ಶಿಗೆಲ್ಲ ಬ್ಯಾಕ್ಟೀರಿಯಾ ನಿಮ್ಮ ಜೀವಕ್ಕೆ ಕುತ್ತು ತರಬಹುದು!

ಕೇರಳದ (Kerala) ಕಾಸರಗೋಡಿನಲ್ಲಿ (Kasaragod) ಇತ್ತೀಚೆಗಷ್ಟೇ ಒಂದು ದುರ್ದೈವದ ಘಟನೆ ನಡೆದು ಹೋಗಿ ಬಾಲಕಿ (Girl) ಒಬ್ಬಳು ಜೀವ ತೆತ್ತ ಘಟನೆ ನಡೆದಿದೆ. ಆಹಾರ ವಿಷವಾಗಿದ್ದು, ಅದನ್ನು ಸೇವಿಸಿ 16 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ (Death). ಕಾಸರಗೋಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಲಕಿಯ ಸಾವಿನ ಘಟನೆಗೆ ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ ಕಾರಣ ಎಂದು ಹೇಳಲಾಗುತ್ತಿದೆ.
ಕೇರಳದ ರೆಸ್ಟೊರೆಂಟ್‌ನಲ್ಲಿ ಷವರ್ಮಾ ತಿಂದ ಸುಮಾರು 58 ಮಂದಿ ಈ ಬ್ಯಾಕ್ಟೀರಿಯಾ ಕಾರಣದಿಂದ ಅಸ್ವಸ್ಥಗೊಂಡಿದ್ದರು. ಬಾಲಕಿಯೊಬ್ಬಳು ಬಾಕ್ಟಿರಿಯಾ ಕಾರಣದಿಂದ ಮೃತಪಟ್ಟಿದ್ದಾಳೆ. ಇದನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇರಳದ ಕರಿವೇಲೂರಿನ ಪೇರಾಲ ನಿವಾಸಿ ಆಗಿರುವ 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಸೇವಿಸಿದ್ದಳು.
ಶವರ್ಮಾದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ, ಜೀವತೆತ್ತ ಬಾಲಕಿ
ಶವರ್ಮಾ ತಿಂದು ಬಾಲಕಿ ಮೃತಪಟ್ಟ ಅಂಗಡಿಯಲ್ಲಿ ಶವರ್ಮಾ ಸೇವಿಸಿದ್ದ, ಇತರ 50 ವಿದ್ಯಾರ್ಥಿಗಳು ಕೂಡ ತೀವ್ರ ಅಸ್ವಸ್ಥರಾಗಿದ್ದರು. ಶವರ್ಮಾದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಮತ್ತು ಇತರ ಮೂರು ಸೂಕ್ಷ್ಮಜೀವಿಗಳು ಕಲುಷಿತಗೊಂಡಿರುವುದನ್ನು ಕೋಝಿಕ್ಕೋಡ್ ಪ್ರಯೋಗಾಲ ಈಗಾಗಲೇ ದೃಢಪಡಿಸಿದೆ.
ಬೇಸಿಗೆಯ ದಿನಗಳು ಹಾನಿಕಾರಕ ಬ್ಯಾಕ್ಟೀರಿಯಾ ಪ್ರಸರಣಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ಅದಕ್ಕಾಗಿಯೇ ಉರಿಯಲ್ಲಿ ಬೇಯಿಸಿದ ಆಹಾರ ಬೇಸಿಗೆಯಲ್ಲಿ ಬೇಗ ಹಾಳಾಗುತ್ತದೆ. ಹಾಗಾಗಿ ಆಹಾರ ಬೇಯಿಸಿದ ಒಂದೆರಡು ಘಂಟೆಯಲ್ಲಿ ಫ್ರೆಶ್ ಇದ್ದಾಗಲೇ ತಿಂದು ಬಿಡಬೇಕು.
