ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಹಾವು ಕಡಿತ

ಮುಂಬೈ: ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಕೈಗೆ ಹಾವು ಕಚ್ಚಿದೆ. ಪನ್ವೇಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್​ ಖಾನ್​ಗೆ ಶನಿವಾರ ಮಧ್ಯರಾತ್ರಿ ಹಾವು ಕಚ್ಚಿದೆ.

ಕೂಡಲೇ ಸಲ್ಮಾನ್ ಖಾನ್ ಅವರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಷ ರಹಿತ ಹಾವಾಗಿದ್ದರಿಂದ ಸಲ್ಮಾನ್​ ಅವರ ಆರೋಗ್ಯದಲ್ಲಿ ಅಷ್ಟಾಗಿ ಬಾಧಿಸಿಲ್ಲ ಎಂದು ಮೂಲಗಳು ಹೇಳಿವೆ. ಸದ್ಯ ನಟ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾನು ಭಯಸ್ತ ಅಲ್ಲ, ಮಾಗಡಿ ರೋಡಲ್ಲಿ ದೊಡ್ಡದೊಡ್ಡ ಪೋಲಿ ಆಟವಾಡಿ ಬಂದವನು: ಹಂಸಲೇಖ

Sun Dec 26 , 2021
ಬೆಂಗಳೂರು: ನನ್ನ ವಿರುದ್ಧ ಒಂದು ವಿವಾದ ಆದಾಗ ನನ್ನ ಬೆಂಬಲಕ್ಕೆ ನಿಂತಿದ್ದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಳೆಯ ಘಟನೆಯನ್ನು ಕೆದಕಿದರು. ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಾತನಾಡಿದರು. ನನ್ನ ವಿರುದ್ಧ ಒಂದು ವಿವಾದ ಆದಾಗ ಸುಮ್ಮನಿರು ನಾನು ಮಾತನಾಡುತ್ತೇನೆಂದು ನನ್ನ ಬೆಂಬಲಕ್ಕೆ ನಿಂತಿದ್ದು ಎಸ್​ಜಿಎಸ್​ ಅವರು. ಬ್ಲಡ್ ಫ್ರೈ ಬಗ್ಗೆ ಮಾತನಾಡಿದಕ್ಕೆ ಬ್ಲಡ್ […]

Advertisement

Wordpress Social Share Plugin powered by Ultimatelysocial