ಶಿವಣ್ಣನ ಕೈಲಿ ಎರಡು ತಮಿಳು ಒಂದು ತೆಲುಗು ಸಿನಿಮಾ, ಎರಡರಲ್ಲಿ ಮೇನ್ ಲೀಡ್.

 

ನ್ನಡದ ಅತ್ಯಂತ ಬ್ಯುಸಿ ಸ್ಟಾರ್ ನಟ ಯಾರಾದರೂ ಇದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ಈ ವಯಸ್ಸಿನಲ್ಲೂ ಅವರ ಕೈಲಿ ಒಮ್ಮೆಗೆ ಕನಿಷ್ಟ ಆರೇಳು ಸಿನಿಮಾಗಳಿಗೂ ಹೆಚ್ಚೇ ಇರುತ್ತವೆ.ಶಿವಣ್ಣ ಖಾಲಿ ಕೂತ ಉದಾಹರಣೆಯೇ ಇಲ್ಲವೇನೋ. ಶಿವಣ್ಣನಿಗೆ ವಯಸ್ಸಾದಷ್ಟು ಅವಕಾಶಗಳು ಹೆಚ್ಚಾಗುತ್ತಿವೆ.ಅದರಲ್ಲೂ ನಾಯಕ ನಟನ ಅವಕಾಶಗಳೇ ಶಿವಣ್ಣನನ್ನು ಹುಡುಕಿ-ಹುಡುಕಿ ಬರುತ್ತಿವೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಶಿವಣ್ಣನಿಗೆ ಹಲವು ಸಿನಿಮಾ ಆಫರ್‌ಗಳು ಒಂದರ ಮೇಲೊಂದರಂತೆ ಬರುತ್ತಲೇ ಇವೆ.ಶಿವಣ್ಣ ಈಗಾಗಲೇ ತಮಿಳಿನ ‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಶಿವಣ್ಣನದ್ದು ಅತಿಥಿ ಪಾತ್ರವಷ್ಟೆ. ಆದರೆ ಇದರ ಹೊರತಾಗಿ ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಶಿವಣ್ಣರ ಮೆಚ್ಚಿನ ನಟರಲ್ಲಿ ಒಬ್ಬರಾಗಿರುವ ನಟ ಧನುಶ್ ಜೊತೆ ಶಿವರಾಜ್ ಕುಮಾರ್ ತಮಿಳಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಧನುಶ್ ಹಾಗೂ ಶಿವರಾಜ್ ಕುಮಾರ್ ಅವರು ಇಬ್ಬರದ್ದೂ ಪ್ರಮುಖ ಪಾತ್ರವಂತೆ. ”ನನಗೆ ಮೊದಲಿನಿಂದಲೂ ಧನುಶ್ ಎಂದರೆ ಇಷ್ಟ. ಈಗ ಇಂಥಹದ್ದೊಂದು ಅವಕಾಶ ದೊರೆತಾಗ ಬಿಡುವ ಮನಸಾಗಲಿಲ್ಲ” ಎಂದಿದ್ದಾರೆ ಶಿವಣ್ಣ.ಇದರ ಜೊತೆಗೆ ಹೊಸದಾಗಿ ತೆಲುಗು ಸಿನಿಮಾ ಒಂದನ್ನು ಸಹ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನೇ ನಾಯಕ. ಯುವ ನಟನೊಬ್ಬ ಇವರ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರದರೂ ಶಿವಣ್ಣನದ್ದೇ ಮೇನ್ ಲೀಡ್ ಪಾತ್ರವಂತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

6 ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿದ 'ಒಂದು' ಕೇಸ್.

Thu Dec 22 , 2022
ಆರು ವರ್ಷದಿಂದ ಪ್ರೀತಿಸಿದ್ದ ಜೋಡಿಯೊಂದು ಒಂದೇ ವೇಲ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಬ್ಬರ ಪ್ರೀತಿಯ ವಿಷಯ ತಿಳಿದಿದ್ದ ಎರಡೂ ಕುಟುಂಬಗಳು ಮದುವೆಗೆ  ಗ್ರೀನ್ ಸಿಗ್ನಲ್ ನೀಡಿದ್ದರು. ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕ ನಂತರ ಜೋಡಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿಸಿದ್ದು ಒಂದು ಪ್ರಕರಣ. ಒಂದು ತಿಂಗಳ ಹಿಂದೆ ಯುವಕನ ವಿರುದ್ಧ ದಾಖಲಾದ ಒಂದು ಪ್ರಕರಣ ಇಂದು ಇಬ್ಬರ […]

Advertisement

Wordpress Social Share Plugin powered by Ultimatelysocial