ಸರ್ಕಾರ ಜನವರಿ 3ನೇ ದಿನವನ್ನು ರಾಷ್ಟ್ರೀಯ ಮಹಿಳಾ ಶಿಕ್ಷಣ ದಿನವನ್ನಾಗಿ ಘೊಷಣೆ ಮಾಡಲಿ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

ತುಮಕೂರು ನಗರದ ಕನ್ನಡ ಭವನದಲ್ಲಿ ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆ ಹಳೇ ವಿಧ್ಯಾರ್ಥಿಗಳ ವತಿಯಿಂದ ಗುರುವಂದನೆ, ನುಡಿನಮನ ಮತ್ತು ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ ಆಯೋಜನೆ ಕಾರ್ಯಕ್ರಮವನ್ನು ನಾಡೋಜ ಸಾಹಿತಿ ಚಲನಚಿತ್ರ ನಿರ್ದೇಶಕ ಪ್ರೊ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಿದ ಅವರು ನೂರಾರು ಜನ ಸಾವಿರಾರು ಜನ ಬಲಿದಾನವನ್ನು ಮಾಡಿ ಈ ದೇಶವನ್ನು ಕಟ್ಟಿರುವಂತ ಉದಾಹರಣೆ ನಮ್ಮ ಕಣ್ಮುಂದೆ ಇದೆ ಹಾಗೆ ಈ ದೇಶವನ್ನು ಕಟ್ಟಿದವರು ಒಂದೆಡೆ ಯಾದರೆ ಮನಸ್ಸನ್ನು ಕಟ್ಟಿದವರು ಮೆದುಳನ್ನು ಕಟ್ಟಿರುವವರು ಆನೇಕರಿದ್ದಾರೆ ಅವರೆ ನಮ್ಮ ನಾಡಿನ ಶಿಕ್ಷಕರು ಅವರೆ ಗುರುಗಳು ಅಂತಹ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಇಂದು ತುಮಕೂರಿನ ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಹಳೆ ವಿಧ್ಯಾರ್ಥಿಗಳು ಎಲ್ಲರೂ ಸೇರಿ ಇಂತಹ ಒಂದು ಅರ್ಥಗರ್ಭಿತವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವಂತ ವಿಧ್ಯಾರ್ಥಿಗಳಿಗೆ ಅಭಿನಂದನೆಗಳು.

ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯ ಕಾರಣ ಗುರುವಂದನೆ ನಾನು ಒಬ್ಬ ಶಿಕ್ಷಕನಾಗಿ ಹೈಸ್ಕೂಲ್ ಶಿಕ್ಷಕನಾಗಿ ಪ್ರೈಮರಿ ಸ್ಕೂಲ್ ಶಿಕ್ಷಕನಾಗಿ ಪಿಯುಸಿ .ಪದವಿ ಶಿಕ್ಷಕನಾಗಿ ಎಲ್ಲಾ ವಿಧ್ಯಾರ್ಥಿಗಳಿ ಪಾಠವನ್ನು ಮಾಡಿ ಮತ್ತು ಪಾಠವನ್ನು ಕಲಿತ ಶಿಕ್ಷಕ ನಿಜವಾದ ಶಿಕ್ಷಕನೆಂದರೆ ಮಕ್ಕಳಿಗೆ ಪಾಠವನ್ನು ಕಲಿಸುತ್ತಾ ಕಲಿಸುತ್ತಾ ತಾನು ಕಲಿತು ಜೀವನದ ದಾರಿ ಕಾಣುವುದೆ ಶಿಕ್ಷಕನ ಗುಣ .ಶಿಕ್ಷಕರು ಲೋಕದ ಮನಸ್ಸುಗಳನ್ನು ಸೃಷ್ಟಿ ಮಾಡುವವರು ಶಿಕ್ಷಣ ಅನ್ನುವುದು ಈ ಸಮಾಜದ ಒಂದು ಭಾಗ ,ಅಧ್ಯಾಪಕರು ಸಮಾಜದ ಒಂದು ಭಾಗ , ವಿಧ್ಯಾರ್ಥಿಗಳು ಸಮಾಜದ ಒಂದು ಭಾಗ .

