ಜನಸಾಮಾನ್ಯರಿಗೊಂದು ರೂಲ್ಸ್ ಪಬ್ ಗಳಿಗೊಂದು ರೂಲ್ಸ್…..

ಜನಸಾಮಾನ್ಯರಿಗೊಂದು ರೂಲ್ಸ್ ಪಬ್ ಗಳಿಗೊಂದು ರೂಲ್ಸ್…..ಗೋಕುಲ್ ರೋಡ್ ಪೊಲೀಸರೇ ಇದೇನಾ ನಿಮ್ಮ ಸಾಮಾಜಿಕ‌ ಕಳಕಳಿ….. ?

ಹುಬ್ಬಳ್ಳಿ: ನ್ಯೂ ಇಯರ್ ಪಾರ್ಟಿಗೆ ಸರ್ಕಾರ ಕೆಲ ಸಮಯ ನಿಗದಿಪಡಿಸಿತ್ತು.‌ ಆದ್ರೆ ಆ ನಿಗದಿತ ಸಮಯ ಮುಗಿದರೂ ಆ ಒಂದು ಹೊಟೇಲ್ ಹಾಗೂ ಪಬ್ ನ ಬಾಗಿಲು ಮಾತ್ರ ಓಪನ್ ಇತ್ತು…

ಹೌದು,,, ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ಹಾಗೂ‌ ಕ್ಯೂಬಿಕ್ಸ್ ಹೊಟೇಲ್ ನಲ್ಲಿ ಮಧ್ಯರಾತ್ರಿ 2 ಗಂಟೆಯಾದ್ರೂ ಕೂಡ, ಸಾರ್ವಜನಿಕರಿಗೆ ಮಾತ್ರ ಯಾವುದೇ ನಿಯಮ‌ಪಾಲನೆಯಾಗಲಿಲ್ಲ‌. ಧಾರವಾಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯ ವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಆಚರಣೆಯ ಸಮಯ ಮುಗಿದರೂ ಗೋಕುಲ್ ರಸ್ತೆಯ ಐಸ್ ಕ್ಯೂಬ್ ಪಬ್ ಮತ್ತು ಕ್ಯೂಬಿಕ್ಸ್ ಹೊಟೇಲ್ ಮಾತ್ರ ಓಪನ್ ಆಗಿಯೇ ಇತ್ತು.‌ ಇವೆಲ್ಲ ಓಫನ್ ಇರೋದನ್ನ ನೋಡಿಯೂ ಕಣ್ಣಿದ್ದೂ ಕುರುಡರಂತೆ ವರ್ತಿಸಿದ ಗೋಕುಲ ರೋಡ್ ಪೊಲೀಸರ ವರ್ತನೆಗೆ ಇದೀಗ ಸಾರ್ವಜನಿಕ‌ವಲಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.ಪೊಲೀಸರೇ ಮುಂದೆ ನಿಂತು ಹೊಟೇಲ್ ಗೆ ಸಾಥ್ ನೀಡಿದ್ರಾ ಅನ್ನೋ ಅನುಮಾನಗಳು ಮೂಡುತ್ತಿವೆ. ರಾತ್ರಿ 2 ಗಂಟೆಯಾದ್ರೂ ಓಪನ್ ಆಗಿಯೇ ಇದ್ದ ಪಬ್ ಮತ್ತು ಹೊಟೇಲ್ ಬಂದ್ ಮಾಡಿಸಲು ಮೀನಾಮೇಷ ಎಣಿಸುತ್ತಿದ್ದ ಪೊಲೀಸರು, ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದಂತೆಯೇ, ಪಬ್ ಮತ್ತು ಹೊಟೇಲ್ ಬಂದ್ ಮಾಡಿಸಿ ಅಲ್ಲಿದ್ದ ಜನರನ್ನು ಹೊರ ಕಳಿಸಲು ಮುಂದಾಗಿದ್ದಾರೆ. ಈ ನಡುವೆ ಪೊಲೀಸರ ಈ ನಡೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಜನಸಾಮಾನ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದಂದು ಸಣ್ಣ ಇಯರ್ ಪೋನ್ ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..

Mon Jan 2 , 2023
ಕಾರ್ತಿಕ್ (27) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ಹೊಸವರ್ಷದಂದೇ ಉತ್ತರಪ್ರದೇಶ ಮೂಲದ ರಜನೀಶ್ ಎಂಬಾತನ ಬರ್ತಡೇ ಇತ್ತು. ಹೀಗಾಗಿ ನ್ಯೂ ಇಯರ್ ಹಾಗೂ ಬರ್ತಡೇ ಪಾರ್ಟಿ ಮಾಡಲು ಸ್ನೇಹಿರನ್ನ ಕರೆಸಿಕೊಂಡಿದ್ದ. ದೊಡ್ಡನಾಗಮಂಗಲದ ನಿರ್ಮಾಣ ಹಂತದ ಬಿಲ್ಡಿಂಗ್ ಒಂದರಲ್ಲಿ ಪಾರ್ಟಿ .. ರಜನೀಶ್ ಗೆ ಮಲಗುವ ವೇಳೆ ಇಯರ್ ಪೋನ್ ಕಿವಿಗೆ ಹಾಕಿಕೊಂಡು ಮ್ಯೂಸಿಕ್ ಕೇಳುವ ಅಭ್ಯಾಸ.. ಕಳೆದ 1 ರ ರಾತ್ರಿ ಪಾರ್ಟಿ ಮುಗಿದ ನಂತರ ರಜನೀಶ್ ಇಯರ್ ಪೋನ್ […]

Advertisement

Wordpress Social Share Plugin powered by Ultimatelysocial