ರಷ್ಯಾ ಅಧ್ಯಕ್ಷ ಪುಟಿನ್ ಆಯಸ್ಸು ಇನ್ನೆರಡು ವರ್ಷವೂ ಇಲ್ಲ;

ಮಾಸ್ಕೋ, ಜೂನ್ 28: ಹಠ ಹಿಡಿದು ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಗ್ಯದ ಬಗ್ಗೆ ಈಗಾಗಲೇ ಬಹಳಷ್ಟು ಸುದ್ದಿಗಳು ಬಂದು ಹೋಗಿವೆ. ಪುಟಿನ್‌ಗೆ ಯುದ್ಧೋನ್ಮಾದದ ಜೊತೆಗೆ ದೈಹಿಕ ಕಾಯಿಲೆ, ಮಾನಸಿಕ ಕಾಯಿಲೆಗಳು ಅಂಟಿಕೊಂಡು ರೋಗಗ್ರಸ್ತ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ ಬಹಳಷ್ಟು ವರದಿಗಳು ಬಂದಿವೆ.

ಅಮೆರಿಕದ ಗುಪ್ತಚರರು ಮತ್ತು ರಷ್ಯಾದ ಮಾಜಿ ಗುಪ್ತಚರರು ನೀಡಿರುವ ಮಾಹಿತಿಯನ್ನಾಧರಿಸಿ ಈ ಸುದ್ದಿಗಳು ಹರಿದಾಡುತ್ತಿರುವುದುಂಟು. ಇದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಹಲವು ವರ್ಷಗಳ ಮುಂಚಿನಿಂದಲೂ ಬರುತ್ತಿರುವ ಸುದ್ದಿ ಎಂದು ಉಪೇಕ್ಷಿಸಬಹುದು.

ಆದರೆ, ಇತ್ತೀಚಿನ ಕೆಲ ಘಟನೆಗಳು, ವ್ಲಾದಿಮಿರ್ ಪುಟಿನ್ ಅವರ ವರ್ತನೆಗಳು ಆವರ ಆರೋಗ್ಯ ಸ್ಥಿತಿ ಬಗೆಗಿನ ಸಂಶಯವನ್ನು ಇನ್ನಷ್ಟು ದಟ್ಟಗೊಳಿಸುವಂತಿವೆ. ಮೇಲಾಗಿ ಉಕ್ರೇನ್ ದೇಶದ ಗುಪ್ತಚರರೂ ಕೂಡ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಸ್ಫೋಟಕ ಮಾಹಿತಿ ಕಲೆಹಾಕಿದ್ದಾರೆನ್ನಲಾಗಿದೆ.

ಉಕ್ರೇನ್ ಗುಪ್ತಚರ ಸಂಸ್ಥೆಯೊಂದರ ಮುಖ್ಯಸ್ಥರು ಹೇಳುವ ಪ್ರಕಾರ ವ್ಲಾದಿಮಿರ್ ಪುಟಿನ್ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು, ಹೆಚ್ಚು ವರ್ಷ ಬದುಕುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೆರಡು ವರ್ಷವೂ ಬದುಕೋದಿಲ್ಲಉಕ್ರೇನ್ ದೇಶದ ಗುಪ್ತಚರರು ರಷ್ಯಾದಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ರಷ್ಯಾದ ಉನ್ನತ ಮಟ್ಟದಲ್ಲಿ ಗುಪ್ತಚರರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಹೆಚ್ಚು ಆಯಸ್ಸು ಇಲ್ಲ. ಅವರು ಇನ್ನೆರಡು ವರ್ಷವೂ ಬದುಕುವುದಿಲ್ಲವಂತೆ. ಉಕ್ರೇನ್‌ನ ರಕ್ಷಣಾ ಗುಪ್ತಚರ ಇಲಾಖೆಯ ಮುಖ್ಯಸ್ಥ ಮೇಜರ್ ಜನರಲ್ ಕೈರಿಲೊ ಬುಡನೋವ್ ಹೇಳಿದ್ದಾರೆ. ಪುಟಿನ್ ಆರೋಗ್ಯ ಸ್ಥಿತಿ ಉತ್ತಮ ಇಲ್ಲ ಎಂಬ ಸುದ್ದಿ ಈಗ ಇನ್ನಷ್ಟು ಗಟ್ಟಿಗೊಂಡಂತಾಗುತ್ತದೆ.

ಮಾತನಾಡುತ್ತಲೇ ನಿತ್ರಾಣಗೊಂಡಿದ್ದ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾರ್ವಜನಿಕವಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಯುದ್ಧದ ಸಂದರ್ಭವಾದ್ದರಿಂದ ತಮ್ಮ ಸಚಿವರನ್ನು ಭೇಟಿ ಮಾಡುವುದು ಇತ್ಯಾದಿ ಕಾರ್ಯಗಳನ್ನು ಅವರು ಮಾಡುತ್ತಲೇ ಇರಬೇಕಾಗುತ್ತದೆ. ಇತ್ತೀಚೆಗೆ ಅವರು ರಕ್ಷಣಾ ಸಚಿವ ಸೆರ್ಗೇ ಶೋಯಿಗು ಜೊತೆ ಸಭೆ ನಡೆಸುವಾಗ ಟೇಬಲ್ ಅನ್ನು ಅಸಹಜ ರೀತಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು ಕಂಡುಬಂದಿತ್ತು.

