ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ನಟಿ ಶಿಲ್ಪಾ ಅಯ್ಯರ್

ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. `ಜೊತೆ ಜೊತೆಯಲಿ’ ಖ್ಯಾತಿಯ ನಟಿ ಶಿಲ್ಪಾ ಎಂಗೇಜ್ ಆಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ ಜೊತೆ ಎಂಗೇಜ್ ಆಗಿದ್ದಾರೆ.

ಕುಟುಂಬಸ್ಥರು ಸೂಚಿಸಿದ ವರನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವೀಡಿಯೋ ಶೇರ್ ಮಾಡಿಕೊಳ್ಳುವ ಸಿಹಿಸುದ್ದಿ ನೀಡಿದ್ದಾರೆ. ಶಿಲ್ಪಾ- ಸಚಿನ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ.

ಸಚಿನ್ ವಿಶ್ವನಾಥ್ ಅವರು ಲಾಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇನ್ನೂ ಶಿಲ್ಪಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡ ಕನ್ನಡದ ನಟ ರಾಜ್ ಬಿ ಶೆಟ್ಟಿ

Fri Feb 17 , 2023
ಕನ್ನಡದ ಹೆಸರಾಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇದೀಗ ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ರಮ್ಯಾ ನಿರ್ಮಾಣದ ಚೊಚ್ಚಲು ಸಿನಿಮಾದ ಶೂಟಿಂಗ್ ಮುಗಿಸಿರುವ ರಾಜ್, ಮಲಯಾಳಂ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಇವರ ಚೊಚ್ಚಲು ಮಲಯಾಳಂ ಸಿನಿಮಾವಾಗಿದ್ದು, ಚಿತ್ರಕ್ಕೆ ರುಧಿರಂ ಎಂದು ಹೆಸರಿಡಲಾಗಿದೆ. ರುಧಿರಂ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿಶೋ ಲೋನ್ ಆಂಟೋನಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಫೆ. 14 […]

Advertisement

Wordpress Social Share Plugin powered by Ultimatelysocial