ಸಾವಲ್ಲೂ ಪತ್ನಿಯನ್ನು ಹಿಂಬಾಲಿಸಿದ ಪತಿ: ಮೈಸೂರಿನ ದಂಪತಿಯ ಸ್ಟೋರಿ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ

ಮೈಸೂರು: ಪತ್ನಿಯನ್ನು ಸಾವಲ್ಲೂ ಪತಿ ಹಿಂಬಾಲಿಸಿದ್ದು, ಪುಟ್ಟ ಮಕ್ಕಳಿಬ್ಬರು ಅನಾಥವಾಗಿದ್ದಾರೆ. ಇಬ್ಬರ ಸಾವಿಂದ ಕಂಗೆಟ್ಟ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಆಟವಾಡುತ್ತಾ ಮಧ್ಯೆ ಮಧ್ಯೆ ‘ನನ್ನ ಅಪ್ಪ-ಅಮ್ಮ ಎಲ್ಲಿಗೋದ್ರು? ಯಾವಾಗ ಬರ್ತಾರೆ ಅಂಕಲ್​?’

ಎಂದು ಪುಟ್ಟ ಕಂದ ಕೇಳುತ್ತಿದ್ದ ದೃಶ್ಯ ಮನಕಲಕುತ್ತೆ.

ಇಂತಹ ಕರುಣಾಜನಕ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಸಂಭವಿಸಿದೆ. ಹಂಚ್ಯಾ ಗ್ರಾಮದ ಮಹೇಶ್ ಜತೆ ಗಾಯತ್ರಿ ಎಂಬುವರು ಮದುವೆ ಆಗಿದ್ದರು. ಇವರ ದಾಂಪತ್ಯ ಅನ್ಯೋನ್ಯವಾಗಿತ್ತು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಎಲ್ಲವೂ ಚೆನ್ನಾಗಿದೆ, ಸುಖ ಸಂಸಾರಕ್ಕೆ ಮತ್ತೇನು ಬೇಡ ಎಂಬಂತೆ ಬದುಕುತ್ತಿದ್ದವರ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ.

ಎರಡು ತಿಂಗಳ ಹಿಂದೆ ಮಹೇಶ್ ಪತ್ನಿ ಗಾಯತ್ರಿ ಬಿಪಿ ಮಾತ್ರೆಯ ಬದಲಾಗಿ ಬೇರೆ ಮಾತ್ರ ಸೇವಿಸಿ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿಯ ಮಡದಿಯ ಸಾವಿಂದ ಕಂಗೆಟ್ಟ ಪತಿ ಮಹೇಶ್​, ನಿತ್ಯ ನೋವಿನಿಂದಲೇ ಬಳಲುತ್ತಿದ್ದ. ಪತ್ನಿಯ ಸಾವಿನ ನೋವು ಸಹಿಸಲಾಗದೇ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದ. ಆಗ ಸ್ಥಳೀಯರು ಆತನನ್ನು ತಡೆದಿದ್ದರು. ಮನೆಯವರು ಧೈರ್ಯ ತಂದುಕೊಳ್ಳುವಂತೆ ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.

ಇಂದು(ಭಾನುವಾರ) ತೋಟವೊಂದರಲ್ಲಿ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಸಾವಿನ ಮನೆಯ ಕದ ತಟ್ಟಿದ್ದಾನೆ. ಕ್ರಿಮಿನಾಶಕ ಕುಡಿದು ಸಹೋದರನಿಗೆ ಕರೆ ಮಾಡಿದ ಮಹೇಶ್​, ‘ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ… ನನಗೆ ಗಾಯತ್ರಿ ನೆನಪು ಕಾಡುತ್ತಿದೆ. ನಾನು ಅವಳ ಬಳಿಗೇ ಹೋಗುತ್ತಿರುವೆ’ ಎಂದಿದ್ದಾನೆ. ಕೂಡಲೇ ಸ್ಥಳಕ್ಕೆ ಓಡೋಡಿ ಬಂದ ಕುಟುಂಬಸ್ಥರು ಮಹೇಶ್​ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃತ್ತಿ ಜೀವನದ ಯಶಸ್ಸಿನ ನಂತರ ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್ ---------------------

Tue Mar 29 , 2022
ಮಧ್ಯಮ ವರ್ಗದ ಕುಟುಂಬದಿಂದ ಬಂದು ಅಗಾಧವಾದ ಸಾಧನೆ ಮಾಡುವುದು ಕಷ್ಟದ ಕೆಲಸ. ಆದರೆ, ಆ ಕೆಲಸವನ್ನು ಅಷ್ಟೇ ಸಲೀಸಾಗಿಯೇ ಮಾಡಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ ಉಡುಪಿ ಮೂಲದ ತೇಜಸ್ವಿನಿ ಕೊಡವೂರ್. ಶಿಕ್ಷಣ, ಫ್ಯಾಷನ್, ಯೋಗ, ಉದ್ಯಮ, ವ್ಯವಹಾರ ಹೀಗೆ ಈ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರವರು. ಮಹಿಳೆಯರು ಮದುವೆ ಬಳಿಕ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಳ್ಳುವುದು ತುಂಬ ಅಪರೂಪ. ಅದಕ್ಕೆ ಅಪವಾದವೆಂಬಂತೆ ಹೌತ್ ಮೊಂಡೆ ಮಿಸೆಸ್ ಇಂಡಿಯಾ ವರ್ಲ್ಡ್​ವೈಡ್ […]

Advertisement

Wordpress Social Share Plugin powered by Ultimatelysocial