ಹೊಸ ಚಿತ್ರದ ಟೀಸರ್ ರಿಲೀಸ್ ಮಾಡಿದ ಶಿವಣ್ಣ..! 

ಸುಪ್ರಿಂ ಹೀರೋ ಶಶಿಕುಮಾರ್ ಮಗ ಅಕ್ಷಿತ್ ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದಾರೆ. ಅಕ್ಷಿತ್ ಶಶಿಕುಮಾರ್ ಅಭಿನಯದ ಚೊಚ್ಚಲ್ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಗೆಳೆಯನ ಪುತ್ರನಿಗೆ ಶಹಬ್ಬಾಸ್ ಹೇಳಿದ್ದಾರೆ ಶಿವಣ್ಣ. ಈ ಕುರಿತು ಒಂದು ಸ್ಪೆಷಲ್  ರಿಪೋರ್ಟ್ ಇಲ್ಲಿದೆ

ಸ್ಯಾಂಡಲ್ ವುಡ್ ನ ಸುಪ್ರೀಮ್ ಹೀರೋ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಇದೀಗ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಅಕ್ಷಿತ್ ನಟನೆಯ ಚೊಚ್ಚಲ ಚಿತ್ರ ಸೀತಾಯಣ.. ಈ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಮೂಡಿಬರ್ತಿದೆ.. ಸದ್ಯ ಈ ಚಿತ್ರದ ಟೀಸರ್ ರಿವೀಲ್ ಆಗಿದೆ.. ವಿಶೇಷ ಅಂದ್ರೆ ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಈ ಚಿತ್ರದ ಟೀಸರ್ ನ್ನ ರಿವೀಲ್ ಮಾಡಿದ್ದಾರೆ.. ಸಾಕಷ್ಟು ಸಿನಿಮಾಗಳಲ್ಲಿ ಶಶಿಕಮಾರ್ ಹಾಗೂ ಶಿವಣ್ಣ ಒಟ್ಟಿಗೆ ನಟಿಸಿದ್ದಾರೆ.. ಅದಕ್ಕೂ ಮೀರಿ ಇಬ್ಬರೂ ವೈಯಕ್ತಿಕವಾಗಿ ಉತ್ತಮ ಸ್ನೇಹಿತರೂ ಕೂಡ ಹೌದು.. ಹೀಗಾಗಿ ತಮ್ಮ ಆತ್ಮೀಯ ಗೆಳೆಯನ ಪುತ್ರ ನಟಿಸಿರುವ ಮೊದಲ ಚಿತ್ರದ ಟೀಸರ್ ನ್ನ ರಿವೀಲ್ ಮಾಡಿ, ಶುಭ ಹಾರೈಸಿದ್ದಾರೆ ಶಿವಣ್ಣ..

ಸೀತಾಯಣ ಸಿನಿಮಾದ ಕನ್ನಡ ಹಾಗೂ ತಮಿಳು ಭಾಷೆಯ ಟೀಸರ್ ಗಳನ್ನ ಶಿವರಾಜ್ ಕುಮಾರ್ ಅವರು ರಿಲೀಸ್ ಮಾಡಿದ್ರೆ, ಇನ್ನೂ ತೆಲುಗು ವರ್ಷನ್ ಟೀಸರ್ ನ್ನ ಟಾಲಿವುಡ್ ಸ್ಟಾರ್ ನಟ ರವಿತೇಜ ಅವರು ಬಿಡುಗಡೆ ಮಾಡಿದ್ದಾರೆ.. ಸದ್ಯ ರಿವೀಲ್ ಆಗಿರುವ ಸೀತಾಯಣ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರೇಕ್ಷಕರಿಂದ ಸೂಪರ್ಬ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ತಿದೆ.. ಎನಿವೇ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿರುವ ಸೀತಾಯಣ ಸಿನಿಮಾ ರಿಲೀಸ್ ನಂತ್ರ ಯಾವ್ ರೀತಿ ಕಮಾಲ್ ಮಾಡಲಿದೆ ಅಂತ ಕಾದು ನೋಡ್ಬೇಕು..

ಇದನ್ನ ಓದಿ :ನವಗ್ರಹ ಚಾಪ್ಟರ್-2 ಬರುತ್ತಾ- ಮತ್ತೆ ಒಂದಾಗ್ತಾರಾ ವಿಲನ್ ಮಕ್ಕಳು..?

 

Please follow and like us:

Leave a Reply

Your email address will not be published. Required fields are marked *

Next Post

ಕೊಲ್ಲಿ ಕದನದಲ್ಲಿ ಕನ್ನಡಿಗರ ಸಾಧನೆ

Sat Nov 14 , 2020
ಕೊರೊನಾದ ಕರಿಛಾಯೆಯ ನಡುವೆಯು ಮರಳುಗಾಡಿನಲ್ಲಿ ನಡೆದ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಯಶಸ್ವಿಯಾಗಿ ಕೊನೆಗೊಂಡಿದೆ. ಈ ಸಲದ ಕಪ್ ಯಾರಿಗೆ ಎಂದು ಕಳೆದ ಒಂದುವರೆ ತಿಂಗಳಿನಿಂದ ಕಾದು ಕುಳಿತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಕಡೆಗೂ ಉತ್ತರ ಸಿಕ್ಕಿದೆ. ಮರಳು ನಾಡಿನ ಮಹಾ ಐಪಿಎಲ್ ಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಕಿರೀಟ ಧರಿಸಿದೆ. ಅರಬ್ ನಾಡಿನಲ್ಲಿ ಅಬ್ಬರಿಸಿದ ಬಿಗ್ ಹಿಟ್ಟರ್ ಪಡೆ ಕೊಲ್ಲಿ ಕದನವನ್ನು ಗೆದ್ದು ಬೀಗಿದೆ.  ಕೊಲ್ಲಿ ರಾಷ್ಟ್ರದಲ್ಲಿ […]

Advertisement

Wordpress Social Share Plugin powered by Ultimatelysocial