ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ; ನಾನು ಲಾಬಿ ಮಾಡಲ್ಲ: ಎಸ್.ಆರ್.ಪಾಟೀಲ್

ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಚರ್ಚೆ ಮಾಡಿಲ್ಲ. ನಾನು ಲಾಬಿ ಮಾಡಲ್ಲ. ಅದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್‌.ಪಾಟೀಲ್ ಹೇಳಿದರು.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಟಿಕೆಟ್ ನೀಡುವ ನನಗೆ ಐಡಿಯವಿಲ್ಲ.

ಈ ಬಗ್ಗೆ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ನಿರ್ಣಯ ಮಾಡುತ್ತಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಅವಕಾಶ ಕಲ್ಪಿಸಿದರೆ ಬದ್ದತೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಅಸಮಾಧಾನಗೊಂಡಿಲ್ಲ. ನಾನೇನು ಈ ನಿಮಗೆ ಹೇಳಿದ್ದೇನಾ? ಪಕ್ಷದ ನಿರ್ಣಯವು ತಾಯಿಗೆ ಸಮಾನವೆಂದು ಗೌರವಿಸಿದ್ದೀನಿ. ಪಕ್ಷ ನನಗೆ ಬಹಳಷ್ಟು ಅವಕಾಶ ಕಲ್ಪಿಸಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಮಂತ್ರಿಯಾಗಿದ್ದೇನೆ. 24 ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿದ್ದೇನೆ. ಪಕ್ಷದ ಬಗ್ಗ ಅಪಾರವಾದ ಗೌರವವಿದೆ ಎಂದರು.

ಸಿದ್ದರಾಮಯ್ಯ ಭೇಟಿಯ ಬಗ್ಗೆ ಮಾತನಾಡಿದ ಎಸ್.ಆರ್.ಪಾಟೀಲ್, ಅವರನ್ನು ಮೊನ್ನೆಯೂ ಭೇಟಿಯಾಗಿದ್ದೆ. ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಹಾಗಾಗ ಭೇಟಿ ಆಗುತ್ತಾ ಇರುತ್ತೇನೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳೇ, ಉತ್ತಮ ಕಾಲೇಜು, ಯುನಿವರ್ಸಿಟಿ ಆಯ್ಕೆ ಮಾಡೋದು ಹೇಗೆ ಎಂದು ತಿಳಿಯಿರಿ!

Sun May 22 , 2022
ಚೆನ್ನಾಗಿ ಓದಬೇಕು ಎಂಬ ಬಲವಾದ ಇಚ್ಛೆ ಹೊಂದಿರುವವರಿಗೆ ಅತ್ಯುತ್ತಮವಾದ ವಿಶ್ವವಿದ್ಯಾನಿಲಯವನ್ನು ಕಂಡುಹಿಡಿಯುವುದು ಒಂದು ಸವಾಲೇ ಸರಿ. ಸ್ಥಳ, ಧನಸಹಾಯ, ವರ್ಗ ಗಾತ್ರ, ಅಧ್ಯಾಪಕರು, ಕ್ಯಾಂಪಸ್ ಚಟುವಟಿಕೆಗಳು (Campus Activities) ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್​ನ ವಿಶ್ವವಿದ್ಯಾನಿಲಯಗಳಲ್ಲಿ (US Universities) ಉನ್ನತ ಅಧ್ಯಯನವನ್ನು ಮುಂದುವರಿಸಲು ಯೋಜಿಸುವಾಗ ಪರಿಗಣಿಸಬೇಕಾದ ಹಲವಾರು ಅಂಶಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ಯಶಸ್ಸಿಗೆ ಸಹಾಯ ಮಾಡಬಲ್ಲ ಸರಿಯಾದ ವಿಶ್ವವಿದ್ಯಾನಿಲಯವನ್ನು ಹೇಗೆ ಕಂಡುಹಿಡಿಯಬಹುದು (How to […]

Advertisement

Wordpress Social Share Plugin powered by Ultimatelysocial