ರುಡ್ಯಾರ್ಡ್ ಕಿಪ್ಲಿಂಗ್ ಪ್ರಖ್ಯಾತ ಕತೆಗಾರ

ಪ್ರಖ್ಯಾತ ಕತೆಗಾರ, ‘ಜಂಗಲ್ ಬುಕ್’ ಅಂತಹ ಕೃತಿಗಳ ಸೃಷ್ಟಿಕರ್ತ ಮತ್ತು ನೊಬೆಲ್ ಪಾರಿತೋಷಕ ಸಂಮಾನಿತ ರುಡ್ಯಾರ್ಡ್ ಕಿಪ್ಲಿಂಗ್ ಅವರು ನಮ್ಮ ‘ಭಾರತದ ಬ್ಯಾಕ್ಯಾರ್ಡಿ’ನವರು. ಅವರು ಜನಿಸಿದ್ದು ಭಾರತದಲ್ಲಿ. ಬೊಂಬಾಯಿನ ವಿ.ಟಿ. ರೈಲು ನಿಲ್ದಾಣದ ಸಮೀಪದ ‘ಜೆ.ಜೆ.ಸ್ಕೂಲ್ ಆಫ್ ಆರ್ಟ್ ಮಹಾವಿದ್ಯಾಲಯ’ದ ಶಿಕ್ಷಕರ ವಸತಿಗೃಹದಲ್ಲಿ ಅವರು 1865ರ ಡಿಸೆಂಬರ್ 30ರಂದು ಜನಿಸಿದರು.
ರುಡ್ಯಾರ್ಡ್ ಕಿಪ್ಲಿಂಗರ ತಂದೆ ಲಾಕ್ ವುಡ್ ಕಿಪ್ಲಿಂಗ್ ಅವರು ಜೆ. ಜೆ. ಸ್ಕೂಲ್ ಆಫ್ ಆರ್ಟ್ ಶಿಕ್ಷಣ ಮಹಾಕಲಾಸಂಸ್ಥೆಯಲ್ಲಿ ಶಿಕ್ಷಕರಾಗಿದ್ದು ಮುಂದೆ ಪ್ರಿನ್ಸಿಪಾಲರೂ ಆದರು. ಅವರು ಪ್ರಖ್ಯಾತ ವರ್ಣಚಿತ್ರ ಕಲಾಕಾರ, ಶಿಲ್ಪಿ ಮತ್ತು ಉಪನ್ಯಾಸಕರೆಂದು ಪ್ರಸಿದ್ಧಿ ಪಡೆದಿದ್ದರು. ತಾಯಿ, ‘ಆಲಿಸ್’ ಪ್ರಖ್ಯಾತ ಕಲಾಕಾರರಾದ ಪೇಂಟರ್ ಎಡ್ವರ್ಡ್ ಬರ್ನ್-ಜೋನ್ಸ್ ಅವರ ಸಂಬಂಧಿಯಲ್ಲದೆ, ಮ್ಯಾಗ್ಡೊನಾಲ್ಡ್ ಸೋದರಿಯರೆಂದು ಪ್ರಖ್ಯಾತರಾದ ನಾಲ್ವರಲ್ಲಿ ಒಬ್ಬರು. ಈ ದಂಪತಿಗಳು ಬೊಂಬಾಯಿಗೆ 1865ರಲ್ಲಿ ಬಂದರು. 1875ರಲ್ಲಿ ಅವರು ಲಾಹೋರಿನ ‘ಮೇಯೋ ಸ್ಕೂಲ್ ಆಫ್ ಅರ್ಟ್ ಮ್ಯೂಸಿಯಮ್ಮಿನಲ್ಲಿ ‘ಕ್ಯುರೇಟರ್’ ಆಗಿ ಕಾರ್ಯನಿರ್ವಹಿಸಲಾರಂಭಿಸಿದರು.
ಲಾಹೋರಿನಲ್ಲಿ ತಾವು ವಾಸಿಸುತ್ತಿದ್ದ ಮನೆಯ ಬಗ್ಗೆ ರುಡ್ಯಾರ್ಡ್ ಕಿಪ್ಲಿಂಗರು ತಮ್ಮ ‘ಕಿಮ್’ ಎಂಬ ಕಥಾಸಂಕಲನದಲ್ಲಿ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಆ ಮನೆಯನ್ನು ‘ವಂಡರ್ ಹೌಸ್’ ಅಥವಾ ‘ಅಜೀಬ್ ಘರ್’ ಎಂದು ಅವರು ಪ್ರೀತಿಯಿಂದ ವರ್ಣಿಸಿದ್ದಾರೆ. 13ನೆಯ ವಯಸ್ಸಿನಲ್ಲೇ ಅವರು ಬರೆಯಲು ಆರಂಭಿಸಿದ್ದರು. ಅವರನ್ನು 6ನೆಯ ವಯಸ್ಸಿನಿಂದ ಐದು ವರ್ಷಗಳ ಅವಧಿಯಕಾಲ, ಇಂಗ್ಲೆಂಡಿನ ಶಾಲೆಯೊಂದರಲ್ಲಿ ಓದಲು ಬಿಡಲಾಗಿತ್ತು. ಇಂಗ್ಲೆಂಡಿನಲ್ಲಿನ ಓದಿನ ದಿನಗಳು ತಮಗೆ ಪ್ರಿಯವಾಗಿರಲಿಲ್ಲ ಎಂಬ ಮಾತುಗಳು ಅವರ ಕೃತಿ ‘ಬ್ಯಾ ಬ್ಯಾ ಬ್ಲ್ಯಾಕ್ ಶೀಪ್’ನಲ್ಲಿ ಕಾಣಬರುತ್ತವೆ. ಮಿಲಿಟರಿಯಲ್ಲಿ ತರಬೇತಿ ಪಡೆಯಲು ಯುನೈಟೆಡ್ ಸರ್ವೀಸಸ್ ಕಾಲೇಜಿಗೆ ಸೇರಿದ್ದರೂ ಕಣ್ಣಿನ ತೊಂದರೆ, ಜೊತೆಗೆ ಆ ಕುರಿತಾದ ನಿರಾಸಕ್ತಿಗಳು ಅವರನ್ನು ಬೇರೆಡೆಗೆ ತಿರುಗುವಂತೆ ಮಾಡಿದವು. ಈ ಕುರಿತಾದ ಮಾಹಿತಿಗಳು ‘ದಿ ಲೈಟ್ ದಟ್ ಫೈಲ್ಡ್’ ಎಂಬ ಕಥಾನಕ ಮತ್ತು ಅವರ ಆತ್ಮಚರಿತ್ರೆಗಳಲ್ಲಿ ಕಾಣಬರುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಷ್ಣುವರ್ಧನ್ ನೆನಪು