ಯಾಕೆಂದರೆ ಸೂಕ್ಷ್ಮ ಜೀವಿಗಳು ಆಹಾರದಲ್ಲಿ ಸಂತಾನೋತ್ಪತ್ತಿ ಮಾಡಿದರೆ ಮತ್ತು ವ್ಯಕ್ತಿಯು ಕಲುಷಿತ ಆಹಾರ ಸೇವನೆ ಮಾಡಿದರೆ ಅದು ಆಹಾರ ವಿಷವಾಗಲು ಕಾರಣವಾಗುತ್ತದೆ. ಇದನ್ನು ತಿಂದ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಹಾಗಾದರೆ ಶಿಗೆಲ್ಲ ಬ್ಯಾಕ್ಟೀರಿಯಾ ಎಂದರೇನು ಮತ್ತು ಅದು ಹೇಗೆ ಹರಡುತ್ತದೆ ಎಂದು ಇಲ್ಲಿ ತಿಳಿಯೋಣ.
ಶಿಗೆಲ್ಲ ಬ್ಯಾಕ್ಟೀರಿಯಾ ಎಂದರೇನು?
ಮೇಯೊ ಕ್ಲಿನಿಕ್ ಹೇಳುವ ಪ್ರಕಾರ, ಶಿಗೆಲ್ಲ ಸೋಂಕು ಒಂದು ರೀತಿಯ ಬ್ಯಾಕ್ಟೀರಿಯಾ ಕುಟುಂಬದಿಂದ ಉಂಟಾಗುವ ಕರುಳಿನ ಸೋಂಕು ಆಗಿದೆ. ಇದನ್ನು ಶಿಗೆಲ್ಲ ಎಂದು ಕರೆಯಲಾಗುತ್ತದೆ. ಶಿಗೆಲ್ಲ ಸೋಂಕಿನ ಮುಖ್ಯ ಲಕ್ಷಣವೆಂದರೆ ರಕ್ತಸಿಕ್ತ ಅತಿಸಾರ ಆಗಿದೆ.
ಶಿಗೆಲ್ಲಾ ತುಂಬಾ ಸಾಂಕ್ರಾಮಿಕ ಕಾಯಿಲೆ ಆಗಿದೆ. ಈ ಅಪಾಯಕಾರಿ ಶಿಗೆಲ್ಲಾ ಬ್ಯಾಕ್ಟೀರಿಯಾ ಕಾರಣದಿಂದ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇಂತಹ ಸಮಯದಲ್ಲಿ ಶಿಗೆಲ್ಲ ಸೋಂಕಿತ ವ್ಯಕ್ತಿಯ ಮಲದೊಂದಿಗೆ ಸಂಪರ್ಕಕ್ಕೆ ಬಂದರೆ ಸೋಂಕು ತಗುಲುತ್ತದೆ.
ಸಣ್ಣ ಪ್ರಮಾಣದ ಬ್ಯಾಕ್ಟೀರಿಯಾ ದೇಹ ಸೇರಿದಾಗ ಮತ್ತು ಮಗುವಿನ ಡಯಾಪರ್ ಬದಲಾಯಿಸಿದ ನಂತರ ಹಾಗೂ ಶೌಚಾಲಯಕ್ಕೆ ಹೋದ ನಂತರ ಸರಿಯಾಗಿ ಕೈ ತೊಳೆಯದೇ ಹಾಗೇ ಬಂದು ಆಹಾರ ಸೇವನೆ ಮಾಡುವವರಲ್ಲಿ ಶಿಗೆಲ್ಲಾ ಸೋಂಕು ತಗಲುತ್ತದೆ.
ಸೋಂಕಿತ ಆಹಾರ ಸೇವೆಯಿಂದಲೂ ಶಿಗೆಲ್ಲ ಬ್ಯಾಕ್ಟಿರಿಯಾ ಹರಡುತ್ತದೆ.
ಶಿಗೆಲ್ಲ ಸೋಂಕಿತ ಆಹಾರ ತಿನ್ನುವುದು, ಅಸುರಕ್ಷಿತ ನೀರು ಕುಡಿಯುವುದು, ಅದರಲ್ಲಿ ಈಜುವುದು, ತೊಳೆಯದ ಹಣ್ಣು ಮತ್ತು ತರಕಾರಿಗಳ ಸೇವನೆ ಹಾಗೂ ಬಳಕೆಯಿಂದಲೂ ಹರಡುತ್ತದೆ. ಆದಾಗ್ಯೂ, ಸೌಮ್ಯವಾದ ಪ್ರಕರಣಗಳು ಸಾಮಾನ್ಯವಾಗಿ ಒಂದು ವಾರದೊಳಗೆ ವಾಸಿ ಆಗುತ್ತವೆ.
