ಲಕ್ಕಿ ಮ್ಯಾನ್ಸ:ದ್ಯದಲ್ಲೇ ಚಿತ್ರದ ರಿಲೀಸ್‌,ದೇವರ ಪಾತ್ರದಲ್ಲಿ ಪುನೀತ್‌ ರಾಜ್‌ಕುಮಾರ್!

ನಟ ಪುನೀತ್‌ ರಾಜ್‌ಕುಮಾರ್ ಅವರು ಜೇಮ್ಸ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅದು ಅವರು ಹೀರೋ ಆಗಿ ಅಭಿನಯಿಸಿರುವ ಕೊನೆಯ ಚಿತ್ರ. ಜೇಮ್ಸ್ ಜೊತೆಗೆ ಪುನೀತ್‌ ರಾಜ್‌ಕುಮಾರ್ ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

ಸದ್ಯ ಲಕ್ಕಿ ಮ್ಯಾನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿಯೂ ಅಪ್ಪು ಗಮನ ಸೆಳೆದಿದ್ದಾರೆ. ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಪ್ಪು ಪಾತ್ರದ ಬಗ್ಗೆ ಹೇಳುವ ಪೋಸ್ಟರ್ ಇದಾಗಿದೆ. ಚಿತ್ರ ತಂಡ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದೆ. ಇನ್ನು ಚಿತ್ರದ ನಾಯಕ ಕೃಷ್ಣ ಕೂಡ ಪೋಸ್ಟರ್‌ನಲ್ಲಿ ಮದುಮಗನಂತೆ ಕಂಗೊಳಿಸಿದ್ದಾರೆ.

ಚಿತ್ರದ ಪೋಸ್ಟರ್ ಹಂಚಿಕೊಂಡ ನಟ ಕೃಷ್ಣ!ನಟ ಡಾರ್ಲಿಂಗ್ ಕೃಷ್ಣ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಹಂಚಿಕೊಂಡು ಕಮ್ಮಿಂಗ್‌ ಸೂನ್‌ ಅಂತ ಬರೆದು ಕೊಂಡಿದ್ದಾರೆ. ನಟ ಕೃಷ್ಣ ಸಿನಿ ಜರ್ನಿಯಲ್ಲಿ ಈ ಚಿತ್ರ ವಿಭಿನ್ನವಾಗಿ ನಿಲ್ಲಲಿದೆ. ಚಿತ್ರದ ಕಥಾ ಹಂದರವೇ ವಿಭಿನ್ನವಾಗಿದೆ. ಹಾಗಾಗಿ ಕೃಷ್ಣ ಈ ಬಾರಿ ತೆರೆಯ ಮೇಲೆ ಹೇಗೆ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ನೋಡಬೇಕು.

‘ಲಕ್ಕಿ ಮ್ಯಾನ್’ ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ ‘ಒ ಮೈ ಕಡವಳೆ’ ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ ‘ದೇವರ’ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರಭುದೇವ ಜೊತೆಗೆ ಅಪ್ಪು ಡಾನ್ಸ್!

ಪರ್ಸಾ ಪಿಕ್ಚರ್ಸ್ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್​ ಕೆಲಸಗಳು ಮುಗಿದಿವೆ. ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ‘ಲಕ್ಕಿ ಮ್ಯಾನ್​’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್​ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್​ಕುಮಾರ್ ಅವರ ಕುರಿತಾಗಿ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್​ ಮಾಡಿದ್ದಾರೆ.

ಸದ್ಯದಲ್ಲೇ ರಿಲೀಸ್ ದಿನಾಂಕ ಪ್ರಕಟ!

ಸದ್ಯದಲ್ಲೇ ಚಿತ್ರದ ರಿಲೀಸ್‌ ದಿನಾಂಕವನ್ನು ಪ್ರಕಟ ಮಾಡಲಿದೆ ಚಿತ್ರತಂಡ. ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದ ಡಿ.ಕೆ.ಶಿವಕುಮಾರ್;

Fri Dec 31 , 2021
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಚಿತ್ರರಂಗಕ್ಕೂ ಇರುವ ನಂಟು ಹಳೆಯದ್ದು. ಡಿ.ಕೆ.ಶಿವಕುಮಾರ್ ಅವರು ಸಿನಿಮಾ ವಿತರಕರಾಗಿಯೂ ಕೆಲಸ ಮಾಡಿದ್ದಾರೆ. ಚಿತ್ರ ಪ್ರದರ್ಶಕರೂ ಹೌದು. ಬೆಂಗಳೂರಿನಲ್ಲಿ ಅವರದ್ದೇ ಆದ ಮಲ್ಪಿಫ್ಲೆಕ್ಸ್‌ ಇದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದರು. ಆದರೆ ರಾಜಕಾರಣದಲ್ಲಿ ಸಕ್ರಿಯರಾಗಿ, ಸಿನಿಮಾ ವಿತರಣೆಯಿಂದ ದೂರ ಉಳಿದ ಬಳಿಕ ಸದಸ್ಯತ್ವವನ್ನು ನವೀಕರಣ ಗೊಳಿಸಿರಲಿಲ್ಲವಾದ್ದರಿಂದ ಸದಸ್ಯತ್ವ ರದ್ದಾಗಿತ್ತು. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ […]

Advertisement

Wordpress Social Share Plugin powered by Ultimatelysocial