ಪ್ರೊ. ಎಸ್.ಕೆ. ರಾಮಚಂದ್ರರಾವ್ ವಿದ್ವಾಂಸರು.

 

ಪ್ರೊ. ಎಸ್.ಕೆ. ರಾಮಚಂದ್ರರಾವ್, ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು. ಇವರು ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸರು. ಇಂದು ಅಪ್ರತಿಮ ವಿದ್ವಾಂಸರ ಸಂಸ್ಮರಣೆ ದಿನ.
ಎಸ್.ಕೆ. ರಾಮಚಂದ್ರರಾವ್ 1925ರ ಸೆಪ್ಟೆಂಬರ್ 4ರಂದು ಹಾಸನದಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣ ನಾರಾಯಣರಾವ್ ಅವರು ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು. ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ ತಾಯಿ ಕಮಲಾಬಾಯಿ ಅಂದಿನ ಮೈಸೂರು ಸಂಸ್ಥಾನದ ಸಾರ್ವಜನಿಕ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಶ್ರೀ ಕೆ. ನಾರಾಯಣರಾವ್ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಈ ತಾತನ ಮನೆಯಲ್ಲಿಯೇ ರಾಮಚಂದ್ರರಾವ್ ಅವರ ಪ್ರಾರಂಭಿಕ ವಿದ್ಯಾಭ್ಯಾಸ ನೆರವೇರಿತು.ರಾಮಚಂದ್ರರಾಯರ ತಾತನವರಾದ ನಾರಾಯಣರಾವ್ ನಿವೃತ್ತರಾದ ನಂತರದಲ್ಲಿ ಉತ್ತರಾದಿ ಮಠದ ಶ್ರೀ ಅಗ್ನಿಹೋತ್ರಿ ಯಜ್ಞವಿಠ್ಠಲಾಚಾರ್ಯರಿಂದ ಸಂಸ್ಕೃತ ಅಭ್ಯಾಸ ಮಾಡತೊಡಗಿದರು. ಇದನ್ನು ಆಸಕ್ತಿಯಿಂದ ಕೇಳುತ್ತಿದ್ದ ಬಾಲಕ ರಾಮಚಂದ್ರ ಸಹಾ ಸಂಸ್ಕೃತದ ಜ್ಞಾನವನ್ನು ಸುಲಭವಾಗಿ ರೂಢಿಗೊಳಿಸಿಕೊಂಡರು. ತಮ್ಮ ತಾತನವರು ನಿಧನರಾದ ಕಾರಣ ಹನ್ನೆರಡು ವಯಸ್ಸಿನ ಬಾಲಕ ರಾಮಚಂದ್ರರಾವ್ ತಮ್ಮ ತಂದೆ ತಾಯಿಯರಿದ್ದ ನಂಜನಗೂಡಿಗೆ ಬಂದು ಅಲ್ಲಿಯ ಪಾಠಶಾಲೆಯಲ್ಲಿ ತಮ್ಮ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿದರು. ಅದಾದ ಒಂದು ವರ್ಷದಲ್ಲಿ ಅವರಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ದರ್ಶನ ದೊರಕಿ, ಅವರ ಬದುಕಿನ ಮೇಲೆ ಹೊಸದಾದ ಬೆಳಕನ್ನೇ ತಂದಿತು. ಮೂಲತಃ ಮಧ್ವ ಸಂಪ್ರದಾಯದ ಮನೆತನಕ್ಕೆ ಸೇರಿದ್ದರೂ, ಬಾಲಕ ರಾಮಚಂದ್ರರು ಜಗದ್ಗುರಗಳ ಬಳಿ ಆದಿಗುರು ಶ್ರೀ ಶಂಕರಾಚಾರ್ಯರ ಮೂಲ ರಚನೆಗಳನ್ನು ಓದುವ ಅಭಿಲಾಷೆ ವ್ಯಕ್ತಪಡಿಸಿದರು. ಅದರಿಂದ ಸಂತೋಷಗೊಂಡ ಯತಿವರ್ಯರು ರಾಮಚಂದ್ರರಾವ್ ಅವರಿಗೆ ತಕ್ಷಣವೇ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವೇದಾಂತದ ಬೋಧಕರಾಗಿದ್ದ ಶ್ರೀ ಪಾಲ್ಗಾಟ್ ನಾರಾಯಣ ಶಾಸ್ತ್ರಿಗಳಿಂದ ಶ್ರೀ ಶಂಕರಾಚಾರ್ಯರ ಪ್ರಸ್ಥಾನತ್ರಯವನ್ನು ಕಲಿಯುವ ವ್ಯವಸ್ಥೆ ಕಲ್ಪಿಸಿಕೊಟ್ಟರು. ಈ ಕಲಿಕೆಯನ್ನು ರಾಮಚಂದ್ರ ರಾಯರು ಹಲವಾರು ವರ್ಷಗಳ ಕಾಲ ಶ್ರದ್ಧೆಯಿಂದ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಬಿಡುಗಡೆಯಾಗುತ್ತಿದೆ ದಿಗಂತ್ ಅಭಿನಯದ 'ಲೈಫು ಇಷ್ಟೇನೆ' ಸಿನಿಮಾ;

Sat Feb 4 , 2023
2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಲೈಫು ಇಷ್ಟೇನೆ’ ಪ್ರೇಮಿಗಳ ದಿನಕ್ಕಾಗಿ ಮತ್ತೆ ಫೆಬ್ರುವರಿ 10 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಗಂತ್, ಸಂಯುಕ್ತ ಹೊರನಾಡ್, ಸಿಂಧು ಲೋಕನಾಥ್ ಮತ್ತು ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. 2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಲೈಫು ಇಷ್ಟೇನೆ’ ಮತ್ತೆ ಫೆಬ್ರುವರಿ 10 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಗಂತ್, ಸಂಯುಕ್ತ ಹೊರನಾಡ್, ಸಿಂಧು ಲೋಕನಾಥ್ ಮತ್ತು ಸತೀಶ್ ನೀನಾಸಂ […]

Advertisement

Wordpress Social Share Plugin powered by Ultimatelysocial