ಶಾಸಕ ದತ್ತಾತ್ರೇಯ ‍ಜನ್ಮದಿನ ಇಂದು

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರ ಜನ್ಮದಿನದ ಅಂಗವಾಗಿ ಫೆ. 27ರಂದು ಸಂಜೆ 5 ಗಂಟೆಗೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿದೆ.ಲಿಂಗೈಕ್ಯ ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್‌ ವತಿಯಿಂದ ಆಯೋಜಿಸಿದ ಈ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ತಂಡದವರು ಕಲಬುರಗಿ ಜನರಿಗೆ ಸಂಗೀತ ರಸದೌಣ ಉಣಬಡಿಸಲಿದ್ದಾರೆ. ಇದಕ್ಕಾಗಿ ಎನ್‌.ವಿ. ಮೈದಾನದಲ್ಲಿ ವಿಶಾಲವಾದ ವರ್ಣರಂಜಿತ ವೇದಿಕೆ ಕೂಡ ಸಜ್ಜುಗೊಳಿಸಲಾಗಿದೆ.ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ‍ ಅಪ್ಪ, ಸೊಲ್ಲಾಪುರ ಸಂಸದರೂ ಆದ ಗೌಡಗಾಂವ ಸಂಸ್ಥಾನ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯರು, ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸುವರು.ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬಡದಾಳದ ಡಾ.ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್‌ಪರ್ಸನ್‌ ಡಾ.ದಾಕ್ಷಾಯಿಣಿ ಎಸ್‌. ಅಪ್ಪ, ಚಿಣಮಗೇರಿ ಮಠದ ಸಿದ್ಧರಾಮ ಶಿವಾಚಾರ್ಯರು, ಖಾಜಾ ಬಂದಾ ನವಾಜ್‌ ದರ್ಗಾದ ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ, ವಿಶ್ವಕರ್ಮ ಏಕದಂಡಗಿ ಮಠದ ಗುರುನಾಥೇಂದ್ರ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯರು, ಅಫಜಲಪುರ ಮಳೇಂದ್ರ ಮಠದ ಮಳೇಂದ್ರ ಶಿವಾಚಾರ್ಯರು, ರೇವೂರಿನ ಶ್ರೀಕಂಠ ಶಿವಾಚಾರ್ಯರು, ಯಳಸಂಗಿಯ ಗುರುಪಾದಲಿಂಗ ಸ್ವಾಮೀಜಿ, ಸಾವಳಗಿಯ ಗುರುನಾಥ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ಸ್ಟೇಷನ್‌ ಬಬಲಾದ್‌ನ ರೇವಣಸಿದ್ಧ ಶಿವಾಚಾರ್ಯರು, ಮಕ್ತಂಪುರದ ಶಿವಾನಂದ ಸ್ವಾಮೀಜಿ, ಆರ್ಟ್‌ ಆಫ್‌ ಲಿವಿಂಗ್‌ನ ಶರಣುಸ್ವಾಮಿ, ಹುಣಸಿ ಹಡಗಿಲ್‌ನ ಗುಂಡು ಮುತ್ಯಾ, ಸಿದ್ಧಾರ್ಥ ಬುದ್ಧವಿಹಾರದ ಸಂಗಾನಂದ ಭಂತೇಜಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಿಜಯಾ ದೀದಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕಿ ಅರುಣಾದೇವಿ ಚಂದ್ರಶೇಖರ ಪಾಟೀಲ ರೇವೂರ ಅವರು ಅಧ್ಯಕ್ಷತೆ ವಹಿಸುವರು.ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಸಂಸದ ಡಾ.ಉಮೇಶ ಜಾಧವ ಸೇರಿದಂತೆ ಜಿಲ್ಲೆಯ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬರುವ WhatsApp ವೈಶಿಷ್ಟ್ಯಗಳನ್ನು ಇದೀಗ ನಿರೀಕ್ಷಿಸಬಹುದು!

Sun Feb 27 , 2022
ಮೆಟಾ ಒಡೆತನದಲ್ಲಿರುವ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಉತ್ತಮ ಬಳಕೆದಾರ ಅನುಭವವನ್ನು ನೀಡಲು ಹಲವಾರು ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ಸೇರಿಸಲು ಹೆಸರುವಾಸಿಯಾಗಿದೆ. ಮುಂಬರುವ ಫೀಚರ್‌ಗಳ ಕುರಿತು ಸುಳಿವು ನೀಡುವ ಹಲವಾರು ವರದಿಗಳನ್ನು ನಾವು ಪ್ರತಿದಿನವೂ ನೋಡುತ್ತಿದ್ದೇವೆ. ಈ ಕೆಲವು ವೈಶಿಷ್ಟ್ಯಗಳು ಸಾಕಷ್ಟು ಆಸಕ್ತಿದಾಯಕವಾಗಿವೆ ಮತ್ತು ಖಂಡಿತವಾಗಿಯೂ ಅಪ್ಲಿಕೇಶನ್‌ನ ಉಪಯುಕ್ತತೆಗೆ ಸೇರಿಸಬಹುದು. ಸಾಮಾನ್ಯವಾಗಿ, WhatsApp ತನ್ನ Android ಮತ್ತು iOS ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಗಳಲ್ಲಿ ಮುಂಬರುವ ವೈಶಿಷ್ಟ್ಯಗಳನ್ನು ಎಲ್ಲಾ ಬಳಕೆದಾರರಿಗೆ ಹೊರತರುವ […]

Advertisement

Wordpress Social Share Plugin powered by Ultimatelysocial