ಡಾ. ಸರ್ವಮಂಗಳಾ ಶಾಸ್ತ್ರಿ ಬಹುಮುಖಿ ಚಟುವಟಿಕೆಗಳ ಕೇಂದ್ರಬಿಂದು.

ಮಡಿಕೇರಿಯಲ್ಲಿ ಜನಿಸಿದ ಅವರು ಪದವಿ, ಕನ್ನಡ ಎಂ. ಎ, ಶಿಕ್ಷಣ ತರಬೇತಿ ಮುಂತಾದವುಗಳನ್ನು ಉನ್ನತ ಸಾಧನೆಗಳೊಂದಿಗೆ ಪಡೆದಿರುವುದಲ್ಲದೆ “ಪಾ. ವೆಂ. ಆಚಾರ್ಯರ ಬದುಕು ಬರೆಹ – ಒಂದು ಅಧ್ಯಯನ” ಮಹಾಪ್ರಬಂಧವನ್ನು ಡಾ. ಶ್ಯಾಮಸುಂದರ ಬಿದರಕುಂದಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದ್ದಾರೆ.
ಮಡಿಕೇರಿಯಲ್ಲಿ ಕಾಲೇಜು ಅಧ್ಯಾಪನ ನಡೆಸಿ ವಿವಾಹದ ನಂತರ ಚೆನೈನಲ್ಲಿ ಕೆಲಕಾಲವಿದ್ದು ಮುಂದೆ ಹುಬ್ಬಳ್ಳಿಯಲ್ಲಿ ವಾಸವಿರುವ ಡಾ. ಸರ್ವಮಂಗಳಾ ಅಲ್ಲಿ ಉಪನ್ಯಾಸಕಿಯಾಗಿದ್ದಾರೆ.ಸರ್ವಮಂಗಳಾ ಅವರು ಅನೇಕ ರೀತಿಯ ಬರಹಗಳಲ್ಲಿ ತೊಡಗಿದ್ದಾರೆ. ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರತಿನಿಧಿಯಾಗಿದ್ದಾರೆ. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಅನೇಕ ಸಾಹಿತ್ಯ ಸಂಸ್ಕೃತಿ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಣೆ – ಸಂಯೋಜನೆಗಳನ್ನು ಮಾಡುತ್ತಿದ್ದಾರೆ. ಹಿಂದೂ ಸೇವಾ ಪ್ರತಿಷ್ಠಾನದ ವಿವಿಧ ವಲಯಗಳ ಕಾರ್ಯಗಳ ಸಂಘಟಕರಾಗಿ, ಯೋಗ, ಫಿಸಿಯೋ ಥೆರಪಿ, ಸಮಾಜ ಸೇವೆ ಮುಂತಾದ ಸಮಾಜ ಮುಖಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ಬಹುಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನನ್ನ ಬರಹ ಮತ್ತು ಕನ್ನಡ ಸಂಪದದ ಕೆಲಸಗಳಿಗೂ ಸರ್ವಮಂಗಳಾ ಅವರ ಸಹಕಾರ ಅಪಾರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರೈಯ ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ, ಹಿನ್ನೆಲೆ ಗಾಯಕಿ.

Wed Feb 1 , 2023
  ಸುರೈಯ ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ, ಹಿನ್ನೆಲೆ ಗಾಯಕಿ ಮತ್ತು ನೃತ್ಯ ಸಂಯೋಜಕಿ. ಇಂದು ಅವರ ಸಂಸ್ಮರಣಾ ದಿನ. ಸುರೈಯ 1929 ಜೂನ್ 18ರಂದು ಲಾಹೋರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿಲ್ಲ. ಹತ್ತನೆಯ ವಯಸ್ಸಿಗೆ ಅಭಿನಯಕ್ಕೆ ತೊಡಗಿದರು. ಹದಿನೈದನೆಯ ವರ್ಷಕ್ಕೆ ಪ್ರಸಿದ್ಧ ತಾರೆಯಾದರು. ಗುರು ಮುಖೇನ ಕಲಿಯದಿದ್ದರೂ ಶಾಸ್ತ್ರೀಯ ಸಂಗೀತವನ್ನು ಹಾಡಬಲ್ಲವಳಾಗಿದ್ದರು. ಪ್ರಸಿದ್ಧ ಗಾಯಕ ಸೈಗಲ್‍ರ ಮಧುರ ಸ್ವರಕ್ಕೆ ಮರುಳಾಗಿದ್ದರು. ಕಾನನ್-ಬಾಲಾ ಖುರ್ಷೀದರ ಹಾಡುಗಳೂ ಎಳವೆಯಲ್ಲಿ […]

Advertisement

Wordpress Social Share Plugin powered by Ultimatelysocial