Sun Jan 1 , 2023
ಬೇಡವೆಂದರೂ ದಿನಗಳು ವರ್ಷಗಳು ಉರುಳುತ್ತವೆ. ವರ್ಷದ ಕೊನೆ ಬಂದು ಹೊಸ ವರ್ಷವೂ ಬರುತ್ತೆ. ಏನೋ ಹೊಸ ವರ್ಷ ಬಂದಿತು ಎಂಬ ಉತ್ಸಾಹವೂ ಇರುತ್ತೆ. ಹೀಗೆ ಒಂದು ವರುಷ ಮುಗಿಯಿತು ಮತ್ತೊಂದು ವರ್ಷ ಬಂದಿತು ಎಂದು ಸಂಭ್ರಮಿಸುವ ಹೊತ್ತಿನಲ್ಲಿ ಕೆಲವು ವರ್ಷ ಹಿಂದೆ, ನಮಗೆಲ್ಲ ಪ್ರಿಯರಾಗಿದ್ದ ನಟ ವಿಷ್ಣುವರ್ಧನ್ ಮತ್ತು ಮಹಾನ್ ಸಂಗೀತಗಾರ ಸಿ ಅಶ್ವಥ್ ಹೋಗಿಬಿಟ್ಟದ್ದು, ಡಿಸೆಂಬರ್ ತಿಂಗಳ ಮಂಜು ಕವಿದ ವಾತಾವರಣದ ಮಬ್ಬು ನಮ್ಮ ಹೃದಯಾಂತರಾರಾಳಕ್ಕೂ ಹರಡಿದ ಅನುಭಾವ […]

Advertisement

Wordpress Social Share Plugin powered by Ultimatelysocial