ಮಾಸ್ಕೋದಲ್ಲಿ ಎರಡ್ಮೂರು ವಾರಗಳ ಹಿಂದೆ ಬಾಷಣ ಮಾಡುವಾಗ ಪುಟಿನ್‌ರ ಕಾಲು ನಡುಗುತ್ತಿದ್ದುದನ್ನು ಕಂಡವರಿದ್ದಾರೆ.

ಕ್ರೆಮ್ಲಿನ್‌ಲ್ಲಿ ಪ್ರಶಸ್ತಿಪ್ರದಾನ ಸಮಾರಂಭವೊಂದರಲ್ಲೂ ಪುಟಿನ್ ದೈಹಿಕವಾಗಿ ಬಾಧಿತರಾಗಿರುವುದರ ಸುಳಿವು ಸಿಕ್ಕಿತ್ತು. ರಷ್ಯಾದ ಸಿನಿಮಾ ನಿರ್ದೇಶಕ ನಿಕಿತಾ ಮಿಖಾಲ್‌ಕೋವ್ ಅವರಿಗೆ ಪ್ರಶಸ್ತಿ ಇತ್ತು ಭಾಷಣ ಆರಂಭಿಸುವಾಗ ಪುಟಿನ್ ತಲೆಸುತ್ತಿ ಬೀಳುವ ರೀತಿಯಲ್ಲಿ ಹೊಯ್ದಾಡಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿತ್ತು.

ಇತ್ತೀಚೆಗಷ್ಟೇ ಪುಟಿನ್ ತಮ್ಮ ಸಲಹೆಗಾರರು ಮತ್ತು ಸೇನಾಧಿಕಾರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಮಾತನಾಡುವಾಗ ತಮ್ಮ ಕುರ್ಚಿಯಂದ ಏಳಲು ಪ್ರಯತ್ನಿಸುವಾಗ ತಲೆ ಸುತ್ತಿದಂತೆ ತೋರಿತು. ಪುಟಿನ್ ಬಹಳ ಅನಾರೋಗ್ಯದಲ್ಲಿದ್ದಂತೆ, ಶಕ್ತಿಹೀನಗೊಂಡಂತೆ ಕಂಡುಬಂದಿದ್ದರಂತೆ.

ಮಾನಸಿಕ ಭ್ರಮೆಯಲ್ಲಿ ಪುಟಿನ್

ವ್ಲಾದಿಮಿರ್ ಪುಟನ್ ಅವರಿಗೆ ರಕ್ತ ಮತ್ತು ಉದರದ ಕ್ಯಾನ್ಸರ್ ಇದೆ ಎಂದು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ರಷ್ಯಾ ಅಧ್ಯಕ್ಷರಿಗೆ ಹಲವು ಮಾನಸಿಕ ಸಮಸ್ಯೆಗಳೂ ಇವೆಯಂತೆ. ಡೆಮೆನ್ಷಿಯಾ (Dementia), ಶಿಜೋಫ್ರೇನಿಯಾ (Schizophrenia) ಮತ್ತು ಪ್ಯಾರಾನೋಯಿಯ (Acute Paranoia) ಕಾಯಿಲೆಗಳಿವೆ. ಡೆಮೆನ್ಷಿಯಾ ಎನ್ನುವುದು ಒಂದು ರೀತಿಯ ಮರೆವಿನ ರೋಗ. ಶಿಜೊಫ್ರೆನಿಯಾ ಮಾನಸಿಕ ಭ್ರಮೆಯ ಸ್ಥಿತಿ. ಪ್ಯಾರಾನೋಯಿಯ ಎಂಬುದು ಅತಿ ಸಂಶಯ ಪಡುವ ಮಾನಸಿಕ ಸ್ಥಿತಿ.

ಈ ಮೂರು ಮಾನಸಿಕ ಕಾಯಿಲೆಗಳು ಸೇರಿರುವುದರಿಂದ ವ್ಲಾದಿಮಿರ್ ಪುಟಿನ್ ಸದಾ ಭ್ರಮಾಲೋಕದಲ್ಲಿರುತ್ತಾರೆ. ಯಾರನ್ನೇ ಕಂಡರೂ ಅನುಮಾನ ಪಡುತ್ತಾರೆ. ತಮ್ಮ ಆಪ್ತ ಸಚಿವರನ್ನೂ ಅವರು ಸಂಶಯದಿಂದ ಕಾಣುತ್ತಾರಂತೆ. ತಮ್ಮನ್ನು ಶೀಘ್ರದಲ್ಲೇ ಹತ್ಯೆ ಮಾಡಲಾಗುತ್ತದೆ ಎಂಬ ಭ್ರಮೆ ಅವರನ್ನು ಸದಾ ಕಾಡುತ್ತಿರುತ್ತದೆ ಎಂದು ಗುಪ್ತಚರರ ಮಾಹಿತಿಯನ್ನಾಧರಿಸಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.

