ಕದ್ದುಮುಚ್ಚಿ ಥಿಯೇಟರ್ ಗೆ ಬಂದು ಮಹೇಶ್ ಬಾಬು ಸಿನಿಮಾ ವೀಕ್ಷಣೆ ಮಾಡಿದ ಸಾಯಿ ಪಲ್ಲವಿ..!

 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಾಯಿ ಪಲ್ಲವಿ ಹೊಸ ಸಿನಿಮಾಗಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು. ಇದರ ಬೆನ್ನಲ್ಲೇ ಸಾಯಿ ಪಲ್ಲವಿ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ತೆಲುಗು ಟ್ರೈಲರ್ ಬಿಡುಗಡೆ ಮಾಡಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

ಇದೀಗ ಸಾಯಿ ಪಲ್ಲವಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.

ಪ್ರೇಮ್ ಸುಂದರಿ ಸಾಯಿ ಪಲ್ಲವಿ ಇತ್ತೀಚಿಗೆ ಚಿತ್ರಮಂದಿರದಲ್ಲಿ ಕದ್ದು ಸಿನಿಮಾ ವೀಕ್ಷಿಸಿದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ. ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾವನ್ನು ಸಾಯಿ ಪಲ್ಲವಿ ವೀಕ್ಷಿಸಿದ್ದಾರೆ. ಮುಖ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿ ಚಿತ್ರಮಂದಿರದಿಂದ ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಸೆಲೆಬ್ರಿಟಿಗಳು ಬರ್ತಾರೆ ಎಂದರೆ ಅಭಿಮಾನಿಗಳು ಮುಗಿಬೀಳುತ್ತಾರೆ. ಸಿನಿಮಾ ವೀಕ್ಷಣೆಗಿಂತ ಅಭಿಮಾನಿಗಳ ನಿಯಂತ್ರಣ ಮಾಡುವುದೇ ಹರಸಾಹಸವಾಗಲಿದೆ. ಹಾಗಾಗಿ ಕದ್ದು ಬಂದು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡುತ್ತಾರೆ.

ಇದೀಗ ಸಾಯಿ ಪಲ್ಲವಿ ಕೂಡ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿದ್ದಾರೆ. ಆದರೂ ಅಭಿಮಾನಿಗಳು ಗುರುತು ಹಾಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಾಯಿ ಪಲ್ಲವಿ ಸದ್ಯ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೂ ಬಿಡುವು ಮಾಡಿಕೊಂಡು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಮಹೇಶ್ ಬಾಬು ಸಿನಿಮಾ ವೀಕ್ಷಿಸಿರುವುದು ಪ್ರಿನ್ಸ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ.

ಅಂದಹಾಗೆ ಸಾಯಿ ಪಲ್ಲವಿ ಸಿನಿಮಾ ವೀಕ್ಷಿಸಿದ್ದು ಹೈದರಾಬಾದ್‌ನಲ್ಲಿ. ಶನಿವಾರ್ ರಾತ್ರಿ ಅವರು ಸರ್ಕಾರು ವಾರಿ ಪಾಟ ಸಿನಿಮಾ ನೋಡಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸದ್ಯ ವಿರಾಟ ಪರ್ವಂ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಈಗಾಗಲೇ ವೈರಲ್ ಆಗಿವೆ. ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಇತ್ತೀಚಿಗಷ್ಟೆ ಸಾಯಿ ಪಲ್ಲವಿ ಗಾರ್ಗಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ಬೆಲ್ಟ್‌ನಲ್ಲಿ 'ವಿಕ್ರಾಂತ್ ರೋಣ'ನಿಗೆ ಭಾಯ್‌ಜಾನ್ ಬೆಂಬಲ!

Tue May 17 , 2022
ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ವಿಕ್ರಾಂತ್ ರೋಣ’. ರಾಕಿ ಭಾಯ್ ‘ಕೆಜಿಎಫ್ 2’ ಬಳಿಕ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅಖಾಡಕ್ಕಿಳಿಯಲು ಸಜ್ಜಾಗಿದೆ. ‘ವಿಕ್ರಾಂತ್ ರೋಣ’ ರಿಲೀಸ್ ಡೇಟ್ ಹತ್ತಿರವಿರುಗಾಲೇ ಒಂದೊಂದು ಸದ್ದಿ ಹೊರಬರುತ್ತಿದೆ. ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಬಗ್ಗೆ ಕುತೂಹಲ ದುಪ್ಪಟ್ಟಾಗುತ್ತಲೇ ಇದೆ. ‘ಕೆಜಿಎಫ್ 2’ ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು […]

Advertisement

Wordpress Social Share Plugin powered by Ultimatelysocial