ಶಿವರಾಜ್ ಕುಮಾರ್! ಅಪ್ಪು, ನನಗೆ ಮತ್ತು ನಮ್ಮ ಕುಟುಂಬದವರಿಗೆ ಪ್ರೀತಿ ಹೆಚ್ಚು’

ಚಿಕ್ಕಬಳ್ಳಾಪುರ: ‘ನಂದಿ ಗ್ರಾಮ ಮತ್ತು ನಂದಿಬೆಟ್ಟದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ನಂದಿಬೆಟ್ಟ ಎಂದರೆ ನಮ್ಮ ತಂದೆ, ಅಪ್ಪು, ನನಗೆ ಮತ್ತು ನಮ್ಮ ಕುಟುಂಬದವರಿಗೆ ಪ್ರೀತಿ ಹೆಚ್ಚು’ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.ಮೈಸೂರಿನ ಶಕ್ತಿಧಾಮದ ಮಕ್ಕಳ ಜತೆ ಗುರುವಾರ ನಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮಕ್ಕಳ ಜತೆ ಶಿವರಾಜ್ ಕುಮಾರ್ ದಂಪತಿ ಭೋಗ ನಂದೀಶ್ವರ ದೇವಾಲಯ ಹಾಗೂ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು.ಇದೇ ಮೊದಲ ಬಾರಿಗೆ ಶಕ್ತಿಧಾಮದ ಮಕ್ಕಳು ಬೆಂಗಳೂರಿಗೆ ಬಂದಿದ್ದಾರೆ. ಶುಕ್ರವಾರ ಅವರು ಶಕ್ತಿಧಾಮಕ್ಕೆ ಮರಳುವರು. ನಮ್ಮ ತಂದೆ, ತಾಯಿ ಹಾಗೂ ಹಲವರು ಶಕ್ತಿಧಾಮವನ್ನು ಬೆಳೆಸಿದರು. ನಮಗೆ ಹತ್ತಿರವಾದ ಸಂಸ್ಥೆ ಇದು ಎಂದು ಹೇಳಿದರು.ಮಕ್ಕಳಿಗೆ ಶಕ್ತಿಧಾಮ ನಮ್ಮ ಮನೆ ಎನ್ನುವ ಭಾವನೆ ಬೆಳೆಸಬೇಕು. ಅವರಿಗೆ ಇದು ನಮ್ಮ ಮನೆ, ನಮ್ಮ ಕುಟುಂಬ ಎನ್ನುವ ಭಾವನೆ ಬರಬೇಕು. ಮಕ್ಕಳ ಜತೆ ಎಂದಿಗೂ ಇರುತ್ತೇವೆ. ಮಕ್ಕಳನ್ನು ಬರಿ ಓದುವುದಷ್ಟಕ್ಕೆ ಸೀಮಿತಗೊಳಿಸಬಾರದು. ಅವರಲ್ಲಿ ಅರಿವು ಮೂಡಿಸಬೇಕು ಎಂದರು.ಅಪ್ಪು (ಪುನೀತ್ ರಾಜ್‌ಕುಮಾರ್) ಇಲ್ಲ ಎನ್ನುವ ನೋವು ಎಂದಿಗೂ ಇರುತ್ತದೆ. ಅಪ್ಪು ಅಮರವಾಗಿ ಇರುತ್ತಾನೆ. ಜೇಮ್ಸ್ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ. ಡಬ್ಬಿಂಗ್ ಮಾಡುವಾಗ ಕಷ್ಟವಾಯಿತು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

150 ಮಕ್ಕಳು ಮೂರು ಬಸ್‌ಗಳಲ್ಲಿ ನಂದಿಗೆ ಬಂದಿದ್ದರು. ಭೋಗ ನಂದೀಶ್ವರ ದೇವಾಲಯದಲ್ಲಿ ದರ್ಶನ ಪಡೆದು ನಂದಿಬೆಟ್ಟಕ್ಕೆ ತೆರಳಿದರು. ಗೀತಾ ಶಿವರಾಜ್ ಕುಮಾರ್ ಮತ್ತಿತರರು ಇದ್ದರು.

Please follow and like us:

Leave a Reply

Your email address will not be published. Required fields are marked *

Next Post

SUPERSONIC JET:ಹೊಸ ಸೂಪರ್‌ ಸಾನಿಕ್ ಜೆಟ್ ಬಿಡುಗಡೆ;

Fri Feb 4 , 2022
ಚೀನಾದ ಏರೋಸ್ಪೇಸ್ ಸಂಸ್ಥೆ ಸ್ಪೇಸ್ ಟ್ರಾನ್ಸ್‌ಪೋರ್ಟೇಶನ್, ಬೀಜಿಂಗ್ ಮತ್ತು ನ್ಯೂಯಾರ್ಕ್ ನಡುವಿನ ಅಂತರವನ್ನು ಕ್ರಮಿಸಲು ಕೇವಲ ಒಂದು ಗಂಟೆ ತೆಗೆದುಕೊಳ್ಳುವಂತಹ ಸೂಪರ್‌ಸಾನಿಕ್ ಬಿಸಿನೆಸ್ ಜೆಟ್ ಆಗಿ ಬಳಸಲಾಗುವ ವಿಮಾನವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಬಾಹ್ಯಾಕಾಶ ಸಾರಿಗೆಯು ಕಳೆದ ವರ್ಷ ತನ್ನ ಸೂಪರ್ಸಾನಿಕ್ ಬಾಹ್ಯಾಕಾಶ ವಿಮಾನಕ್ಕಾಗಿ $46.3 ಮಿಲಿಯನ್ ಸಂಗ್ರಹಿಸಿದೆ ಎಂದು ಹೇಳಿದೆಈಗಿನ ಆಧುನೀಕ ಜಗತ್ತಿನ ಜೀವನದಲ್ಲಿ ಎಲ್ಲವೂ ಶೀಘ್ರವಾಗಿರಬೇಕು ಎನ್ನುವುದು ನಮ್ಮ ಆಲೋಚನೆ, ಆ ಜೀವನಕ್ಕೆ ಹೊಂದಿಕೊಳ್ಳವಂತೆ […]

Advertisement

Wordpress Social Share Plugin powered by Ultimatelysocial