ಟಿಕೆಟ್​ ಹಂಚಿಕೆ ಕುರಿತು ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ:

ಮಂಡ್ಯ: ಬಿಜೆಪಿಯಿಂದ ಟಿಕೆಟ್​ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ, ಪರಿಷತ್​ ಹಾಗೂ ರಾಜ್ಯಸಭಾ ಟಿಕೆಟ್​​ ಹಮಚಿಕೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿದ್ಯ ಕೊಟ್ಟಿದ್ದೇವೆ ಎಂದು .ಸದಾನಂದಗೌಡ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಮುಟ್ಟುವ ಕೆಲಸ ಪಕ್ಷ ಮಾಡಿದೆ.

ಗೆಲ್ಲುವ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿಸುತ್ತದೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಇರುವುದು ಸಹಜ. ವಾಸ್ತವವಾಗಿ ಎಲ್ಲರ ಸಹಮತ ಪಡೆದೆ ಕೋರ್ ಕಮಿಟಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ. ವಿಧಾನಸಭೆ ಚುನಾವಣೆಗೆ ತುಂಬಾ ಕ್ರಿಯಾಶೀಲರು ಬೇಕಾಗುತ್ತಾರೆ. ಇದಕ್ಕೆ ಹಾಗೇನೂ ಇಲ್ಲ, ಹಾಗಾಗಿ ಜಗ್ಗೇಶ್​ ಅವರನ್ನು ರಾಜ್ಯಸಬೆಗೆ ಆಯ್ಕೆ ಮಾಡಿದ್ದೇವೆ ಎಂದರು.

ಜೆಡಿಎಸ್​ -ಕಾಂಗ್ರೆಸ್ ಅತೃಪ್ತರಿಂದ ಬಿಜೆಪಿಗೆ ವರದಾನವಾಗಲಿದೆ, ಜೆಡಿಎಸ್​​ನಲ್ಲಿ ಈಗಾಗಲೇ 6 ಅತೃಪ್ತರಿದ್ದಾರೆ, ಅವರೆಲ್ಲರೂ ಬಿಜೆಪಿ ಒಳ್ಳೆಯ ಪಾರ್ಟಿ ಅಂತಾ ತೀರ್ಮಾನ ಮಾಡಿದ್ದಾರೆ. ಇನ್ನು ಸಿದ್ದು-ಡಿಕೆಶಿ ಇವರಿಬ್ಬರಿಗೂ ಬುದ್ಧಿ ಕಲಿಸುವ ಆಲೋಚನೆ ಆ ಪಕ್ಷದಲ್ಲಿ ನಡೆಯುತ್ತಿದೆ. ಅವೆಲ್ಲವೂ ಬಿಜೆಪಿ ಪಾಲಿಗೆ ವರದಾನವಾಗಲಿವೆ ಎಂದು ಹೇಳಿದರು.

ಮಂಡ್ಯ: ಬಿಜೆಪಿಯಿಂದ ಟಿಕೆಟ್​ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ, ಪರಿಷತ್​ ಹಾಗೂ ರಾಜ್ಯಸಭಾ ಟಿಕೆಟ್​​ ಹಮಚಿಕೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿದ್ಯ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಸೀದಿ ವಿಡಿಯೋ ಸಾರ್ವಜನಿಕಗೊಳಿಸುವಂತಿಲ್ಲ: ಕೋರ್ಟ್

Tue May 31 , 2022
  ವಾರಣಾಸಿ ಮೇ 31: ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿದ ಸಮೀಕ್ಷೆ ಆಯೋಗವು ತೆಗೆದ ವಿಡಿಯೋ ಮತ್ತು ಛಾಯಾಚಿತ್ರಗಳ ಪ್ರತಿಗಳನ್ನು ಕಕ್ಷಿದಾರರು ಪಡೆಯಲು ವಾರಣಾಸಿ ನ್ಯಾಯಾಲಯ ಅನುಮತಿ ನೀಡಿದೆ. ಸಮೀಕ್ಷೆಯ ವರದಿ, ವಿಡಿಯೋಗಳು, ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಮೇ 19ರಂದು ಸಲ್ಲಿಸಲಾಗಿತ್ತು. ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಕಮಿಷನರ್ ವರದಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಮಾತ್ರ ಕಕ್ಷಿದಾರರು ವಿಡಿಯೋಗಳು, ಛಾಯಾಚಿತ್ರಗಳನ್ನು ಬಳಸಬಹುದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ವಿಡಿಯೋ, […]

Advertisement

Wordpress Social Share Plugin powered by Ultimatelysocial