ಚೆನ್ನೈ: ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಹತ್ಯೆ

ಚೆನ್ನೈ: ಚೆನ್ನೈನ ಮಡಿಪಕ್ಕಂ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಅವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನಈ ಕೃತ್ಯ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.ಸೆಲ್ವಂ (46) ಡಿಎಂಕೆಯ 186 ನೇ ವಾರ್ಡ್ ಘಟಕದ ಕಾರ್ಯದರ್ಶಿ ಆಗಿದ್ದರು ಎಂದು ತಿಳಿದುಬಂದಿದೆ.ಸೆಲ್ವಂ ಅವರನ್ನು ರಾತ್ರಿ 9:30 ಕ್ಕೆ ಮಡಿಪಕ್ಕಂನಲ್ಲಿರುವ ಅವರ ನಿವಾಸದ ಹೊರಗೆ ಜನರ ಎದುರೇ ಗ್ಯಾಂಗ್ ಕೊಂದಿದೆ ಎಂದು ಹೇಳಲಾಗಿದೆ. ಹಲ್ಲೆ ನಡೆಸಿದ ಬಳಿಕ ತಂಡ ಪರಾರಿಯಾಗಿದೆ. ಸೆಲ್ವಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಡಿಪಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದು, ಭೀಕರ ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚುತ್ತಿದ್ದಾರೆ.ಸೆಲ್ವಂ ಅವರು ಈ ವಾರ ಕೊಲೆಯಾದ ಎರಡನೇ ಡಿಎಂಕೆ ಸ್ಥಳೀಯ ಪದಾಧಿಕಾರಿಯಾಗಿದ್ದಾರೆ. ತಿರುನೆಲ್ವೇಲಿಯಲ್ಲಿ ಪೊನ್ನುದಾಸ್ (38) ಅವರನ್ನು ರವಿವಾರ ಹತ್ಯೆ ಮಾಡಲಾಗಿದೆ. ಆತನ ಮೇಲೆ ಕಾರೊಂದು ಹರಿದಿದ್ದು, ನಂತರ ಕಾರಿನಲ್ಲಿದ್ದವರು ಕೆಳಗಿಳಿದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬ್ಯಾಟ್ ಮತ್ತು ಬಾಲ್‌ನೊಂದಿಗೆ ಹಾರ್ದಿಕ್ ಪಾಂಡ್ಯ ಕೇವಲ ಬ್ಯಾಟರ್‌ಗಿಂತ ಉತ್ತಮವಾಗಿ ಧ್ವನಿಸುತ್ತದೆ'

Wed Feb 2 , 2022
  ಐಪಿಎಲ್ 2022 ರಲ್ಲಿ ಅಹಮದಾಬಾದ್ ಫ್ರಾಂಚೈಸಿಯನ್ನು ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ ಅವರ ಅಭಿಪ್ರಾಯ ಇದು. ಪಾಂಡ್ಯ ಅವರು ಹಿರಿಯ ಮಟ್ಟದಲ್ಲಿ ಒಮ್ಮೆ ಮಾತ್ರ ನಾಯಕತ್ವ ವಹಿಸಿದ್ದಾರೆ – 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದ ಪಂದ್ಯದಲ್ಲಿ – ಆದರೆ ಅವರು ಅನುಭವದ ಕೊರತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವಾಗಲೂ “ಮಾನಸಿಕವಾಗಿ ಸಿದ್ಧ”. “ನೀವು ವಿಭಿನ್ನ ರೀತಿಯಲ್ಲಿ ಮುನ್ನಡೆಸುತ್ತೀರಿ ಎಂದು ನಾನು ಯಾವಾಗಲೂ ನಂಬುತ್ತೇನೆ” ಎಂದು ಪಾಂಡ್ಯ ಮಂಗಳವಾರ ಮಾಧ್ಯಮ ಸಂವಾದದಲ್ಲಿ […]

Advertisement

Wordpress Social Share Plugin powered by Ultimatelysocial