ಶಿಕ್ಷಣ ಪ್ರಜಾಪ್ರಭುತ್ವಿಕರಣ ಆಗಿದೆ ಸಾರ್ವಾರ್ತಿಕರಣ ಆಗಿದೆ ಇದರಿಂದಾಗಿ ಬಡವರು ಶಿಕ್ಷಣಕ್ಕೆ ಬಂದರು ದಲಿತರು ಶಿಕ್ಷಣಕ್ಕೆ ಬಂದರು ಬೇರೆ ಬೇರೆ ಸಮಾಜದವರು ಶಿಕ್ಷಣಕ್ಕೆ ಬಂದರು ಇಂತಹ ಸಂದರ್ಭದಲ್ಲಿ ಶಿಕ್ಷಣದ ಮಹತ್ವ ಬಹಳ ದೊಡ್ಡದು,ಶಿಕ್ಷಣ ಇಂದು ಉಧ್ಯಮಿಗಳ ಪಾಲಾಗುತ್ತಿದೆ ಶಿಕ್ಷಣರತ್ನರನ್ನು ಉಧ್ಯಮಿಗಳು ಆಕ್ರಮಿಸಿಕೊಂಡಿದ್ದಾರೆ ಅಂದಿನ ದಿನಗಳಲ್ಲಿ ಅಧಿಕಾರಿಗಳು ಶಿಕ್ಷಣದ ರತ್ನರಾಗಿದ್ದರು ಇಂದಿನ ದಿನಗಳಲ್ಲಿ ಶಿಕ್ಷಣ ರತ್ನರ ಜಾಗಕ್ಕೆ ಶಿಕ್ಷಣೋಧ್ಯಮಿಗಳು ಬಂದಿದ್ದಾರೆ.ಶಿಕ್ಷಣೋಧ್ಯಮಿಗಳು ಬಂದನಂತರ ಶಿಕ್ಷಣ ಬರೀ ಲಾಭ ನಷ್ಟಗಳ ಲೆಕ್ಕಚಾರದಲ್ಲಿದೆ ಇದರ ಫಲವಾಗಿ ಶಿಕ್ಷಣದ ವ್ಯವಸ್ಥೆಯಲ್ಲಿ ನಾವುಗಳು ಅಸಮಾನತೆಯನ್ನು ಕಾಣುವಂತಾಗಿದೆ ಎಂದರು.ಮಹಿಳೆಯರಿಗೆ ಮೊದಲು ಶಿಕ್ಷಣ ಕಲಿಸಿದ್ದು ಸಾವಿತ್ರಿ ಬಾಯಿ ಪುಲೆ ಹೆಣ್ಣು ಮಕ್ಕಳು ಶಿಕ್ಷಣವನ್ನು ಕಲಿತರೆ ದೇಶದ ಅಭಿವೃದ್ಧಿ ಹೊಂದಿದ ಹಾಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಿದ ಹೆಗ್ಗಳಿಕೆಗೆ ಸಾವಿತ್ರಿ ಬಾಯಿ ಪುಲೆ ಅವರಿಗೆ ಸಲ್ಲುತ್ತದೆ ಅದ್ದರಿಂದ ಸಾವಿತ್ರಿ ಬಾಯಿ ಪುಲೆ ಯವರ ಜನ್ಮದಿನ ಜನವರಿ 3 ನೇ ತಾರಿಕು ಆ ದಿನವನ್ನು ನಾವುಗಳು ಶಿಕ್ಷಣದ ದಿನವೆಂದು ಆಚರಣೆ ಮಾಡುವಂತಾಗಬೇಕು ಸರ್ಕಾರ ಆ ದಿನವನ್ನು ರಾಷ್ಟ್ರೀಯ ಮಹಿಳಾ ಶಿಕ್ಷಣ ದಿನವಾಗಿ ಘೋಷಣೆ ಮಾಡಬೇಕೆಂದು ಸಲಹೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ.ಇ.ಎಸ್. ಪುಂಡಾಟಿಕೆ ಯಾರು ಸಹಿಸಲು ಸಾಧ್ಯವಿಲ್ಲ ನಟ ಪ್ರೇಮ್ ಆಕ್ರೋಶ

Mon Dec 20 , 2021
ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಾನ್ ಆಗಲೇಬೇಕು ಎಂದು ಒತ್ತಾಯಿಸಿರುವ ನಟ ಪ್ರೇಮ್ ಎಂಇಎಸ್ ನಿಂದ ಬರಿ ಕನ್ನಡಿಗರಿಗಷ್ಟೆ ಅಲ್ಲಾ ಅಲ್ಲಿನ ಮರಾಠಿಗರಿಗೆ ತೊಂದರೆಯಾಗುತ್ತಿದೆ. ಹೀಗಾಗಿ m.e.s. ಸಂಘಟನೆ ಸಂಪೂರ್ಣ ಬ್ಯಾನ್ ಮಾಡಬೇಕೆಂದು ಹೇಳಿದರು. ಬಾಗಲಕೋಟೆ ನಗರದಲ್ಲಿ ಭಾನುವಾರ ಪ್ರೇಮಂ ಪೂಜ್ಯಂ ಚಿತ್ರದ ನಟರಾಗಿರುವ ಪ್ರೇಮ್ ಸುದ್ದಿಗಾರರೊಂದಿಗೆ ಮಾತನಾಡಿ ಎಂಇಎಸ್ ಪುಂಡಾಟಿಕೆ ಯಾರು ಸಹಿಸಲು ಸಾಧ್ಯವಿಲ್ಲ. ಕನ್ನಡಿಗರು ಏನು ಮಾಡಿದರು ಸುಮ್ಮನಿರುತ್ತಾರೆ ಎಂದು ತಿಳಿಯಬೇಡಿ ಎಂದು ಎಂ.ಇ.ಎಸ್.ಗೆ ಎಚ್ಚರಿಕೆ ನೀಡಿದ ಅವರು […]

Advertisement

Wordpress Social Share Plugin powered by Ultimatelysocial