ಹಿಜಾಬ್ ರಿಟ್ ಅರ್ಜಿಗೆ ಸಹಿಹಾಕಿದ್ದ ವಿದ್ಯಾರ್ಥಿನಿ ಶಿಫಾ ಮಾತನಾಡುತ್ತಾ, “ಅವರೆಲ್ಲಾ ನಮ್ಮ ಫ್ರೆಂಡ್ಸ್, ನಾವೆಲ್ಲಾ ಒಂದೇ

 

“ಹೈಕೋರ್ಟ್ ತೀರ್ಪು ಏನು ನೀಡುತ್ತೋ, ಅದರ ಪ್ರಕಾರ ನಾವು ನಡೆಯಬೇಕಾಗುತ್ತದೆ. ಹಿಜಾಬ್ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಗಳಿಗೆ ಗೌಪ್ಯ ಸ್ಥಳಗಳಲ್ಲಿ ಟ್ರೈನಿಂಗ್ ಅನ್ನು ನೀಡಲಾಗಿತ್ತು. ಮಕ್ಕಳೆಲ್ಲರೂ ಸಮಾನರು, ಕ್ಲಾಸ್ ರೂಂನಲ್ಲೇ ಹಿಜಾಬ್ ಬೇಕು ಎನ್ನುವುದು ಯಾಕೆ? ಇದನ್ನು ಆರಂಭಿಸಿದವರು ಯಾರು? ಆರು ಹೆಣ್ಣು ಮಕ್ಕಳಿಗೆ ಧಾರ್ಮಿಕ ಟ್ರೈನಿಂಗ್ ಅನ್ನು ಕೊಟ್ಟು ತಯಾರು ಮಾಡಲಾಗಿದೆ. ಟ್ರೈನಿಂಗ್ ಮುಗಿಸಿ ಹೊರಬಂದಾಗ, ಹಿಂದೂ ಹೆಣ್ಣೂ ಮಕ್ಕಳನ್ನು ಕಂಡರೆ ಆಕ್ರೋಶ ಬರುವ ರೀತಿ ಅವರಿಗೆ ತರಬೇತಿ ನೀಡಲಾಗಿದೆ”ಎನ್ನುವ ಗಂಭೀರ ಆರೋಪವನ್ನು ಉಡುಪಿ ಶಾಸಕ ರಘುಪತಿ ಭಟ್ ಮಾಡಿದ್ದರು.ಹಿಜಾಬ್ ರಿಟ್ ಅರ್ಜಿಗೆ ಸಹಿಹಾಕಿದ್ದ ವಿದ್ಯಾರ್ಥಿನಿ ಶಿಫಾಉಡುಪಿ, ಫೆ 10: ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಕಿಡಿ ರಾಜ್ಯದೆಲ್ಲಡೆ ಆವರಿಸುತ್ತಿದೆ, ಬುಧವಾರದಂದು (ಫೆ 9) ಏಕ ಸದಸ್ಯ ಪೀಠದಿಂದ ತೀರ್ಪು ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ.ಮೂರು ದಿನಗಳ ರಜೆ ಘೋಷಣೆ ವಿಸ್ತರಣೆಯಾಗುವ ಸಾಧ್ಯತೆಯಿದ್ದು ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರು ಸುಳಿವನ್ನು ನೀಡಿದ್ದಾರೆ.ಹಿಜಾಬ್ ಹೋರಾಟದ ಕಿಚ್ಚು ಸ್ವಲ್ಪಮಟ್ಟಿಗೆ ಕಮ್ಮಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಹದಿನಾಲ್ಕು ದಿನಗಳ ನಿಷೇಧಾಜ್ಞೆ ಜಾರಿಯಲ್ಲಿದೆ.ಮಂಡ್ಯದಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮುಸ್ಕಾನ್ ಎನ್ನುವ ವಿದ್ಯಾರ್ಥಿನಿಗೆ ‘ಐಕಾನ್ ಲೇಡಿ ಆಫ್ ಹಿಜಾಬ್’ ಎನ್ನುವ ಬಿರುದನ್ನು ಕೆಲವು ಸಂಘಟನೆಗಳು ನೀಡಿವೆ. ಈ ವಿದ್ಯಾರ್ಥಿನಿಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು.ಇವೆಲ್ಲದರ ನಡುವೆ, ಹಿಜಾಬ್ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಆರು ವಿದ್ಯಾರ್ಥಿನಿಗಳು, ಹಿಜಾಬ್ ಹಾಕದೇ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿದ್ಯಾರ್ಥಿನಿಗಳ ಪೈಕಿ ಕೆಲವರು ಈಗ ‘ನೋವಾಗುತ್ತಿದೆ’ ಎನ್ನುವ ಆತ್ಮವಿಮರ್ಶೆಯ ಮಾತನ್ನಾಡುತ್ತಿದ್ದಾರೆ.ಹಿಜಾಬ್ ವಿವಾದದ ಬಗ್ಗೆ ಇಂದು ಹೈಕೋರ್ಟ್ ಹೇಳಿದ್ದೇನುಹಿಜಾಬ್ ರಿಟ್ ಅರ್ಜಿಗೆ ಸಹಿಹಾಕಿದ್ದ ವಿದ್ಯಾರ್ಥಿನಿ ಶಿಫಾ ಮಾತನಾಡುತ್ತಾ, “ಅವರೆಲ್ಲಾ ನಮ್ಮ ಫ್ರೆಂಡ್ಸ್, ನಾವೆಲ್ಲಾ ಒಂದೇ ತಟ್ಟೆಯಲ್ಲಿ ಊಟ ಮಾಡಿಕೊಂಡು, ಸಾಮೂಹಿಕ ಭೋಜನವನ್ನು ಮಾಡಿಕೊಂಡಿದ್ದೆವು. ಇವರೆಲ್ಲಾ ಈಗ ನಮ್ಮ ವಿರೋಧಿಗಳು ಎಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇಂತಹ ದಿನಗಳು ನಮ್ಮ ಕಾಲೇಜು ಜೀವನದಲ್ಲಿ ಎದುರಿಸಬೇಕಾಗುತ್ತದೆ ಎಂದು ನಾವು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ” ಎಂದು ಶಿಫಾ ವಿಷಾದ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಡುಗೆ ಎಣ್ಣೆಯ ಗುಣಮಟ್ಟ ನಮ್ಮ ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತ!

