ಶಿವನನ್ನು ಅರ್ಥ ಮಾಡಿಕೊಂಡವರು, ಸೃಷ್ಟಿಯನ್ನು ಕೂಡ ಅರ್ಥೈಸಿಕೊಳ್ಳುತ್ತಾರೆ.

 

ಚಿಕ್ಕಬಳ್ಳಾಪುರ, ಜನವರಿ, 16: ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ವ್ಯಾಪ್ತಿಯ ಕೌರನಹಳ್ಳಿ ಬಳಿ ನಿರ್ಮಾಣವಾಗಿರುವ 112 ಎತ್ತರದ ಆದಿಯೋಗಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಆದಿಯೋಗಿ ಅವರನ್ನು ಪ್ರತ್ಯೇಕ್ಷ ದರ್ಶನ ಮಾಡುವಂತಹದ್ದು ಒಂದು ಸಾಧನೆಯಾಗಿದೆ.

ಅದನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆ ಮಾಡಿರುವುದು ನಮ್ಮ ಪುಣ್ಯ ಎಂದರು.

ಶಿವನನ್ನು ಅರ್ಥ ಮಾಡಿಕೊಂಡವರು, ಸೃಷ್ಟಿಯನ್ನು ಕೂಡ ಅರ್ಥೈಸಿಕೊಳ್ಳುತ್ತಾರೆ. ಹಾಗಯೇ ಹುಟ್ಟು ಸಾವು ನಡುವಿನ ಬದುಕು ಕ್ಷಣಿಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದೇಹ ಮನಸ್ಸು ಒಂದಾದಾಗ ಅಮೃತ ಗಳಿಗೆಯ ದರ್ಶನವಾದಂತೆ. ಅದು ಯೋಗ ಮತ್ತು ಸಾಧನೆಯಿಂದ ಬರುತ್ತದೆ. ಅಂತಹ ಸಂದರ್ಭದಲ್ಲಿ ಆದಿಯೋಗಿ ದರ್ಶನ ಮನುಷ್ಯನಿಗೆ ದಾರಿ ದೀಪವಾಗುತ್ತದೆ. ಅನುಭವದಲ್ಲಿ ಅಮೃತವಿದ್ದು, ಅಮೃತಕ್ಕೋಸ್ಕರ ಇಡೀ ಜೀವನವನ್ನು ತ್ಯಜಿಸಿರುವ ಗಣ್ಯರ ಇದ್ದಾರೆ ಎಂದು ತಿಳಿಸಿದರು.

ಆದಿಯೋಗಿ ಸ್ಥಾಪನೆ ಹಿಂದೆ ಬಹಳ ದೊಡ್ಡ ಪೂಜೆ, ಆಚರಣೆಯಿದೆ. ದೇಶಕ್ಕೆ ಬಹಳ ದೊಡ್ಡ ಚರಿತ್ರೆಯಿದೆ. ರಸ್ತೆ, ದೊಡ್ಡದೊಡ್ಡ ಕಟ್ಟಡಗಳಿಂದ ಆಗುವುದಲ್ಲ. ಆಚರಣೆ ಮಾಡುವ ವಿಧಿ ವಿಧಾನಗಳನ್ನು ಸದ್ಗುರು ಮಾಡಿದ್ದಾರೆ. ದೇಶದಲ್ಲಿ ಸಂಘರ್ಷ ಹೆಚ್ಚಾಗಿದ್ದು, ಅದನ್ನು ತೊಡೆದು ಹಾಕಲು ಸಮನ್ವಯ ಬೇಕಾಗಿದೆ. ಇನ್ಮುಂದೆ ಈ ಕ್ಷೇತ್ರ ಉತನ್ನತ ಮಟ್ಟಕ್ಕೆ ಬೆಳೆಯುತ್ತದೆ. ಕೃಷಿ, ವಿಜ್ಞಾನ, ತಂತ್ರಜ್ಞಾನದಲ್ಲಿ ಸದಾ ಕಾಲ ಅಭಿವೃದ್ಧಿ ಆಗುತ್ತದೆ. ಈ ಭೂಮಿ ಪೂಣ್ಯ ಭೂಮಿಯಾಗಲಿದೆ ಎಂದು ಆಶಿಸಿದರು.

5 ತಿಂಗಳಲ್ಲಿ ಆದಿಯೋಗಿ ಮೂರ್ತಿ ನಿರ್ಮಾಣಸದ್ಗುರು ಜಗ್ಗಿವಾಸುದೇವ್ ಮಾತನಾಡಿ, ಯೋಗ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಖ್ಯಾತಿ ಪಡೆದುಕೊಂಡಿದೆ. ಪ್ರತಿ ದೇಶದಲ್ಲೂ ಸಾಕಷ್ಟು ಮಂದಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯೋಗವು ಮನುಷ್ಯನ ಆರೋಗ್ಯ ಬೇಕಾಗಿರುವ ಅನುಕೂಲಗಳನ್ನು ಕಲ್ಪಿಸುತ್ತದೆ. ಕೇವಲ ಐದು ತಿಂಗಳಿನಲ್ಲಿ ಆದಿಯೋಗಿ ಮೂರ್ತಿ ನಿರ್ಮಾಣವಾಗಿದೆ. ಇದೊಂದು ಅಶ್ಚರಿಯ ಸಂಗತಿಯಾಗಿದೆ ಎಂದರು.

ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ

ಚಿಕ್ಕಬಳ್ಳಾಪುರ ನಮ್ಮ ಅಜ್ಜಿಯ ಊರಾಗಿದೆ. ಹಿಂದೆ ಇದನ್ನು ಕರವೆ ಬೆಟ್ಟ ಎಂದು ಕರೆಯುತ್ತಿದ್ದರು. ಆದರೆ ಈಗ ಕೆಲ ದುರ್ಯೋಧನನ ಭಕ್ತರು ಕೌರವರ ಬೆಟ್ಟ ಅಂತ ಕರೆಯುತ್ತಿದ್ದಾರೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.

ನಾಡಿನ ಸತ್ವವನ್ನು ಪ್ರದರ್ಶಿಸಿದೆ

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎರಡನೇ ಆದಿಯೋಗಿ ಮೂರ್ತಿ ಜಿಲ್ಲೆಯಲ್ಲಿ ಅನಾವಣಗೊಂಡಿರುವುದು ಸಂತಸದ ಸಂಗತಿಯಾಗಿದೆ. ಇದು ನಾಡಿನ ಸತ್ವವನ್ನು ಪ್ರದರ್ಶಿಸಿದೆ. ಇಶಾ ಸಂಸ್ಥೆಯಿಂದ ಮಾಡಲು ಮುಂದಾಗಿರುವ ಸಾಮಾಜಿಕ ಕೆಲಸಗಳಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ಕೆಲ ದಿನಗಳ ಹಿಂದೆ ನೀರು ತರುವ ಸಂದರ್ಭದಲ್ಲಿ ಅಡಚರಣೆ ಮಾಡಿದ್ದವರು ಈಗಲೂ ತೊಡಕು ಮಾಡಲು ಪ್ರಯತ್ನಿಸಿದ್ದರು. ಆದರೆ ಆದಿಯೋಗಿ ಎಲ್ಲಾ ಆಡಚಣೆಗಳನ್ನು ನಿವಾರಿಸುವ ಮೂಲಕ ನೆಲೆಗೊಂಡಿದ್ದಾರೆ ಎಂದು ಹೇಳಿದರು.

ನಾನು ಮೂಖ ಪ್ರೇಕ್ಷಕನಾಗಿದ್ದೇನೆ ಸದ್ಗುರು ಅವರು ವೈಯುಕ್ತಿಕ ಲಾಭಕ್ಕೆ ಈ ಕೆಲಸ ಮಾಡಿಲ್ಲ ಎಂದು ಭಾವಿಸುತ್ತೇನೆ. ಲೋಕ ಕಲ್ಯಾಣಕ್ಕಾಗಿ ಅವರನ್ನು ಅವರು ಅರ್ಪಿಸಿಕೊಂಡಿದ್ದಾರೆ. ಈಗ ಅವರು ನಮ್ಮ ಭಾಗದವರು ಆಗಿದ್ದಾರೆ ಎಂಬುದು ನಮ್ಮ ಹೆಮ್ಮೆಯಾಗಿದೆ. ಈ ಒಂದು ಕಾರ್ಯಸಾಧನೆಯಿಂದ ನಾನು ಮೂಖ ಪ್ರೇಕ್ಷಕನಾಗಿದ್ದೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ನಾಗೇಶ್, ಸಿ.ಸಿ.ಪಾಟೀಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

iPhone 14 Pro ರೀತಿಯಲ್ಲೇ ಇರುವ ಈ ಹೊಸ ಸ್ಮಾರ್ಟ್‌ಫೋನ್ ಬೆಲೆ 10,000 ರೂ. ಮಾತ್ರ!

Mon Jan 16 , 2023
ಆಪಲ್ ಕಂಪೆನಿಯ ಐಫೋನ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಎಂದರೆ ಕೈಗೆಟುಕದ ಹುಳಿದ್ರಾಕ್ಷಿ ಎಂಬುದನ್ನು ನಾವೆಲ್ಲರೂ ತಿಳಿಸಿದ್ದೇವೆ. ಆದರೆ, ಆಪಲ್ ಕಂಪೆನಿಯ ಇತ್ತೀಚಿನ ಹೈ-ಎಂಡ್ ಸ್ಮಾರ್ಟ್‌ಫೋನ್ ಹಾಗೂ 1,29,999 ರೂ. ಬೆಲೆಯ iPhone 14 Pro ಸ್ಮಾರ್ಟ್‌ಫೋನ್ ನಿಮಗೆ ಕೇವಲ 10,000 ರೂ.ಗೆ ದೊರೆಯಲಿದೆ ಎಂದರೇ ನೀವು ನಂಬಲೇಬೇಕು.! ಹೌದು, ಚೀನಾದ ಮೊಬೈಲ್ ತಯಾರಕ ಕಂಪೆನಿಯೊಂದು iPhone 14 Pro ಸಾಧನದ ವಿನ್ಯಾಸದಂತೆಯೇ ಕಾಣಿಸುತ್ತಿರುವ ತನ್ನ ಹೊಸ ಸ್ಮಾರ್ಟ್‌ಫೋನನ್ನು 10,000 ರೂ. ಬೆಲೆಯಲ್ಲಿ […]

Advertisement

Wordpress Social Share Plugin powered by Ultimatelysocial