ರೂಲ್ಸ್ ಪಾಲಿಸಬೇಕಾದ ಸಚಿವರೇ ರೂಲ್ಸ್ ಗಳನ್ನ ಮರೆತ್ತಿದ್ದಾರೆ

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣಕ್ಕೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ ಕೊರೊನಾ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭ ಆರೋಗ್ಯ ಸಚಿವರು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದರು. ತಾವು ಮಾಸ್ಕ್ ಧರಿಸದೇ, ಸ್ಯಾನಿಟೈಸರ್ ಬಳಸದೇ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸಚಿವರೇ ನಿಯಮ ಉಲ್ಲಂಘಿಸಿದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರ ಲಾಕ್ ಡೌನ್ ನಡುವೆಯೂ ಕೆಲ ವಿನಾಯಿತಿ ನೀಡಿದೆ. ಆದರೆ, ಸಾಮಾಜಿಕ ಅಂತರವನ್ನು ಸ್ಪಷ್ಟವಾಗಿ ಕಾಯ್ದುಕೊಳ್ಳುವಂತೆ ಮತ್ತೆ ಮತ್ತೆ ಮನವಿ ಮಾಡುತ್ತಲೇ ಇದೆ. ಈ ಹೊಣೆಯನ್ನು ಸ್ಪಷ್ಟವಾಗಿ ಪಾಲಿಸಿ, ಇತರರಿಗೂ ಮಾದರಿಯಾಗ ಬೇಕಾದ ಆರೋಗ್ಯ ಸಚಿವರೇ ಇಂದು ನಿಯಮ ಉಲ್ಲಂಘಿಸಿದ್ದು, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ,

ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

9pm 9minute ಮತ್ತೊಮ್ಮೆ ಜನರನ್ನ ಎಚ್ಚರಿಸಿದ ಪ್ರಧಾನಿ ಮೋದಿ

Sun Apr 5 , 2020
ಕೊರೋನಾ ಸೋಂಕು ವಿರುದ್ಧ ಭಾರತೀಯರು ಒಗ್ಗಟ್ಟು ಪ್ರದರ್ಶಿಸಲು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುತ್ ದ್ದೀಪಗಳನ್ನು ಆರಿಸಿ ಹಣತೆ, ದೀಪ ಹಚ್ಚಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದಕ್ಕೆ ಕ್ಷಣಗಣನೆ ಆರಂಭವಾಗಿದ್ದು 9pm9minute ಎಂದು ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮೂಲಕ ಮತ್ತೊಮ್ಮೆ ಎಚ್ಚರಿಸಿದ್ದಾರೆ.   ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ Please follow and like us:
narendra modi

Advertisement

Wordpress Social Share Plugin powered by Ultimatelysocial