟಕ ಆಟವಾಡಿದ ಪರಿಣಾಮ ರಾಯಲ್ಸಲ್ ಗೆಲುವಿನ ದಡ ಸೇರಿತು. ಡೆತ್ ಓವರ್ ನಲ್ಲಿ ಸ್ಮಿತ್ ಮತ್ತು ಬಟ್ಲರ್ ಆರ್ಭಟ ರಾಯಲ್ಸ್ ತಂಡವು ಗೆಲುವಿನ ಮಂದಹಾಸ ಬೀರಲು ಕಾರಣವಾಯಿತು. ಅಂತಿಮವಾಗಿ ಸ್ಮಿತ್ ಪಡೆ 17.3 ಓವರ್ ಗಳಲ್ಲಿ ಗೆಲುವಿನ ಗುರಿ ತಲುಪಿ 8 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತು.

ಇಂದು ಐಪಿಎಲ್ ಅಭಿಮಾನಿಗಳಿಗೆ ಸೂಪರ್ ಶನಿವಾರ. ಯಾಕೆಂದರೆ ಇಂದು ಕಲರ್ ಫುಲ್ ಟೂರ್ನಿಯಲ್ಲಿ ಡಬಲ್ ಧಮಾಕ ನಡೆಯಲಿದೆ. ಮೊದಲ ಕದನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮಖಿಯಾಗಲಿವೆ. ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದ್ದು, ಡೆಲ್ಲಿ ತಂಡ ಪ್ಲೇ ಆಫ್ ಹಂತಕ್ಕೇರಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇನ್ನೂ ಈ ಭಾರಿಯ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಆರ್.ಸಿ.ಬಿ ತಂಡವು ಇಂದಿನ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಲಗ್ಹೆ ಇಡುವ ಚಿಂತನೆಯಲ್ಲಿದ್ರೆ ,ಸನ್ ರೈಸರ್ಸ್ ಪಾಲಿಗೆ ಇದು ಔಪಾಚರಿಕತೆಯ ಪಂದ್ಯವಾಗಿದೆ. ಒಟ್ಟಿನಲ್ಲಿ ಇಂದು ನಡೆಯುವ ಕೊಲ್ಲಿ ಕದನದಲ್ಲಿ ಯಾರು ಗೆಲುವಿನ ಕೇಕೆ ಹಾಕ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ…ಅಬ್ದುಲ್ ಸತ್ತಾರ್..ಸ್ಪೋರ್ಡ್ಸ್ ಬ್ಯುರೋ..ಸ್ಪೀಡ್ ನ್ಯೂಸ್ ಕನ್ನಡ ಬೆಂಗಳೂರು..

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಚಲೋ ಕುರಿತು ಜಾಲಹಳ್ಳಿ ತಾಲೂಕು ಹೋರಾಟ

Sat Oct 31 , 2020
ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಾಲಹಳ್ಳಿ ತಾಲ್ಲೂಕು ಘೋಷಣೆ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್ ನಾಡಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಶೀಘ್ರವೇ ಬೆಂಗಳೂರು ಹೋಗಿ ನ್ಯಾಯಾಂಗ ಹೋರಾಟ ನಡೆಸುವುದು ಹಾಗೂ ಜನತೆಯನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಶಾಸಕ ಶಿವನಗೌಡ ನಾಯಕ ಕ್ರಮ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ತಿರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಸಮಿತಿ ಮುಖಂಡರಾದ ಆದನಗೌಡ ಪಾಟೀಲ್, ಭೂತಪ್ಪ ದೇವರಮನಿ, ಬಸವರಾಜ ಎಚ್.ಪಿ, ಸಿದ್ದನಗೌಡ ಪಾಟೀಲ್, […]

Advertisement

Wordpress Social Share Plugin powered by Ultimatelysocial