ಯುದ್ಧ ಆರಂಭಿಸಿದಾಗಿನಿಂದ ಆರೋಗ್ಯಸ್ಥಿತಿ ಗಂಭೀರ

ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿತು. ಅಲ್ಲಿಂದ ವ್ಲಾದಿಮಿರ್ ಪುಟಿನ್ ಅವರ ಆರೋಗ್ಯ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿದೆ.

ಸಾರ್ವಜನಿಕವಾಗಿ ಹೆಚ್ಚು ಹೊತ್ತು ಇರಬೇಡಿ ಎಂದು ವೈದ್ಯರೂ ಕೂಡ ರಷ್ಯಾ ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ.

ಇದೇ ವೇಳೆ ಕೆಲವೇ ದಿನಗಳಲ್ಲಿ ಉಕ್ರೇನ್ ಅನ್ನು ವಶಪಡಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಯುದ್ಧ ಆರಂಭಿಸಿದ್ದ ವ್ಲಾದಿಮಿರ್ ಪುಟಿನ್‌ಗೆ ಈಗ ನಾಲ್ಕು ತಿಂಗಳಾದರೂ ಸಮರ ಮುಂದುವರಿಯುತ್ತಿರುದು ಹತಾಶೆ ತಂದಿದೆ. ರಷ್ಯಾ ನಿರ್ದಯವಾಗಿ ಪ್ರಹಾರ ಮಾಡಿದಷ್ಟೂ ಉಕ್ರೇನ್ ಪ್ರತಿರೋಧ ಹೆಚ್ಚುತ್ತಲೇ ಇದೆ. ಅಮೆರಿಕ ಮೊದಲಾದ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಇತ್ಯಾದಿ ಪೂರೈಕೆ ಮೂಲಕ ಪರೋಕ್ಷವಾಗಿ ಸಹಾಯವಾಗುತ್ತಿವೆ. ಇದು ಪುಟಿನ್‌ರನ್ನು ಘಾಸಿಗೊಳಿಸುತ್ತಿದೆ.

ಇದೇ ವೇಳೆ, ರಷ್ಯಾ ಸೇನಾ ಪಡೆಗಳು ಇಜ್ರೇನ್‌ನ ಕ್ರೆಮೆಚುಕ್, ಖಾರ್ಕೀವ್ ಮೊದಲಾದ ನಗರಗಳ ಮೇಲೆ ಬಾಂಬ್, ಶೆಲ್‌ಗಳ ಸುರಿಮಳೆ ಮಾಡುತ್ತಿದೆ. ಖಾರ್ಕೀವ್‌ನಲ್ಲಿ ನಾಲ್ಕು ಬಂದಿ ಮೃತಪಟ್ಟಿದ್ದಾರೆ. ಕ್ರೆಮೆಚುಕ್‌ನ ಮಾಲ್‌ಗೆ ಬಾಂಬ್ ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚು ಜನರು ಬಲಿಯಾಗಿದ್ಧಾರೆ. ಘಟನೆ ವೇಳೆ ಮಾಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರಿದ್ದರೆನ್ನಲಾಗಿದೆ. ಐವತ್ತು ಜನರಿಗೆ ಗಾಯವಾಗಿರುವುದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಳಿಕಟ್ಟದೆ ಹೆಸರು ಹೇಳಲು ಆಗುವುದಿಲ್ಲ‌ ಸಿ.ಎಂ ಇಬ್ರಾಹಿಂ

Tue Jun 28 , 2022
    ಬಾಗಲಕೋಟೆ: ತಾಳಿಕಟ್ಟದೆ ಹೆಸರು ಹೇಳಲು ಆಗುವುದಿಲ್ಲ‌ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು. ಕಾಂಗ್ರೆಸ್, ಬಿಜೆಪಿ ಹಲವು ನಾಯಕರು ಜುಲೈ ಅಂತ್ಯಕ್ಕೆ ಜೆಡಿಎಸ್ ಸೇರ್ಪಡೆ‌ ಆಗಲಿದ್ದಾರೆ ಎಂಬ ಅವರ‌ ಮಾತಿಗೆ, ಯಾರ್ಯಾರು ಸೇರಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ಸೇರ್ಪಡೆಗೆ ವೇದಿಕೆ ಸಿದ್ದವಾಗುತ್ತದೆ. ಅವರು ಸೇರ್ಪಡೆಗೊಳ್ಳುವವರೆಗೆ ಹೆಸರು ಹೇಳಲಾಗುವುದಿಲ್ಲ ಎಂದರು. ಅರೆಂಜ್ ಮ್ಯಾರೇಜ್ ನಲ್ಲಿ ನಂಬಿಕೆ ಇಟ್ಟಿದ್ದೇವೆ. ಕಿಡ್ನಾಪ್ ಮಾಡಿ ಮದುವೆಯಾಗುವುದಿಲ್ಲ ಎಂದು […]

Advertisement

Wordpress Social Share Plugin powered by Ultimatelysocial