Thu Feb 10 , 2022
ಆರೋಗ್ಯ, ಆಹಾರದ ವಿಷಯಕ್ಕೆ ಬಂದಾಗ ಯಾವ ರೀತಿಯ ಅಡುಗೆ ಎಣ್ಣೆ ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಯಾಕೆಂದರೆ ಅಡುಗೆ ಎಣ್ಣೆಯ ಗುಣಮಟ್ಟ ನಮ್ಮ ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಿದ್ದಾಗ ಅಡುಗೆಗೆ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ. ಇದರಿಂದ ಯಾವೆಲ್ಲಾ ರೀತಿ ಪ್ರಯೋಜನವಿದೆ. ಶುದ್ಧವಾದ, ಸಂಸ್ಕರಿಸದ ಮತ್ತು ಹೊಸದಾಗಿ ಕೊಯ್ಲು ಮಾಡಿದ ತೆಂಗಿನಕಾಯಿಗಳಿಂದ ಹೊರತೆಗೆಯಲಾದ ತಾಜಾ ತೆಂಗಿನ ಎಣ್ಣೆಯನ್ನು ಸೇವಿಸುವುದು ಅಡುಗೆಗೆ ಸೂಕ್ತವಾದ ಆಯ್ಕೆಯಾಗಿದೆ.ಇದು ಇತರ ಸಂಸ್ಕರಿಸಿದ ಸಸ್ಯಜನ್ಯ ಎಣ್ಣೆಗಳಿಗಿಂತ […]

Advertisement

Wordpress Social Share Plugin powered by Ultimatelysocial