ಸಮುದಾಯದ ಹೋರಾಟಕ್ಕೆ ಚಿಕ್ಕ ಗೌರವ – ಮಂಸೋರೆ.

ದೌರ್ಜನ್ಯ, ತುಳಿತಕ್ಕೊಳಾದ ಚಿಕ್ಕ ಸಮುದಾಯದ ದಶಕಗಳ  ಹೋರಾಟಕ್ಕೆ ಸಿನಿಮಾ ಮೂಲಕ ನೀಡುವ ಗೌರವಾರ್ಪಣೆ .  ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ” ಹೀಗಂತ  ಮಾತಿಗಿಳಿದರು ನಿರ್ದೇಶಕ ಮಂಸೋರೆ. ಕರಾವಳಿ ಮತ್ತು ಪಶ್ವಿಮ ಘಟ್ಟ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಬೆರಳಣಿಕೆಯಷ್ಟು ಮಂದಿ ಇರುವ ಸಮುದಾಯವೊಂದರ ಹೋರಾಟ,ಯಾತನೆಯ ನೈಜ ಘಟನೆಯನ್ನು ಚಿತ್ರರೂಪದಲ್ಲಿ ಕಟ್ಟಿಕೊಡಲಾಗಿದೆ.ತಮ್ಮ ಹೋರಾಟದಿಂದ ಆ ಸಮುದಾಯ ತಕ್ಕ ಮಟ್ಟಿಗೆ ಯಶಸ್ಸು ಕಂಡಿದೆ.ಚಿತ್ರದ ಮೂಲಕ‌ ಆ ಸಮುದಾಯ ಎದುರಿಸಿದ ನೋವು,ದೌರ್ಜನ್ಯ, ಹೋರಾಟ ಬೆಳಕಿಗೆ ಬಂದದ್ದು ಹೇಗೆ.ಹೋರಾಟಕ್ಕೆ ಬೆಂಬಲ‌ ನೀಡಿದವರಾರು  ಎನ್ನುವ ಹಲವು ವಿಷಯಗಳನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ.ಹರಿವು, ನಾತಿಚರಾಮಿ, ಆಕ್ಟ್ 1978 ಚಿತ್ರಗಳಲ್ಲಿ ಎಮೋಷನ್ ಅನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಆದರೆ ಇಲ್ಲಿ ಎಮೋಷನ್ ಅನ್ನು ಸಿನಿಮಾ‌ ನೋಡುವ ಮಂದಿಗೆ ಬಿಡಲಾಗಿದೆ. ನೋವು, ದೌರ್ಜನ್ಯ ಕಂಡವರು, ಅನುಭವಿಸಿದವರ ಮನ ಕಲಕುತ್ತೆ.ಹೀಗಾಗಿ ಇದು ಭಿನ್ನವಾದ ಸಿನಿಮಾ.ವಿಶ್ವದ ಯಾವುದೇ ಭಾಗದಲ್ಲಿ ಸಲ್ಲಬಹುದಾದ ಮತ್ತು ಆ ಭಾಗದ‌ ಜನರಿಗೆ ಇಷ್ಡವಾಗುವ ಸಿನಿಮಾವೇ ಜಾಗತಿಕ ಸಿನಿಮಾ. 19.20.22 ಜಗತ್ತಿನ ಎಲ್ಲೆಡೆ ಸಲ್ಲಬಹುದಾದ ಚಿತ್ರ ಎಂದರು ನಿರ್ದೇಶಕರು.2012-19 ರ ನಡುವೆ ನಡೆದ  ಆದಿವಾಸಿ ಸಮುದಾಯದ ಹೋರಾಟವನ್ನು ಆಗಿನ ಕಾಲಘಟ್ಟದಲ್ಲಿ ಕಟ್ಟಿಕೊಡಲಾಗಿದೆ.ನ್ಯಾಯಾಂಗ, ಮಾದ್ಯಮ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದಿದ್ದರೆ ಧಮನಿತರ ಹೋರಾಟ ಯಾವ ದಿಕ್ಕಿನತ್ತ ಸಾಗಲಿದೆ ಎನ್ನುವುದನ್ನು ತೆರೆಯ ಮೇಲೆ‌ಕಟ್ಟಿಕೊಡಲಾಗಿದೆ. ನೈಜ ಘಟನೆಯ ಚಿತ್ರ ಎಲ್ಲರಿಗೂ ಮನ ಮುಟ್ಡಲಿದೆ ಎನ್ನುವ ವಿಶ್ವಾಸ ಮಂಸೋರೆ ಅವರದು.ಚಿತ್ರಕ್ಕೆ ದೇವರಾಜ್ ನಿರ್ಮಾಣ ಮಾಡಿದ್ದು  ಛಾಯಾಗ್ರಾಹ ಸತ್ಯ ಹೆಗಡೆ ಸಹ ನಿರ್ಮಾಣವಿದೆ. ರಂಗಭೂಮಿಯ ಪ್ರತಿಭೆ ಶೃಂಗ,ಬಾಲಾಜಿ ಮನೊಹರ್, ಸಂಪತ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಸಂದೀಪ್ ಮತ್ತಿತರಿದ್ದಾರೆ. ಬಕ್ಕೇಶ್ ಸಂಗೀತ, ಶಿವು ಬಿಕೆ ಕುಮಾರ್ ಛಾಯಾಗ್ರಹಣ  ಚಿತ್ತಕ್ಕಿದೆ.19,20,21  ಸಂವಿಧಾನದಲಿ ಬರುವ ಆರ್ಟಿಕಲ್. ಇದನ್ನು  ಸಂವಿಧಾನದ ಹೃದಯ ಭಾಗ ಎನ್ನುತ್ತಾರೆ.,ವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೇಳಲಾಗಿದೆ. ಅದನ್ನೇ ಸಿನಿಮಾದಲ್ಲಿಯೂ ತೋರಿಸಲಾಗಿದೆ. ನೈಜ ಘಟನೆಯ ಸಿನಿಮಾ ಆಗಿರುವುದರಿಂದ ಅದನ್ನು ತೆರೆಯ ಮೇಲೆ ಕಟ್ಟಿಕೊಡುವ ಸವಾಲು ಕೂಡ ಇತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1 ರಾಬರಿ ಕಥೆ ಟ್ರೈಲರ್ ಬಿಡುಗಡೆ.

Thu Mar 2 , 2023
  ರಾಬರಿಯಲ್ಲಿ ಗಳಿಸಿದ ನಿಧಿಯ ಸುತ್ತ ನಡೆಯುವ ಕಥಾಹಂದರ  ಇಟ್ಟುಕಂಡು “1ರಾಬರಿ ಕಥೆ”  ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ಗೋಪಾಲ್ ಹಳ್ಳೇರ ಹೊನ್ನಾವರ.ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ  ಸಿದ್ಧತೆ ಮಾಡಿಕೊಂಡಿದೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಬಂಡವಾಳ ಹಾಕಿದ್ದು  ರಣಧೀರ್‌ ಗೌಡ, ರಿಷ್ವಿ ಭಟ್ ,ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಬಳಿಕ ಮಾತಿಗಿಳಿದ  ನಿರ್ಮಾಪಕ ಸಂತೋಷ್, ಪಕ್ಕಾ ಮಾಸ್ ಕಮರ್ಷಿಯಲ್, ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಕಥಾಹಂದರ.  ಚಿತ್ರೀಕರಣ […]

Advertisement

Wordpress Social Share Plugin powered by Ultimatelysocial