ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ತೆಲ್ಕೂರ್ ಸೂಚನೆ

ಸೇಡಂ : ಗುತ್ತಿಗೇದಾರರು ಉತ್ತಮ ಹಾಗೂ ದೀರ್ಘಕಾಲ ಬಾಳಿಕೆ ಬರುವ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಕಳಪೆ ಮಾಡುತ್ತಿರುವ ಮಾಹಿತಿ ಬಂದಲ್ಲಿ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಡಿಸಿಸಿ ಬ್ಯಾಂಕ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಎಚ್ಚರಿಕೆ ನೀಡಿದರು.

ಪಟ್ಟಣದ ಚಿಂಚೋಳಿ ಕ್ರಾಸ್ ನಿಂದ ಅಗ್ಗಿ ಬಸವೇಶ್ವರ ಕಾಲೋನಿ ವರೆಗೂ ನಡೆಯುತ್ತಿರು ಚತುಷ್ಪಥ ರಸ್ತೆ ಕಾಮಗಾರಿ ವಿಕ್ಷಣೆ ಮಾಡಿ, ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಸುಮಾರು 12 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಸೇಡಂ ವರ್ತುಲ ರಸ್ತೆ ಇದಾಗುವುದರಿಂದ ರಸ್ತೆಯ ಎರಡು ಬದಿಯಲ್ಲಿ ಚರಂಡಿ, ರಸ್ತೆಯ ಮದ್ಯದಲ್ಲಿ ವಿದ್ಯುತ್ ದೀಪ, ಹಾಗೂ ಪಾದಾಚಾರಿಗಳಿಗೆ ಅನುಕೂಲವಾಗುವಂತೆ ಪುಟ್‍ಪಾತ್ ಮಾಡಲಾಗುತ್ತಿದೆ. ದಿನ ಕಳೆದಂತೆ ವಾಹನಗಳ ಓಡಾಟ ಹೆಚ್ಚಿತ್ತುರುವುದರಿಂದಾಗಿ ವಾಹನ ದಟ್ಟಣೆ ತಡೆಗಟ್ಟಲು ಈ ರಸ್ತೆ ಸಹಕಾರಿಯಾಗಲಿದೆ. ಅಧಿಕಾರಿಗಳು ಕಾಮಗಾರಿ ವಿಕ್ಷಣೆ ಮಾಡಿ ಗುಣ ಮಟ್ಟದ ಕಾಮಗಾರಿ ಮಾಡಲಾಗುತ್ತಿದೆಯೆ ಎಂದು ಪರಿಶೀಲಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

ಈ ವೇಳೆ ಚನ್ನಬಸ್ಸಪ್ಪ ನಿರ್ಣಿ, ವಿರೇಶ ಹುಗಾರ, ಶಿವುಕುಮಾರ ಬೋಳಶೆಟ್ಟಿ, ದೇವಿಂದ್ರಪ್ಪ ನಾಯಿಕೋಡಿ, ಗುರುರಾಜರೆಡ್ಡಿ ತೆಲ್ಕೂರ, ಸಂತೋಷ ಬುರಗಪಲ್ಲಿ, ಸಂತೋಷ ಬಟಗೇರಾ, ಅನಿಲ ರನ್ನೇಟ್ಲಾ ಸೇರಿದಂತೆ ಇತರರಿದ್ದರು

Please follow and like us:

Leave a Reply

Your email address will not be published. Required fields are marked *

Next Post

ಪೌಷ್ಟಿಕ ಆಹಾರ ಕಾರ್ಯಕ್ರಮ ಮತ್ತು ಗಡಿಲಿಂಗದಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಿಗೆ ಎಲ್ಲಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ

Tue Mar 23 , 2021
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ 1ರಲ್ಲಿ ಇಂದು ಚಿಂಚೋಳಿ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಸೂಪರ್ವೆಜರ್ ಆದ ಸರೋಜ ಅವರ ನೇತ್ರತ್ವದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಮತ್ತು ಗಡಿಲಿಂಗದಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಿಗೆ ಎಲ್ಲಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಿಶಂಕರ ಉಪ್ಪಿನ ಸದಸ್ಯರಾ ಶಿವಕುಮಾರ್ ಬಸಪ್ಪ ನಾಗಪ್ಪ ಜಗನ್ನಾಥ ಮತ್ತು ಅಂಗನವಾಡಿ […]

Advertisement

Wordpress Social Share Plugin powered by Ultimatelysocial