ಶಾಲೆಯಲ್ಲಿ ಮೊಟ್ಟೆ ನೀಡುವ ಕುರಿತು ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಶಾಲೆಯಲ್ಲಿ ಮೊಟ್ಟೆ ನೀಡುವ ಕುರಿತು ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊಪ್ಪಳ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ಸರ್ಕಾರವು ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಗೊಳಿಸಿತ್ತು. ಆದರೆ, ಇದಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾರಣ, ಅಕ್ಷರ ದಾಸೋಹ ಅಧಿಕಾರಿಗಳು ಮೊಟ್ಟೆ ತಿನ್ನುವ ಕುರಿತು ಸಮೀಕ್ಷೆ ನಡೆಸಿದ್ದರು.

ವಿದ್ಯಾರ್ಥಿಗಳು ಮೊಟ್ಟೆ ತಿನ್ನುವ ಕುರಿತು ಈ ಸಮೀಕ್ಷೆ ನಡೆದಿತ್ತು. ಸಮೀಕ್ಷೆಯ ವರದಿಯಂತೆ, ಬಹುಪಾಲು ವಿದ್ಯಾರ್ಥಿಗಳು ಸರ್ಕಾರದ ಯೋಜನೆಯನ್ನು ಇಷ್ಟಪಟ್ಟಿದ್ದಾರೆ. ಸರ್ಕಾರ ನೀಡುತ್ತಿರುವ ಮೊಟ್ಟೆಯನ್ನು ತಮ್ಮ ಮಧ್ಯಾಹ್ನದ ಬಿಸಿಯೂಟದೊಂದಿಗೆ ತಿನ್ನುತ್ತಿದ್ದು, ಈ ಯೋಜನೆಗೆ ಮಕ್ಕಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1,67,111 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಈ ಪೈಕಿ ಕೇವಲ ಶೇ. 7ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತ್ಯಜಿಸಿ ಬಾಳೆಹಣ್ಣು ತಿನ್ನುತ್ತಿದ್ದರೆ, ಬರೋಬ್ಬರಿ ಶೇ.93ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಿದ್ದಾರೆ. ಅಲ್ಲದೇ, ನಾವು ಮೊಟ್ಟೆ ತಿನ್ನುತ್ತೇವೆ, ನಮಗೆ ಮೊಟ್ಟೆಯೇ ಬೇಕು ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಸರ್ಕಾರ ಪ್ರಾರಂಭಿಸುತ್ತಿದ್ದಂತೆ ಹಲವು ಮಠಾಧೀಶರು ಸೇರಿದಂತೆ ಒಂದಷ್ಟು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ, ಶಾಲೆಗಳಲ್ಲಿ ಮೊಟ್ಟೆಗಳನ್ನು ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಹಲವು ವಿದ್ಯಾರ್ಥಿಗಳು ನಮಗೆ ಮೊಟ್ಟೆಯೇ ಬೇಕು ಎಂದು ಬಹಿರಂಗವಾಗಿ ಹೇಳಿದ್ದರು. ಸದ್ಯ ವಿದ್ಯಾರ್ಥಿಗಳೇ ಮೊಟ್ಟೆಯನ್ನು ಆಯ್ಕೆ ಮಾಡಿಕೊಂಡಂತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

Wed Dec 22 , 2021
  ಅಪ್ಪು(Appu), ಪವರ್​ ಸ್ಟಾರ್​(Power Star), ನಟಸಾರ್ವಭೌಮ, ಸರಳತೆಯ ಸಾಮ್ರಾಟ್​, ಬೆಟ್ಟದ ಹೂ, ಹೀಗೆ ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ಕರೆಯಲು ಇರುವ ಹೆಸರು ಒಂದೇ..?ಎರಡೇ..? ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್​​ಕುಮಾರ್(Dr. […]

Advertisement

Wordpress Social Share Plugin powered by Ultimatelysocial