ಸಲ್ಮಾನ್;56ರ ವಯಸ್ಸಿನಲ್ಲೂ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಫೋಟೋ .

 

ಬಾಲಿವುಡ್ ತಾರೆ ಸಲ್ಮಾನ್ ಖಾನ್ ‘ಬಿಗ್ ಬಾಸ್ 15’ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದೀಗ ನಟ ಮತ್ತೆ ಚಿತ್ರದ ಕೆಲಸಗಳಿಗೆ ಮರಳಲು ತಯಾರಾಗುತ್ತಿದ್ದಾರೆ. ಇದಕ್ಕೆ ಅವರ ಪೋಸ್ಟ್ ಒಂದು ಸಾಕ್ಷಿ ಒದಗಿಸಿದೆ.ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಿವುಡ್  ನಟ ಸಲ್ಮಾನ್​ ಖಾನ್​ಗೆಈಗ 56ರ ಪ್ರಾಯ.ಆದರೆ ತರುಣರೂ ಹುಬ್ಬೇರಿಸುವಂತೆ ಮೈಕಟ್ಟನ್ನು ಅವರು ಕಾಪಿಟ್ಟುಕೊಂಡಿದ್ದಾರೆ. ಹುರಿಗೊಳಿಸಿದ ದೇಹ, ಮೈನವಿರೇಳಿಸುವ ಆಕ್ಷನ್ ದೃಶ್ಯಗಳು, ಮಾಸ್ ಡೈಲಾಗ್ಸ್.. ಇವೆಲ್ಲಾ ಸಲ್ಮಾನ್ ಚಿತ್ರಗಳಲ್ಲಿ ಮಾಮೂಲು. ಆದರೆ ಅಭಿಮಾನಿಗಳಿಗೆ ಸಲ್ಮಾನ್ ಫಿಟ್​ನೆಸ್ ಬಗ್ಗೆ ಎಲ್ಲಿಲ್ಲದ ಕುತೂಹಲ. ಈ ವಯಸ್ಸಿನಲ್ಲೂ ಸಲ್ಮಾನ್ ಸಿಕ್ಸ್​ಪ್ಯಾಕ್ ರಹಸ್ಯವೇನು? ಎಂಬುದು ಅವರ ಪ್ರಶ್ನೆ. ತಮ್ಮ ದೇಹದ ಬಗ್ಗೆ ವಿಪರೀತ ಕಾಳಜಿ ವಹಿಸುವ ಸಲ್ಲು, ದಿನನಿತ್ಯ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಇದು ಅವರ ಫಿಟ್​ನೆಸ್   ಗುಟ್ಟು. ಇದಕ್ಕೆ ಸಾಕ್ಷಿ ಎಂಬಂತೆ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಹೊಸ ಚಿತ್ರವನ್ನು ಸಲ್ಮಾನ್ ಹಂಚಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದು, ಕಾಮೆಂಟ್​ಗಳ ಮಹಾಪೂರವೇ ಹರಿದುಬಂದಿದೆ.ಸಲ್ಮಾನ್ ಖಾನ್ ಇತ್ತೀಚೆಗೆ ಸಿನಿಮಾ ಕೆಲಸಗಳಿಂದ ತುಸು ಬ್ರೇಕ್ ತೆಗೆದುಕೊಂಡಿದ್ದರು. ಅವರೇನು ಪ್ರವಾಸ ಹೋಗಿರಲಿಲ್ಲ. ಬದಲಾಗಿ ಬಿಗ್ ಬಾಸ್ 15ರ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಗ್ ಬಾಸ್​ ಮುಕ್ತಾಯವಾಗಿದೆ. ಸಲ್ಮಾನ್ ಮತ್ತೆ ತಮ್ಮ ಚಿತ್ರದ ಕೆಲಸಗಳಿಗೆ ಮರಳಿದ್ದಾರೆ. ಇದನ್ನೇ ಉದ್ದೇಶಿಸಿ ಪೋಸ್ಟ್ ಹಂಚಿಕೊಂಡಿರುವ ಸಲ್ಮಾನ್, ‘ಮರಳಲು ತಯಾರಾಗುತ್ತಿದ್ದೇನೆ’ ಎಂಬರ್ಥದಲ್ಲಿ ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೇಳಾಪಟ್ಟಿಯಂತೆ ಗೇಟ್ ಪರೀಕ್ಷೆಗಳು ನಡೆಯಲಿ : ಸುಪ್ರೀಂಕೋರ್ಟ್ ಮಹತ್ತರ ಆದೇಶ !

Thu Feb 3 , 2022
ನವದೆಹಲಿ :ಗೇಟ್ 2022 ಪರೀಕ್ಷೆಗಳು ಸರ್ಕಾರದ ಪಾಲಿನ ನೀತಿ ವಿಷಯವಾಗಿದೆ ಮತ್ತು ಈ ಹಂತದಲ್ಲಿ ನ್ಯಾಯಾಲಯದ ಯಾವುದೇ ಹಸ್ತಕ್ಷೇಪವು ವಿದ್ಯಾರ್ಥಿಗಳಲ್ಲಿ ‘ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ’ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಕರೋನವೈರಸ್ ಕಾಯಿಲೆಯ (ಕೋವಿಡ್ -19) ಮೂರನೇ ತರಂಗದ ಮಧ್ಯೆ ಈ ವರ್ಷದ ಎಂಜಿನಿಯರಿಂಗ್ ಆಪ್ಟಿಟ್ಯೂಡ್ ಪರೀಕ್ಷೆ (ಗೇಟ್ 2022) ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ, ಪರೀಕ್ಷೆಗಳನ್ನು ವಿಳಂಬಗೊಳಿಸುವುದು ವಿದ್ಯಾರ್ಥಿಗಳಲ್ಲಿ ‘ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ’ ಕಾರಣವಾಗಬಹುದು ಎಂದು […]

Advertisement

Wordpress Social Share Plugin powered by Ultimatelysocial