SANDALWOOD:’ಲವ್ ಮಾಕ್ಟೇಲ್ 2′ ಪ್ರೀಮಿಯರ್ ಶೋ ಟಿಕೆಟ್ ಭರ್ಜರಿ ಸೇಲ್;

ಸ್ಟಾರ್ ಕಪಲ್ ಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ‘ಲವ್ ಮಾಕ್ಟೇಲ್’ ಮೂಲಕ ಜಂಟಿಯಾಗಿ ಸಿನಿಮಾ ನಿರ್ಮಾಣಕ್ಕಿಳಿದಿದ್ದರು. ಮೊದಲ ಭಾಗದಂತೆಯೇ ಈ ಅವತರಣಿಕೆಯನ್ನೂ ತಾರಾ ದಂಪತಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ.

ಲವ್ ಮಾಕ್ಟೇಲ್2 ಸಿನಿಮಾ ಪ್ರೇಕ್ಷಕರನ್ನು ಅಳು ಮತ್ತು ನಗುವಿನ ಕಡಲಲ್ಲಿ ತೇಲಿಸುವುದಾಗಿ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕ ನಟರೂ ಆಗಿರುವ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ಸಿನಿಮಾದಲ್ಲಿ ಅಳಿಸುವುದಕ್ಕಿಂತ ಹೆಚ್ಚಾಗಿ ನಗಿಸಿರುವುದಾಗಿ ಕೃಷ್ಣ ಭರವಸೆ ನೀಡುತ್ತಾರೆ.

ಜೀವನದಲ್ಲಿ ಪ್ರೀತಿ ಆಗೋದು ಸಹಜ. ಸಿನಿಮಾದಲ್ಲಿ ಬ್ರೇಕಪ್ ಅನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸಂದೇಶವನ್ನು ಹೇಳಲಾಗಿದೆ. ಸೂಕ್ಷ್ಮ ವಿಷಯಗಳನ್ನ ಜನರಿಗೆ ಇಷ್ಟ ಆಗೋ ರೀತಿ ಹೇಳಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದೇ ಮೊದಲ ಬಾರಿಗೆ ಲವ್ ಮಾಕ್ಟೇಲ್ 2 ಸಿನಿಮಾದ ಪ್ರೀಮಿಯರ್ ಶೋ ಟಿಕೆಟನ್ನು ಬುಕ್ ಮೈ ಶೋ ಜಾಲತಾಣದಲ್ಲಿ ಪ್ರೇಕ್ಷಕರಿಗಾಗಿ ಮಾರಾಟಕ್ಕಿಡಲಾಗಿದೆ. ಸಿನಿಮಾ ಫೆ.11ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೆ ಒಂದು ದಿನ ಮುಂಚೆ ಅಂದರೆ ಫೆ.10 ರಾತ್ರಿ 9.30ಕ್ಕೆ ಮೈಸೂರು, ಬೆಂಗಳೂರು ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ ಎನ್ನುವುದು ಕನ್ನಡ ಸಿನಿಮಾ ರಸಿಕರು ಹೆಮ್ಮೆ ಪಡುವ ಸಂಗತಿ.

ಎಲ್ಲರಿಗೂ ಒಂದು ದಿನ ಮುಂಚೆ ಸಿನಿಮಾ ನೋಡಬೇಕು ಎನ್ನುವ ಆಸೆ ಇರುತ್ತದೆ ಹೀಗಾಗಿ ಅಂಥ ಸಿನಿಮಾ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡುವ ಯೋಚನೆ ಬಂದಿದ್ದು ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗದಲ್ಲಿ ‘ಹೆಂಗೆ ನಾವು’ ಎನ್ನುವ ಸಂಭಾಷಣೆ ಜನಪ್ರಿಯವಾಗಿತ್ತು. ಅದರ ಮೀಮ್ ಗಳು, ಕಾಮಿಡಿ ವಿಡಿಯೋಗಳು ಅಸಂಖ್ಯ ಹರಿದಾಡಿದ್ದವು. ಅಂಥ ಹಲವು ಸಂಭಾಷಣೆಗಳು ಈ ಸಿನಿಮಾದಲ್ಲಿವೆ, ಅವು ಪ್ರೇಕ್ಷಕರಿಗೆ ಕಚಗುಳಿ ಇಡುವುದರಲ್ಲಿ ಸಂಶಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ದಂಪತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ;

Tue Feb 8 , 2022
ಸಿನಿಮಾ ಹಾಗೂ ರಾಜಕಾರಣ ಜೊತೆ-ಜೊತೆಯಾಗಿ ಸಾಗುತ್ತಿರುವ ರಂಗಗಳು. ನಟರು ರಾಜಕಾರಣಿಗಳಾಗುವುದು, ರಾಜಕಾರಣಿಗಳು ಸಿನಿಮಾ ನಿರ್ಮಾಪಕರು, ನಟರಾಗುವುದು ಬಹುಕಾಲದಿಂದ ನಡದೇ ಇದೆ. ಕರ್ನಾಟಕದಲ್ಲಿಯೂ ಈ ಪದ್ಧತಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರಾಗಿ ಮೆರೆದ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಈಗಲೂ ಹಲವು ನಟ-ನಟಿಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಎನ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದರು. ಇದೀಗ […]

Advertisement

Wordpress Social Share Plugin powered by Ultimatelysocial