‘ಆರ್ ಆರ್ ಆರ್’ ಸಿನಿಮಾ ಇದೀಗ 1000 ಕೋಟಿ ರೂ ಕ್ಲಬ್ ಸೇರಿದೆ.

ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರ ಒಂದೊಂದೇ ದಾಖಲೆಗಳನ್ನು ಮುರಿಯುತ್ತಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಆರ್ ಆರ್ ಆರ್’ ಸಿನಿಮಾ ಇದೀಗ 1000 ಕೋಟಿ ರೂ ಕ್ಲಬ್ ಸೇರಿದೆ.

‘ಆರ್ ಆರ್ ಆರ್’ ಚಿತ್ರವು ಬಿಡುಗಡೆಯಾಗಿ ಕೇವಲ 16 ದಿನದಲ್ಲಿ ವಿಶ್ವದಾದ್ಯಂತ ಸಹಸ್ರ ಕೋಟಿ ರೂ ಗಳಿಸಿದೆ.

ಜಾಗತಿಕವಾಗಿ 1000 ಕೋಟಿ ರೂ. ದಾಟಿದ ಇತರ ಎರಡು ಭಾರತೀಯ ಚಿತ್ರಗಳೆಂದರೆ ದಂಗಲ್ ಮತ್ತು ರಾಜಮೌಳಿ ಅವರ ಬಾಹುಬಲಿ 2.

ಇದರೊಂದಿಗೆ, ‘ಆರ್ ಆರ್ ಆರ್’ ಚಿತ್ರವು ಭಜರಂಗಿ ಭಾಯಿಜಾನ್, ಸೀಕ್ರೆಟ್ ಸೂಪರ್‌ಸ್ಟಾರ್ ಮತ್ತು ಪಿಕೆ ಸಿನಿಮಾಗಳನ್ನು ಹಿಂದಿಕ್ಕಿ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಚಲನಚಿತ್ರವಾಗಿದೆ.

ರಾಮ್ ಚರಣ್, ಜೂ. ಎನ್ ಟಿಆರ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಖನಿ, ರೇ ಸ್ಟೀವನ್ಸನ್, ಅಲಿಸನ್ ಮುಂತಾದ ಪ್ರಮುಖರು ಚಿತ್ರದಲ್ಲಿ ನಟಿಸಿದ್ದಾರೆ.

ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಸಿನಿಮಾ ‘ಆರ್ ಆರ್ ಆರ್’ ನ್ನು ಡಿವಿವಿ ಎಂಟರ್‌ ಟೈನ್‌ಮೆಂಟ್‌ ನ ಡಿ.ವಿ.ವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರ ಮಾರ್ಚ್ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ!

Mon Apr 11 , 2022
ಬೇಸಿಗೆಯಲ್ಲಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಚರ್ಮದ ಆರೋಗ್ಯ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸಲು ನೀರು ಹಾಗೂ ತಾಜಾ ಹಣ್ಣಿನ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ನಿಂಬೆಹಣ್ಣು, ಬೇಲದ ಹಣ್ಣು, ಮಾವಿನಕಾಯಿಯ ಪಾನಕಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಳ್ಳಬಹುದು. ಚರ್ಮವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಇರುವ ಸರಳ ಮಾರ್ಗಗಳುಅಲೋವೆರಾದ ಒಂದು ಎಲೆಯನ್ನು ಕತ್ತರಿಸಿ ಮೇಲಿನ […]

Advertisement

Wordpress Social Share Plugin powered by Ultimatelysocial