ಆದರೆ ಒಂದು ವಾರದೊಳಗೆ ಸೋಂಕು ಸುಧಾರಣೆ ಆಗದಿದ್ದರೆ ಚಿಕಿತ್ಸೆ ಅಗತ್ಯ. ಆಗ ವೈದ್ಯರು ಹೆಚ್ಚಾಗಿ ಪ್ರತಿಜೀವಕಗಳನ್ನು ಶಿಫಾರಸು ಮಾಡುತ್ತಾರೆ.
ದುರ್ಬಲ ರೋಗ ನಿರೋಧಕ ಶಕ್ತಿ ಇರುವವರಿಗೆ ಸೋಂಕು ತಗಲುವ ಸಾಧ್ಯತೆ
ಮೇಯೊ ಕ್ಲಿನಿಕ್ ಪ್ರಕಾರ, ಶಿಗೆಲ್ಲ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಶಿಗೆಲ್ಲಕ್ಕೆ ಒಡ್ಡಿಕೊಂಡ ಒಂದು ಅಥವಾ ಎರಡು ದಿನಗಳ ನಂತರ ಕಾಣಿಸಿಕೊಳ್ಳುತ್ತವೆ. ಅವು ಅಭಿವೃದ್ಧಿಯಾಗಲು ಒಂದು ವಾರ ಸಮಯ ಬೇಕು.
ಗರ್ಭಿಣಿಯರು, ಐದು ವರ್ಷದೊಳಗಿನ ಮಕ್ಕಳು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ಸೋಂಕಿಗೆ ಹೆಚ್ಚು ಹಾಗೂ ಬಹುಬೇಗ ತುತ್ತಾಗುತ್ತಾರೆ ಎಂಬುದನ್ನು ನೆನಪಿಡಿ.
ಶಿಗೆಲ್ಲ ಬ್ಯಾಕ್ಟಿರಿಯಾ ಲಕ್ಷಣಗಳು
ಶಿಗೆಲ್ಲ ಸೋಂಕಿಗೆ ಒಳಗಾದಾಗ ಅತಿಸಾರ, ಹೊಟ್ಟೆ ನೋವು ಅಥವಾ ಸೆಳೆತ, ಜ್ವರ, ವಾಂತಿ ಮತ್ತು ವಾಕರಿಕೆ ಮುಂತಾದ ರೋಗ ಲಕ್ಷಣ ಕಾಣಿಸಿಕೊಳ್ಳುತ್ತವೆ.
ವೈದ್ಯರ ಬಳಿ ಯಾವಾಗ ಹೋಗಬೇಕು
ಇಲ್ಲಿ ತಿಳಿಸಲಾದ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇವುಗಳನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ. ಮಗುವಿಗೆ ಅತಿಸಾರ ತೀವ್ರವಾಗಿದ್ದರೆ ಅದು ರಕ್ತಸ್ರಾವ, ತೂಕ ನಷ್ಟ ಮತ್ತು ನಿರ್ಜಲೀಕರಣಕ್ಕೆ ಕಾರಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಪ್ರಭಾಸ್‌ ಅಭಿನಯಿಸುತ್ತಿರುವ 'ಪ್ರಾಜೆಕ್ಟ್‌ ಕೆ' ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸಲಿದ್ದಾರೆ.

Mon May 9 , 2022
   ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಕನ್ನಡದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ದೀಪಿಕಾ ಬಾಲಿವುಡ್ ನಲ್ಲಿ ಬ್ಯುಸಿಯೆಷ್ಟು ನಟಿ. ಈಗ ಇದೇ ನಟಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಸ್‌ ವೃತ್ತಿ ಜೀವನದಲ್ಲೇ ಈ ಸಿನಿಮಾ ಪ್ರಮುವಾಗಿದ್ದು, ಪ್ರಭಾಸ್ ಹಾಗೂ ದೀಪಿಕಾ ಕಾಂಬಿನೇಶನ್‌ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ ಈ ತಂಡಕ್ಕೆ ಈಗ ಮತ್ತೊಬ್ಬ ಬಾಲಿವುಡ್ ನಟಿ ಆಗಮನವಾಗಿದೆ. […]

Advertisement

Wordpress Social Share Plugin powered by Ultimatelysocial